ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್...
ನೀರು ತುಂಬಿದ ಗಾಜಿನ ಟ್ಯಾಂಕ್ ಅದರೊಳಗೆ ಬಣ್ಣ ಬಣ್ಣದ ಮೀನುಗಳು ಯಾರಿಗೆ ತಾನೇ ಇಷ್ಟವಾಗುವುದ್ದಿಲ್ಲ? ಮೀನಿನ ಅಕ್ವೇರಿಯಂಗಳು ಮನೆ ಯಾ ಅಫೀಸಿನ ಅಂದ ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಕ್ವೇರಿಯಂ ಕಾಮನ್. ಮೀನಿನ ಟ್ಯಾಂಕ್ ಮನೆಯನ್ನು ಚೆಂದ ಕಾಣಿಸುವ ಇಂಟೀರಿಯರ್ ಡೆಕೊರೇಶನ್‌ನ ಒಂದು ವಸ್ತು ಮಾತ್ರ ಎಂದು ಭಾವಿಸಬೇಡಿ. ಮನೆಯ ವಾಸ್ತುವಿಗೆ ತುಂಬಾ ಮುಖ್ಯ ಈ ಅಕ್ವೇರಿಯಂಗಳು. ಅಕ್ವೇರಿಯಂ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಮೀನಿನ ಅಕ್ವೇರಿಯಂಗಳು ವಾಸ್ತು ದೋಷ ನಿವಾರಕ.
ಒತ್ತಡ, ಉದ್ವೇಗ, ರಕ್ತದೊತ್ತಡದ ಸಮಸ್ಯೆಯೇ ಮೀನಿನ ಅಕ್ವೇರಿಯಂ ಅನ್ನು ದಿಟ್ಟಿಸಿ ನೋಡಿ.
ಅಕ್ವೇರಿಯಂನ ಸೌಂದರ್ಯ ನರಗಳಿಗೆ ಮುದ ನೀಡಿ ಮೆದುಳನ್ನು ಶಾಂತಗೊಳಿಸುವ ಮೂಲಕ ಉದ್ವೇಗ ನಿವಾರಕ.
ಮೀನುಗಳು ಪಾಸಿಟಿವ್ ಎನರ್ಜಿ ಮತ್ತು ಟ್ಯಾಂಕ್‌ನ ನೀರು ಜೀವನದ ಪಾಸಿಟಿವ್ ಹರಿವಿನ ಪ್ರತಿನಿಧಿ.
ಟ್ಯಾಂಕ್ ಒಳಗೆ ಮೀನುಗಳು ವೇಗವಾಗಿ ಚಲಿಸಿದಾಗ ಪಾಸಿಟಿವ್ ಎನರ್ಜಿ ಸೃಷ್ಟಿಯಾಗುತ್ತದೆ.
ಬೇರೆ ಬೇರೆ ಬಣ್ಣದ ಮೀನುಗಳು ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸಿ ಸಂಪತ್ತು ಹಾಗೂ ಸಮೃದ್ಧಿಯನ್ನು ವೃದ್ಧಿಸುತ್ತವೆ.
ಮನೆಯ ಉಳಿದ ಭಾಗಗಳನ್ನು ಕನೆಕ್ಟ್ ಮಾಡುವ ಲೀವಿಂಗ್ ರೂಮ್ /ಡ್ರಾಯಿಂಗ್ ರೂಮ್ ಮತ್ತು ಅಫೀಸಿನ ರಿಸಪ್ಷನ್ ಏರಿಯಾದಲ್ಲಿ ಇರಲಿ ಅಕ್ವೇರಿಯಂ.
ಫಿಶ್‌ಟ್ಯಾಂಕ್‌ನ ನೀರು ಮನೆಯಲ್ಲಿ ಹಣದ ಹರಿವನ್ನು ಸೂಚಿಸುತ್ತದೆ. ಹೆಚ್ಚು ಮೀನುಗಳು ಇದ್ದರೆ ಆರ್ಥಿಕ ಸ್ಥಿತಿ ಉತ್ತಮ ಎಂಬ ನಂಬಿಕೆ.
ಈಶಾನ್ಯ ಮತ್ತು ಆಗ್ನೇಯ ಫಿಶ್‌ಟ್ಯಾಂಕ್‌ನ ದಿಕ್ಕುಗಳು. ಮೊದಲನೆಯದು ಮನೆಯ ಅರ್ಥಿಕತೆ ಹಾಗೂ ಎರಡನೆಯ ದಿಕ್ಕು ಸುಖ, ಸಂತೋಷದ ಧೋತಕ.
ಗೋಲ್ದ್ ಫಿಶ್ ಹೆಚ್ಚು ಶ್ರೇಯಸ್ಕರ.