ಚಿತ್ರರಂಗದಲ್ಲಿ ಮಿಂಚಿದ ಚಂದ್ರಿಕಾ ಬಿಗ್ಬಾಸ್ ಮನೆಗೆ ಬಂದು ಹೊದ್ಮೇಲೆ ಇಷ್ಟೊಂದು ಹಾಟ್ ಆದ್ರಾ?
'ಗೋಲ್ಮಾಲ್ ರಾಧಾಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಂದ್ರಿಕಾ ಬಿಗ್ಬಾಸ್ ಕನ್ನಡ ಸೀಸನ್-1ರ ಮೂಲಕ ಪ್ರೇಕ್ಷಕರ ಮುಂದ ಮತ್ತೆ ಪ್ರತ್ಯಕ್ಷವಾಗಿ, ಪ್ರೀತಿ ಗಿಟ್ಟಿಸಿಕೊಂಡವರು. ಬಿಗ್ಬಾಸ್ ನಂತರ ಅಲ್ಲೊಮ್ಮೆ ಇಲ್ಲೊಮ್ಮೆ ಸಿನಿಮಾಗಳಲ್ಲಿ, ಕಿರುತೆರೆ ತೀರ್ಪುಗಾತಿಯಾಗಿ ಕಾಣಿಸಿಕೊಂಡ ನಟಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಹಾಟ್ ಫೋಟೋ ಹೀಗಿದೆ...
ಕನ್ನಡ ಚಿತ್ರರಂಗದ ನಟಿ ಹಾಗೂ ನಿರ್ಮಾಪಕಿ ಚಂದ್ರಿಕಾ.
ಚಂದ್ರಿಕಾ ಅವರ ಮೂಲ ಹೆಸರು ಭಾರತಿ.
ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸ್ತಿ ವಹಿಸಿದ ಚಂದ್ರಿಕಾ ಶಾಲಾ ಹಾಗೂ ಕಾಲೇಜಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಸಿ ಹಲವಾರು ಬಹುಮಾನಗಳನ್ನು ಗಳಿಸಿದ್ದರು.
80ರ ದಶಕದಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ಮಿಂಚಿದ ನಟಿ.
ಚಂದ್ರಿಕಾಳಿಗೆ ಆರ್ಯನ್ ಎಂಬ ಮಗನಿದ್ದಾನೆ.
'ಸೈ' ರಿಯಾಲಿಟಿ ಶೋನಲ್ಲಿ ತೀರ್ಪುಗಾತಿಯಾಗಿ ಕಾಣಿಸಿಕೊಂಡಿದ್ದಾರೆ.
'ಡ್ಯಾನ್ಸಿಂಗ್ ಸ್ಟಾರ್-2' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು.
ಚಿತ್ರದಲ್ಲಿ ನಟಿಸಬೇಕೆಂದು ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿಯಾಗಿ, 'ಮಸಣದ ಹೂವು' ಚಿತ್ರದಲ್ಲಿ ಸಣ್ಣ ಪಾತ್ರ ಗಿಟ್ಟಿಸಿಕೊಂಡಿದ್ದರು.
ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಚಂದ್ರಿಕಾ 2010ರಲ್ಲಿ 'ಶ್ರೀ ನಾಗಶಕ್ತಿ' ಚಿತ್ರದ ಮೂಲಕ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.
2015ರಲ್ಲಿ 'ಕೆಂಡಸಂಪಿಗೆ' ಚಿತ್ರದಲ್ಲಿ ಮಾನ್ವಿತಾ ಹರೀಶ್ ತಾಯಿ ಪಾತ್ರದಲ್ಲಿ ನಟಿಸಿ, ಸಿನಿ ಪ್ರೇಮಿಗಳ ಗಮನ ಸೆಳೆದರು.