Asianet Suvarna News Asianet Suvarna News

ಅಯೋಧ್ಯೆ ತೀರ್ಪು: ಹೆಚ್ಚು ಭಾವನಾತ್ಮಕವಾಗೋದು ಬೇಡ ಎಂದ ಕಾಂಗ್ರೆಸ್ ಮುಖಂಡ

ಅಯೋಧ್ಯೆ ಯಾರ ಸೋಲೂ ಅಲ್ಲ, ಗೆಲುವೂ ಅಲ್ಲ, ಇದೊಂದು ನ್ಯಾಯದಾನ ಅಷ್ಟೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್‌. ಕೆ. ಪಾಟೀಲ್ ಹೇಳಿದ್ದಾರೆ. ಅತ್ಯಂತ ಹಳೆಯ ವಿವಾದಕ್ಕೆ ತೆರೆ ಬಿದ್ದಿದೆ. ಈ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗುವುದು ಬೇಡ ಎಂದು ಅವರು ಸೂಚಿಸಿದ್ದಾರೆ.

this is just a judgment says congress leader hk patil
Author
Bangalore, First Published Nov 9, 2019, 1:54 PM IST

ಗದಗ(ನ.09): ಅಯೋಧ್ಯೆ ಯಾರ ಸೋಲೂ ಅಲ್ಲ, ಗೆಲುವೂ ಅಲ್ಲ, ಇದೊಂದು ನ್ಯಾಯದಾನ ಅಷ್ಟೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್‌. ಕೆ. ಪಾಟೀಲ್ ಹೇಳಿದ್ದಾರೆ. ಅತ್ಯಂತ ಹಳೆಯ ವಿವಾದಕ್ಕೆ ತೆರೆ ಬಿದ್ದಿದೆ. ಈ ವಿಚಾರದಲ್ಲಿ ಹೆಚ್ಚು ಭಾವನಾತ್ಮಕವಾಗುವುದು ಬೇಡ ಎಂದು ಅವರು ಸೂಚಿಸಿದ್ದಾರೆ.

ದಶಕಗಳ ವಿವಾದಕ್ಕೆ ತೆರೆ ಬಿದ್ದಿದ್ದು, ಈ ಬಗ್ಗೆ ಗದಗದಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್‌. ಕೆ. ಪಾಟೀಲ್ ಅವರು, ಅಯೋಧ್ಯೆ ತೀರ್ಪು ಯಾರ ಸೋಲು, ಯಾರ ಗೆಲುವೂ ಅಲ್ಲ. ಇದೊಂದು ನ್ಯಾಯದಾನ ಅಷ್ಟೇ ಎಂದು ಅಭಿಪ್ರಾಯಿಸಿದ್ದಾರೆ.

ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!

ಹೆಚ್ಚಿಗೆ ಭಾವನಾತ್ಮಕವಾಗೋದು ಬೇಡ:

ಅತ್ಯಂತ ಹಳೆಯ ವಿವಾದಕ್ಕೆ ತೆರೆ ಬಿದ್ದಿದೆ. ಈ ವಿಷಯದಲ್ಲಿ ಹೆಚ್ಚಿನ ಭಾವನಾತ್ಮಕ ವಾಗುವುದು ಬೇಡ. ವ್ಯಾಜ್ಯಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗಬಾರದು. ಉಚ್ಛ ನ್ಯಾಯಾಲಯದ ತೀರ್ಪು ಸರ್ವರೂ ಸ್ವಾಗತಿಸಬೇಕು. ಜಾತಿ ಮತ ಪಕ್ಷ ಬೇಧ ಮರೆತು ಎಲ್ಲರೂ ಈ ತೀರ್ಪು ಸ್ವಾಗತಿಸಬೇಕು ಎಂದಿದ್ದಾರೆ. ರಾಷ್ಟವೇ ಒಪ್ಪಿ ಶಾಂತಿ ಭಾತೃತ್ವ ಭಾವನೆಯಿಂದ ಬದುಕಲು ಈ ತೀರ್ಪು ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

ರಾಮನ ಮಡಿಲಿಗೆ ಅಯೋಧ್ಯೆ: ಇವರೆಲ್ಲರ ಹೇಳಿಕೆಯಲ್ಲಿದೆ ಸಹೋದರತ್ವದ ವಿದ್ಯೆ!

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. 

ಕೊನೆಗೂ ರಾಮನಿಗೆ ಸೇರಿತು ಅಯೋಧ್ಯೆ; ಸಿನಿ ತಾರೆಯರು ಸ್ವಾಗತಿಸಿದ್ದು ಹೀಗೆ!

Follow Us:
Download App:
  • android
  • ios