Asianet Suvarna News Asianet Suvarna News

ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?

ಈರುಳ್ಳಿಯಿಂದ ಅನೇಕ ಉಪಯೋಗಗಳಿವೆ. ಇದು ಹೊಟ್ಟಿನ ಸಮಸ್ಯೆ ನಿವಾರಿಸಿ, ಕೂದಲು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ. ಅಷ್ಟಕ್ಕೂ ಕೂದಲಿಗೆ ಈರುಳ್ಳಿಯನ್ನು ಬಳಸುವುದು ಹೇಗೆ?

Effective way to use Onion for weight loss
Author
Bengaluru, First Published Mar 7, 2019, 10:50 AM IST

ಈರುಳ್ಳಿಯನ್ನೂ ಅಡುಗೆಯಲ್ಲಿ ಮಾತ್ರವಲ್ಲ ಸೌಂದರ್ಯ ಹೆಚ್ಚಿಸಿಕೊಳ್ಳಲೂ ಬಳಸಬಹುದು. ಈರುಳ್ಳಿ ರಸದಿಂದ ಮತ್ತು ಅದರ ರಸದಿಂದ ಕೂದಲಿನ ಹತ್ತು ಹಲವು ಸಮಸ್ಯೆಗಳು ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ. ಇದನ್ನು ನೀವು ಮನೆಯಲ್ಲಿ ಟ್ರೈ ಮಾಡಿ, ದಟ್ಟ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. 

ಕ್ಯಾನ್ಸರ್‌ಗೂ ಮದ್ದು ಬೆಳ್ಳುಳ್ಳಿ, ಈರುಳ್ಳಿ

  • ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅಥವಾ ಮಿಕ್ಸ್ ಮಾಡಿ, ಅದನ್ನು ಕೂದಲಿನ ಬುಡಕ್ಕೆ ಹಚ್ಚಿ. ಈರುಳ್ಳಿ ರಸ ಹಚ್ಚಿಕೊಳ್ಳುವ ಅರ್ಧ ಗಂಟೆಗೆ ಮೊದಲು ಬಿಸಿ ಟವೆಲಅನ್ನು ತಲೆಗೆ ಕಟ್ಟಿಕೊಂಡರೆ ರಸ ಚೆನ್ನಾಗಿ ಹೀರಲ್ಪಡುತ್ತದೆ. ಹೀಗೆ ಮಾಡಿದರೆ ಕೂದಲು ಉದುರೋ ಸಮಸ್ಯೆ ನಿವಾರಣೆಯಾಗುತ್ತದೆ. 
  • ಈರುಳ್ಳಿ ರಸದ ಜೊತೆ ಜೇನು ತುಪ್ಪ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನಿಧಾನವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಕೂದಲು ವಾಸನೆ ಬರೋದಿಲ್ಲ. 
  • 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ಇದರಿಂದ ಕೂದಲು ತುಂಡಾಗುವುದು ನಿಲ್ಲುತ್ತದೆ. ಇದರಿಂದ ತುರಿಕೆಯೂ ಕಡಿಮೆಯಾಗುತ್ತದೆ. 

ತೂಕ ಕರಗಿಸಲು ನೆಲ್ಲಿಕಾಯಿ ರಸ!

  • ಈರುಳ್ಳಿಯಿಂದ ತಯಾರಿಸಿದ ಸೂಪ್ ಸೇವಿಸುತ್ತಿದ್ದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ. ಅಂದರೆ ನೀವು ಸ್ಲಿಮ್ ಆಗಿ ಕಾಣಿಸೋದರಲ್ಲಿ ಸಂಶಯವಿಲ್ಲ. 
  • ತಲೆಗೆ ಸ್ನಾನ ಮಾಡುವಾಗ ಶ್ಯಾಂಪೂ ಹಾಕುವ ಮುನ್ನ ಈರುಳ್ಳಿಯನ್ನು ನೀರಿನಲ್ಲಿ ಕುದಿಸಿ ಅದರಿಂದ ತಲೆ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. 

Effective way to use Onion for weight loss

Follow Us:
Download App:
  • android
  • ios