Asianet Suvarna News Asianet Suvarna News

ಫಿಟ್ನೆ​ಸ್‌ಗಾಗಿ ಕೊಹ್ಲಿ ಹಿಂಬಾಲಿಸಿದ ಚೆಟ್ರಿ!

ಕ್ರೀಡಾಪಟುವಿಗೆ ಫಿಟ್ನೆಸ್ ಬಹುಮುಖ್ಯ. ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಕ್ರಾಂತಿ ಮಾಡಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಇತರ ಕ್ರೀಡಾಪಟುಗಳಿಗೂ ಮಾದರಿಯಾಗಿದ್ದಾರೆ. ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯನ್ನು ಅನುಸರಿಸುತ್ತಿದ್ದಾರೆ.

India football captain Sunil Chhetri turns vegan after virat kohli
Author
Bengaluru, First Published Oct 13, 2019, 11:35 AM IST

ಕೋಲ್ಕ​ತಾ(ಅ.13): ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಫಿಟ್ನೆ​ಸ್‌ ಸುಧಾ​ರಣೆ​ಗಾ​ಗಿ ವೀಗನ್‌ ಆಹಾರ ಪದ್ಧ​ತಿ​ ಅಳ​ವ​ಡಿ​ಸಿ​ದ್ದಾರೆ. ಕಳೆದ ವರ್ಷ ಭಾರತ ಕ್ರಿಕೆಟ್‌ ನಾಯಕ ವಿರಾಟ್‌ ಕೊಹ್ಲಿ ವೀಗನ್‌ ಆಗಿದ್ದು, ಈ ಸಾಲಿಗೆ ಚೆಟ್ರಿ ಸೇರಿ​ದ್ದಾ​ರೆ. 

ಇದನ್ನೂ ಓದಿ: ಮೆಸ್ಸಿ ದಾಖಲೆ ಮುರಿದ ನಾಯಕ ಸುನಿಲ್ ಚೆಟ್ರಿ!

‘ನಾನು ವೀಗನ್‌ ಆಗಿ​ದ್ದೇ​ನೆ. ಮಾಂಸ, ಹಾಲಿನ ಉತ್ಪ​ನ್ನ​ಗ​ಳನ್ನು ತಿನ್ನು​ವು​ದಿ​ಲ್ಲ. ಇದು ಪಚ​ನ​ಕ್ರಿ​ಯೆ ಹೆಚ್ಚಿ​ಸಲು ನೆರ​ವಾ​ಗಿ​ದೆ’ ಎಂದು ಚೆಟ್ರಿ ತಿಳಿ​ಸಿ​ದ​ರು. ‘2010ರಲ್ಲಿ ಅ​ಮೆ​ರಿ​ಕದ ಕಾನ್ಸಾ​ಸ್‌​ ಕ್ಲಬ್‌ನ​ಲ್ಲಿ​ ವೀಗನ್‌ ಬಗ್ಗೆ ತಿಳಿಯಿತು. ಆದರೆ 2013ರಲ್ಲಿ ಸ್ಪೋರ್ಟಿಂಗ್‌ ಲಿಸ್ಬನ್‌ ಸೇರಿದ್ದಾಗ ಯುರೋ​ಪ್‌​ನಲ್ಲಿ ಒಂದೇ ಆಹಾರ ಪದ್ಧತಿ ಗಮ​ನಿ​ಸಿ​ದೆ. ಆ ಬಳಿಕ ವೀಗನ್‌ ಗಂಭೀ​ರ​ವಾಗಿ ಪರಿ​ಗ​ಣಿ​ಸಿ​ದೆ’ ಎಂದ​ರು.

ಇದನ್ನೂ ಓದಿ: ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮುಂದುವರಿಸಿದ ಸುನಿಲ್ ಚೆಟ್ರಿ

ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಮಟ್ಟ ಹೆಚ್ಚಿಸಿದ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲಲಿದೆ. ಇತರ ಕ್ರಿಕೆಟ್ ತಂಡಕ್ಕೆ ಹೋಲಿಸಿದರೆ ಭಾರತೀಯ ಕ್ರಿಕೆಟಿಗರ ಫಿಟ್ನೆಸ್ ಅತ್ಯುತ್ತಮವಾಗಿದೆ. ಯೋಯೋ ಟೆಸ್ಟ್ ಕಡ್ಡಾಯ ಸೇರಿದಂತೆ ಹಲವು ಸುಧಾರಣೆಗಳ ಜಾರಿಗೆ ಕೊಹ್ಲಿ ಕಾರಣರಾಗಿದ್ದಾರೆ. ಕೊಹ್ಲಿ ಫಿಟ್ನೆಸ್ ಕ್ರಾಂತಿಯನ್ನು ಇದೀಗ ಇತರ ಕ್ರೀಡಾಪಟುಗಳು ಅನುಸರಿಸುತ್ತಿದ್ದಾರೆ.

Follow Us:
Download App:
  • android
  • ios