Asianet Suvarna News Asianet Suvarna News

ಚಪಾತಿ ತಿನ್ನೋದ್ರಿಂದ ಸಿಗುತ್ತೆ ಹಲವಾರು ಪ್ರಯೋಜನ!

ಆಯಾ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ ಭಾರತದಲ್ಲಿ ಆಹಾರ ಪದ್ಧತಿ ಇದೆ. ಅದನ್ನು ಅಂತೆಯೇ ಪಾಲಿಸುವುದು ಪ್ರತಿಯೊಬ್ಬರಿಗೂ ಒಳಿತು. ಆದರೆ, ಈಗೀಗ ಡಯಟ್ ಹೆಸರಲ್ಲಿ ಚಪಾತಿ ತಿನ್ನುವುದು ಹೆಚ್ಚುತ್ತಿದೆ. ಇದರಿಂದೇನು ಲಾಭ?

6 Health Benefits of Eating Chapati
Author
Bengaluru, First Published Mar 7, 2019, 11:32 AM IST

ಭಾರತೀಯರ ಸಾಮಾನ್ಯ ಆಹಾರ ಚಪಾತಿ. ಪ್ರತಿ ಮನೆಯಲ್ಲಿಯೂ ಇದನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹವಿದ್ದರೆ ಇದೇ ಫುಡ್. ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತೆನ್ನುತ್ತಾರೆ. 

  • ಚಪಾತಿಯಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಮ್ಯಾಗ್ನೀಸ್, ಸಿಲಿಕಾನ್, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಇನ್ನಿತರ ಅಂಶಗಳಿವೆ. ಇವು ಮನುಷ್ಯ ಆರೋಗ್ಯದಿಂದಿರಲು ಸಹಕರಿಸುತ್ತದೆ. 
  • ಸ್ಕಿನ್‌ಗೂ ಗೋಧಿ ಬೇಕು. ಇದರಲ್ಲಿರುವ ಸತು ಮತ್ತು ಇನ್ನಿತರ ಅಂಶಗಳು ಸ್ಕಿನ್ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಇದರಿಂದ ಸ್ಕಿನ್ ಗ್ಲೋ ಆಗುತ್ತದೆ. 
  • ಪ್ರತಿದಿನ ಮುಂಜಾನೆ 2 ಮೊದಲಿನ ದಿನ ಉಳಿದ ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ. 

6 Health Benefits of Eating Chapati

  • ಚಪಾತಿ ಮತ್ತು ಹಾಲು ಸೇವನೆ ಗ್ಯಾಸ್ಟ್ರಿಕ್‌ಗೆ ಒಳ್ಳೆ ಮದ್ದು. 
  • ಚಪಾತಿಯ ಪೌಷ್ಟಿಕಾಂಶಗಳು ಫಿಟ್ ಆಗಿರಲು ಸಹಕರಿಸುತ್ತದೆ. ಅಲ್ಲದೆ ಹೆಚ್ಚು ಸುಸ್ತು, ಆಯಾಸ ಉಂಟಾಗುವುದಿಲ್ಲ. 
  • ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯದಿಂದಿರಲು ಸಹಕರಿಸುತ್ತದೆ. 
  • ಗೋಧಿ ಚಪಾತಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಜೊತೆಗೆ ಕೊಲೆಸ್ಟ್ರಾಲ್ ದೇಹ ಸೇರುವುದಿಲ್ಲ. 

ತ್ವಚೆಗೂ, ಹೃದಯಕ್ಕೂ ಮೀನೆಂಬ ಮದ್ದು....

Follow Us:
Download App:
  • android
  • ios