Asianet Suvarna News Asianet Suvarna News

ಕೇಸರಿಗೇಕೆ ಇಷ್ಟು ಬೆಲೆ? ಆರೋಗ್ಯಕ್ಕೇಕೆ ಬೇಕಿದು?

ಹುಟ್ಟೋ ಮಗು ಬೆಳ್ಳಗಾಗಲಿ ಎಂದು ಗರ್ಭಿಣಿಯರು ತಪ್ಪದೇ ಹಾಲಿಗೆ ಕೇಸರಿ ಹಾಕಿ ಕುಡಿಯುತ್ತಾರೆ. ವಿಪರೀತ ಬೆಲೆ ಬಾಳುವ ಈ ಕೇಸರಿ ಅದ್ಹೇಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ? ಅಷ್ಟಕ್ಕೂ ಈ ಕೇಸರಿಗೇಕೆ ಇಷ್ಟು ಬೆಲೆ? ಇಲ್ಲಿದೆ ಮಾಹಿತಿ...

Why saffron is too expensive and why it is required to health
Author
Bengaluru, First Published Oct 8, 2019, 5:00 PM IST

ಬಣ್ಣ ಹಾಗೂ ಅದರ ಸ್ಟ್ರೆಕ್ಚರ್‌ನಿಂದಲೇ ಆಕರ್ಷಿತವಾಗುವ ಕೇಸರಿಗೆ ಮಸಾಲೆ ಪದಾರ್ಥಗಳಲ್ಲಿಯೇ ರಾಜನ ಸ್ಥಾನವಿದೆ. ಕಾಶ್ಮೀರದಂಥ ಪ್ರದೇಶದಲ್ಲಿ ಮಾತ್ರ ಬೆಳೆಯುವ ಈ ಮಸಾಲೆ ಆರೋಗ್ಯಕ್ಕೂ ಒಳ್ಳೆಯದು. ಬೆಳೆಯುವ ವಿಧಾನ ಹಾಗೂ ಕುಯ್ಲಿ ಸ್ವಲ್ಪ ಕಷ್ಟವಾಗಿರುವುದರಿಂದ ಇದಕ್ಕೆ ದುಬಾರಿ ಬೆಲೆ. 

ಇಂಥ ಕೇಸರಿಯ ಟಾಪ್ 5 ಪ್ರಯೋಜನಗಳು ಇಲ್ಲಿವೆ....

ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಿವೆ
ಜೀವಕೋಶಗಳ ವಿಷ ತೆಗೆಯುವಂಥ ಆ್ಯಂಟಿ ಆಕ್ಸಿಡೆಂಟ್ಸ್ ಗುಣ ಈ ಕೇಸರಿಯಲ್ಲಿ ಹೆಚ್ಚಿವೆ. ಹಾನಿಗೊಳಗಾಗುವ ಮೆದುಳಿನ ಜೀವಕೋಶಗಳನ್ನು ಇದು ತಡೆಯುತ್ತದೆ. ಖಿನ್ನತೆ ವಿರುದ್ಧವೂ ಇದು ಹೋರಾಡಬಲ್ಲದು. ಪಚನ ಶಕ್ತಿಯನ್ನು ಹೆಚ್ಚಿಸಿ, ತೂಕ ಇಳಿಸಲು ಇದು ಸಹಕಾರಿ. 

ಕ್ಯಾನ್ಸರ್ ವಿರುದ್ಧವೂ ಹೋರಾಡಬಲ್ಲದು...
ಜೀವಕೋಶವನ್ನು ಹಾನಿಗೊಳಿಸುವಂಥ ಗುಣ ಈ ಕೇಸರಿಯಲ್ಲಿದ್ದು, ಕ್ಯಾನ್ಸರ್ ಕಣಗಳನ್ನೂ ದೇಹದಿಂದ ಹೊರ ಹಾಕಬಲ್ಲದು. ಚರ್ಮ, ಅಸ್ಥಿ ಮಜ್ಜೆ, ಶ್ವಾಸಕೋಶ, ಸ್ತನ, ಗರ್ಭಕಂಠ ಹಾಗೂ ಇತರೆ ಕ್ಯಾನ್ಸರ್ ಜೀವಕೋಶಗಳನ್ನೂ ಇದು ಸರಿ ಮಾಡಬಲ್ಲದು. 

ಪಿಎಂಎಸ್ ರೋಗವನ್ನು ಗುಣಪಡಿಸುತ್ತೆ...
ಮಟ್ಟಿಗೆ ಸಂಬಂಧಿಸಿದ ರೋಗಗಳನ್ನೂ ಇದು ಕಡಿಮೆ ಮಾಡಬಲ್ಲದು. ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸುವ ರೋಗವನ್ನೂ ಇದು ಕಡಿಮೆ ಮಾಡುತ್ತೆ. ಮನಸ್ಸಿನ ಕಿರಿಕಿರಿ, ತಲೆ ನೋವು, ಬಯಕೆ, ನೋವು ಹಾಗೂ ಒತ್ತಡವನ್ನು ಕೇಸರಿ ನಿವಾರಿಸಿಕೊಳ್ಳಬಹುದು. 

Why saffron is too expensive and why it is required to health

ಹೃದ್ರೋಗಕ್ಕೂ ಇದು ಮದ್ದು
ರಕ್ತದಲ್ಲಿರುವ ಕೊಬ್ಬಿನಾಂಶವನ್ನು ಕೇಸರಿ ಕರಗಿಸುತ್ತದೆ ಎಂಬುದನ್ನು ಪ್ರಾಣಿ ಮತ್ತು ಟೆಸ್ಯ್ ಟ್ಯೂಬ್ ಅಧ್ಯಯನ ತಿಳಿಸಿದೆ. ರಕ್ತನಾಳ ಹಾಗೂ ಅಪಧಮನಿಯಲ್ಲಿ ಉಂಟಾಗುವ ಅಡಚಣೆಯನ್ನೂ ಈ ಮಸಾಲೆ ಸರಿ ಮಾಡಬಲ್ಲದು. 

ಮಿಲ್ಕೀ ಬ್ಯೂಟಿಗಾಗಿ ಕೇಸರಿ

ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸುತ್ತದೆ...
ಅಲ್ಜಮೇರ್ ರೋಗದಿಂದ ಉಲ್ಬಣಿಸುವ ಮರೆಗುಳಿತನ್ನು ಕಡಿಮೆ ಮಾಡಿ, ಜ್ಞಾಪಕ ಶಕ್ತಿ ಹೆಚ್ಚುವಂತೆ ಮಾಡುವ ಸಾಮರ್ಥ್ಯವೂ ಈ ಕೇಸರಿಗಿದೆ. ಗರ್ಭಿಣಿಯರು ಕೇಸರಿ ಹಾಲು ಕುಡಿದರೆ, ಮಗುವಿನ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಲಾಗುತ್ತದೆ. 

"

Follow Us:
Download App:
  • android
  • ios