Asianet Suvarna News Asianet Suvarna News

ಗದಗನಲ್ಲಿ ಸಂಭ್ರಮದ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ

ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಶ್ರೀಶೈಲ ಪೀಠದ ಜ. ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು| ಅಲಂಕೃತಗೊಂಡ ರಥದಲ್ಲಿ ಅನ್ನಪೂರ್ಣೆಶ್ವರಿ ದೇವಿಯ ಉತ್ಸವ ಮೂರ್ತಿಯನ್ನಿರಿಸಿ ದೇವಿಯ ಜಯಘೋಷದೊಂದಿಗೆ ಮಹಿಸ್‌ ಶ್ರದ್ಧೆ ಭಕ್ತಿಯೊಂದಿಗೆ ತೇರಳನ್ನೆಳೆದರು| ಬದಾಮಿ ತಾಲೂಕಿನ ನಂದಿಕೇಶ್ವರದ ಕುಮಾರೇಶ್ವರ ಭಜನಾ ಸಂಘ ಹಾಗೂ ಗದುಗಿನ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘ ಮತ್ತು ಗದುಗಿನ ಗುಲಾಬ ಬ್ಯಾಂಡ್‌ ಕಲಾತಂಡ ಅನ್ನಪೂರ್ಣೆಶ್ವರಿಯ ಮಹಾರಥೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು|

Annapurneshwari Fair Was Held at Gadag
Author
Bengaluru, First Published Oct 11, 2019, 8:12 AM IST

ಗದಗ(ಅ.11): ನಗ​ರ​ದ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಜೆ ಶ್ರೀಶೈಲ ಪೀಠದ ಜ. ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಚಾಲನೆ ನೀಡಿದರು.

ಅಲಂಕೃತಗೊಂಡ ರಥದಲ್ಲಿ ಅನ್ನಪೂರ್ಣೆಶ್ವರಿ ದೇವಿಯ ಉತ್ಸವ ಮೂರ್ತಿಯನ್ನಿರಿಸಿ ದೇವಿಯ ಜಯಘೋಷದೊಂದಿಗೆ ಮಹಿಸ್‌ ಶ್ರದ್ಧೆ ಭಕ್ತಿಯೊಂದಿಗೆ ತೇರಳನ್ನೆಳೆದರು. ಬದಾಮಿ ತಾಲೂಕಿನ ನಂದಿಕೇಶ್ವರದ ಕುಮಾರೇಶ್ವರ ಭಜನಾ ಸಂಘ ಹಾಗೂ ಗದುಗಿನ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘ ಮತ್ತು ಗದುಗಿನ ಗುಲಾಬ ಬ್ಯಾಂಡ್‌ ಕಲಾತಂಡ ಅನ್ನಪೂರ್ಣೆಶ್ವರಿಯ ಮಹಾರಥೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿಯ ಅಧ್ಯಕ್ಷ ಎಲ್‌.ಎಸ್‌. ನೀಲಗುಂದ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಮಂಗಲಾ ಯಾನಮಶೆಟ್ಟಿಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿ, ಮಹಿಳಾ ಸಮಿತಿ, ಶಿವಾನುಭವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಕ್ತಾದಿಗಳು ಅನ್ನಪೂರ್ಣೆಶ್ವರಿ ದೇವಿಯ ಮಹಾ ರಥೋತ್ಸವದ ಮುಂಚೂಣಿಯಲ್ಲಿದ್ದರು.

 ಒಕ್ಕಲಗೇರಿ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಮಠದವರಿಗೆ ಮಹಿಳಾ ಭಕ್ತರಿಂದ ಸಕಲ ವಾದ್ಯ ವೈಭವದೊಂದಿಗೆ ಕುಂಭೋತ್ಸವ ಬುಧವಾರ ಜರುಗಿತು. ಸಂಜೆ ನಡೆದ ಅನ್ನಪೂರ್ಣೆಶ್ವರಿಯ ಮಹಾರಥೋತ್ಸವಕ್ಕೆ ಮೆರಗು ತಂದರು.

