Asianet Suvarna News Asianet Suvarna News

ISL 2019: ಮೊದಲ ಗೆಲುವಿನ ವಿಶ್ವಾಸದಲ್ಲಿ ಬೆಂಗಳೂರು FC

ಆರಂಭಿಕ 2 ಪಂದ್ಯದಲ್ಲಿ ಡ್ರಾ ಸಾಧಿಸಿರುವ ಬೆಂಗಳೂರು FC, ಆತಿಥೇಯ ಜೆಮ್‌ಶೆಡ್‌ಪುರ FC ವಿರುದ್ಧ ಹೋರಾಟ ನಡಸೆಲಿದೆ. ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿರುವ ಬೆಂಗಳೂರು ಗೆಲುವಿನ ವಿಶ್ವಾಸದಲ್ಲಿದೆ.

ISL 2019 Bengaluru fc will face jamshedpur fc in high voltage match
Author
Bengaluru, First Published Nov 2, 2019, 7:28 PM IST

ಜೆಮ್‌ಶೆಡ್‌ಪುರ(ನ.02):  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಮೊದಲ ಗೆಲುವಿಗೆ ಹಾತೊರೆಯುತ್ತಿದೆ. ಆರಂಭಿಕ 2 ಪಂದ್ಯವನ್ನು ಡ್ರಾ ಮಾಡಿಕೊಂಡ ಬೆಂಗಳೂರು ಇದೀಗ ಜೆಮ್‌ಶೆಡ್‌ಪುರ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಜೆ.ಆರ್. ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನವೆಂಬರ್ 3 ರಂದು ನಡೆಯಲಿರವ ಈ ಪಂದ್ಯದಲ್ಲಿ ಬೆಂಗಳೂರು ಆತಿಥೇಯ ಜೆಮ್‌ಶೆಡ್‌ಪುರ FC ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲು​ಗ​ಳಲ್ಲಿ ಡ್ರಾ!

ಒಡಿಶಾ ಎಫ್ ಸಿ ಹಾಗೂ ಹೈದರಾಬಾದ್ ವಿರುದ್ಧ ನಡೆದ ಪಂದ್ಯಗಳಲ್ಲಿ ಜಯ ಗಳಿಸಿದ ಉಕ್ಕಿನ ತಂಡ ಆರು ಅಂಕ ಗಳಿಸೋ ಮೂಲಕ ಭರ್ಜರಿ ಆರಂಭ ಪಡೆದಿದೆ.  ಕೋಚ್ ಅಂಟೋನಿಯೋ ಇರಿಯೊಂಡೋ ಆಕ್ರಮಣಕಾರಿ ಫುಟ್ಬಾಲ್ ಮಾದರಿಯನ್ನು ಪ್ರದರ್ಶಿಸಿ ಯಶಸ್ಸು ಸಾಧಿಸಿದ್ದಾರೆ. ಮಿಡ್ ಫೀಲ್ಡ್ ವಿಭಾಗದಲ್ಲಿರುವ ಪಿಟಿ ತಂಡದ  ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎದುರಾಳಿ ತಂಡದ ಡಿಫೆನ್ಸ್ ವಿಭಾಗವನ್ನು ಚದುರಿಸಿ ಉತ್ತಮ ಅವಕಾಶವನ್ನು ನಿರ್ಮಿಸುವಲ್ಲಿ ಪಿಟಿ ನಿಸ್ಸೀಮರು. ಎರಡು ಪಂದ್ಯಗಳನ್ನಾಡಿ ಇನ್ನೂ ಜಯ ಕಾಣದಿರುವ ಬೆಂಗಳೂರು ತಂಡಕ್ಕೆ ಪಿಟಿ ದಿಟ್ಟ ಸವಾಲಾಗುವುದು ಸ್ಪಷ್ಟ.

ಇದನ್ನೂ ಓದಿ: ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

ಬೆಂಗಳೂರು  ವಿರುದ್ಧ ಆಡುವುದು ಕಠಿಣ ಸವಾಲು.  ಅಂಕ ಪಟ್ಟಿ ನೋಡಿಕೊಂಡು ತಂಡದ  ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಆದರೆ ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ, ಆದ್ದರಿಂದ ನಮಗೆ ಗೆಲ್ಲುವ ಅವಕಾಶ ಇದೆ. ನಾವು ನಮ್ಮ ಸಾಮರ್ಥ್ಯ ಹಾಗೂ ನಮ್ಮ ತಂಡದ ಬಗ್ಗೆ ಯೋಚಿಸಬೇಕು ವಿನಃ ಎದುರಾಳಿಯ ಬಗ್ಗೆ ಅಲ್ಲ,'' ಎಂದು  ಇರಿಯೊಂಡೋ ಹೇಳಿದ್ದಾರೆ. 

ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಋತುವಿನ ಮೊದಲ ಜಯದ  ಹುಡುಕಾಟದಲ್ಲಿದೆ.ಆಡಿರುವ ಎರಡೂ ಪಂದ್ಯಗಳಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿದೆ.    .

ಗೋವಾ ವಿರುದ್ಧ ನಾವು ಆಡಿರುವ ರೀತಿ ಖುಷಿಕೊಟ್ಟಿದೆ, ಕೊರೋ ಗೆ ಗೋಲು ಗಳಿಸಲು ಹೆಚ್ಚಿನ ಅವಕಾಶ ನೀಡಲಿಲ್ಲ. ನಾವು ನಾಲ್ಕು ಅಂಕಗಳನ್ನು ಕಳೆದುಕೊಂಡೆವು, ಆದರೆ ಈಗ ಮತ್ತುಷು ಬಲಿಷ್ಟರಾಗಿ ಬಂದಿದ್ದೇವೆ, ನಾವು ಜೇಮ್ಶೆಡ್ಪುರ  ವಿರುದ್ಧ ಇನ್ನಷ್ಟು ಉತ್ತಮವಾಗಿ ಆಡಲಿದ್ದೇವೆ,'' ಎಂದು ಬೆಂಗಳೂರು ಎಫ್ ಸಿ ಕೋಚ್ ಕಾರ್ಲೆಸ್  ಕ್ವಾಡ್ರರ್ಟ್ ಹೇಳಿದ್ದಾರೆ. 

Follow Us:
Download App:
  • android
  • ios