Asianet Suvarna News Asianet Suvarna News

ಸವಣೂರು: ಮೃತ ರೈತ ಕುಟುಂಬಕ್ಕೆ ಸಂತ್ವಾನ ಹೇಳಿದ ಸಚಿವ ಬೊಮ್ಮಾಯಿ

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ|ರೈತರು ಎದೆಗುಂದಿ ಆತ್ಮಹತ್ಯೆಗೆ ಮುಂದಾಗಬಾರದು ಎಂದಸಚಿವ ಬಸವರಾಜ ಬೊಮ್ಮಾಯಿ|ಆತ್ಮಹತ್ಯಗೆ ಶರಣಾದ ರೈತ ಬಸವರಾಜ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ ವಿತರಿಸಲಾಗುವದು|

Minister Basavaraj Bommai Visit Dead Farmer House in Savanur
Author
Bengaluru, First Published Nov 2, 2019, 10:44 AM IST

ಸವಣೂರು[ಅ.2]: ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿದ ರೈತರಿಗೆ ಹಾಗೂ ಕುಟುಂಬಸ್ಥರಿಗೆ ಸರ್ಕಾರ ನೆರವಿನೊಂದಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದೆ. ಆದ್ದರಿಂದ, ರೈತರು ಎದೆಗುಂದಿ ಆತ್ಮಹತ್ಯೆಗೆ ಮುಂದಾಗಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. 

ತಾಲೂಕಿನ ಮನ್ನಂಗಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ರೈತ ಬಸವರಾಜ ಶಿವಪ್ಪ ದೇವಗಿರಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಂತ್ವಾನ ಹೇಳಿ ಮಾತನಾಡಿದರು. ನೆರೆ ಹಾವಳಿಯಿಂದಾಗಿ ತಾಲೂಕಿನ ನದಿ ದಂಡೆಯ ಗ್ರಾಮಗಳ ರೈತರು ಬಹಳಷ್ಟು ಪರದಾಡುವಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕುರಿತು ಈಗಾಲೇ ವರದಿಯನ್ನು ಪಡೆದುಕೊಳ್ಳಲಾಗಿದೆ. ರೈತರು ಎದೆಗುಂದದೇ ಕುಟುಂಬಸ್ಥರಿಗೆ ಹಾಗೂ ಇತರರಿಗೆ ಧೈರ್ಯ ಹೇಳಬೇಕು. ಆತ್ಮಹತ್ಯಗೆ ಶರಣಾದ ರೈತ ಬಸವರಾಜ ಕುಟುಂಬಕ್ಕೆ ಮುಂದಿನ ಒಂದು ವಾರದಲ್ಲಿ ಸರ್ಕಾರದಿಂದ 5 ಲಕ್ಷ ಪರಿಹಾರ ವಿತರಿಸಲಾಗುವದು ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಅನ್ನಪೂರ್ಣ ಮುಕನಮ್ಮನವರ, ತಹಸೀಲ್ದಾರ್ ವಿ.ಡಿ. ಸಜ್ಜನ್,ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ,ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ, ಮಾಜಿ ಅಧ್ಯಕ್ಷರುದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ಪ್ರಮುಖರಾದ ಮೋಹನ ಮೆಣಸಿನಕಾಯಿ, ಶಿವಪುತ್ರಪ್ಪ ಕಲಕೋಟಿ, ಎಂ.ಕೆ. ಬಿಜ್ಜೂರ, ಚಂದ್ರ ಆಡೂರ ಹಾಗೂ ಇತರರು ಇದ್ದರು.

Follow Us:
Download App:
  • android
  • ios