ಶ್ರೀಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿಯ ಅಧ್ಯಕ್ಷ ಎಲ್‌.ಎಸ್‌. ನೀಲಗುಂದ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಮಂಗಲಾ ಯಾನಮಶೆಟ್ಟಿಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿ, ಮಹಿಳಾ ಸಮಿತಿ, ಶಿವಾನುಭವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಕ್ತಾದಿಗಳು ಕುಂಭೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶಾಂತಕ್ಕ ಹಿರೇವಡೆಯರ, ಶಾರದಾ ಬೊಮ್ಮಸಾಗರ, ಲೀಲಾವತಿ ಬಿಳೇಯಲಿ, ಪ್ರಮೀಳಾದೇವಿ ಬಳಿಗಾರ, ರೇಣುಕಾ ಕುಕನೂರ, ಕಮಲಾಕ್ಷಿ ಬೆಳ್ಳಿಕೊಪ್ಪ, ಗಿರಿಜಾ ನಾಲತ್ವಾಡಮಠ, ಕಸ್ತೂರಿಬಾಯಿ ಭಾಂಡಗೆ, ಶಾಂತಾ ಸಂಕನೂರ, ಶಿವಲೀಲಾ ಕುರಡಗಿ, ಸುಶೀಲಾ ಕೋಟಿ, ಯಶೋಧಾ ಗಿಡ್ನಂದಿ, ಸಂಧ್ಯಾ ಕೋಟಿ, ಶಾಂತಾಬಾಯಿ ಬಾಕಳೆ, ಜಯಶ್ರೀ ಹಿರೇಮಠ, ಸುಲೋಚನಾ ಐಹೊಳ್ಳಿ, ಲಲಿತಾ ಹಡಪದ, ಪ್ರೇಮಾ ಗ್ವಾರಿ, ಗಂಗಣ್ಣ ಕೋಟಿ, ಕೆ.ಎಚ್‌. ಬೇಲೂರ, ನಿಂಗಪ್ಪ ಬಳಿಗಾರ, ಎಸ್‌.ಬಿ. ಪಲ್ಲೇದ, ಎಸ್‌.ಡಿ. ಗೌಡಪ್ಪಗೌಡರ, ಮೋಹನ ಗ್ವಾರಿ, ಬಿ.ವ್ಹಿ. ಸಂಕನೂರ, ಡಾ. ಎಸ್‌.ಕೆ. ನಾಲವತ್ವಾಡಮಠ, ಬಿ.ಎಂ. ಯಾನಮಶೆಟ್ಟಿ, ವ್ಹಿ.ಎಚ್‌. ಪಾಟೀಲ, ಪಿ.ಟಿ. ನಾರಾಯಣಪೂರ, ಬಿ.ಬಿ. ಪಾಟೀಲ, ಬಿ.ಎಫ್‌. ಬಿದರಿ, ರಾಜೇಂದ್ರ ಗಡಾದ, ಎಸ್‌.ಡಿ. ಮರಿಗೌಡ್ರ, ಬಿ.ಎಲ್‌. ಹೊಸಳ್ಳಿಹಿರೇಮಠ, ಆರ್‌.ಎಫ್‌. ಅಗಸಿಮನಿ, ಎಂ.ಎಸ್‌. ಗಾಂಜಿ, ಸಿದ್ದಣ್ಣ ಜವಳಿ ಎ.ಕೆ. ಮುಧೋಳ, ಪ್ರಕಾಶ ಬಂಡಿ, ಗುರುನಾಥ ಹೊಸಮನಿ, ಜಿ.ಎಫ್‌. ಬಿದರಿ ಮುಂತಾದವರು ಕಾರ್ಯಕ್ರಮದಲ್ಲಿದ್ದರು.

Follow Us:
Download App:
  • android
  • ios