Asianet Suvarna News Asianet Suvarna News

ಈ ರಾಶಿಯವರೊಡನೆ ಡೇಟ್ ಹೋಗುವ ಮುನ್ನ ಎರಡು ಬಾರಿ ಯೋಚಿಸಿ!

ಕೆಲವರೊಂದಿಗೆ ಡೇಟ್ ಮಾಡುವಾಗ ಇವರೇಕಪ್ಪಾ ಹೀಗೆ, ಯಾವುದನ್ನೂ ನಂಬಲ್ಲವಲ್ಲ, ಯಾವುದಕ್ಕೂ ಒಪ್ಪಲ್ಲ, ಎಲ್ಲದಕ್ಕೂ ವಾದಿಸುತ್ತಾರೆ, ನಿರ್ಧಾರ ತೆಗೆದುಕೊಳ್ಳೋಕೆ ಸಿಕ್ಕಾಪಟ್ಟೆ ಸಮಯ ತಗೋತಾರೆ, ಮಾತುಮಾತಿಗೆ ಜಗಳವಾಡ್ತಾರೆ, ಅನುಮಾನಿಸ್ತಾರೆ ಎಂದೆಲ್ಲ ಅನಿಸಿರಬಹುದು. ಅವರು ಹಾಗಿರಲು ಅರು ಹುಟ್ಟಿದ ರಾಶಿ ಕಾರಣವಿರಬಹುದು. 

6 zodiac signs that you should think twice before dating seriously
Author
Bangalore, First Published Nov 13, 2019, 2:11 PM IST

ಕೆಲವರು ರೊಮ್ಯಾನ್ಸ್, ಕಮಿಟ್‌ಮೆಂಟ್, ಮದುವೆ ಎಂದರೆ ಸಂತೋಷದಲ್ಲಿ ಕುಣಿದಾಡುತ್ತಾರೆ. ಆದರೆ ಮತ್ತೆ ಕೆಲವರಿಗೆ ಕಮಿಟ್‌ಮೆಂಟ್ ಎಂಬ ಪದವೇ ಹೆದರಿಸುತ್ತದೆ. ಫ್ಲರ್ಟ್ ಮಾಡಿಕೊಂಡಿರುವುದು ಓಕೆ, ಮದುವೆ ಎಲ್ಲ ಯಾಕೆ ಎಂಬ ಪ್ರಶ್ನೆ ಅವರದು. ಮತ್ತೆ ಕೆಲವರಿಗೆ ಕೆಲವು ಬಾರಿ ಅವರ ಸಂಗಾತಿ ಪ್ರಾಮುಖ್ಯರೇ ಅಲ್ಲ. ಪ್ರೀತಿ, ಮದುವೆ ಎಂಬ ವಿಷಯಕ್ಕೆ ಬಂದರೆ ಒಬ್ಬೊಬ್ಬರು ಒಂದೊಂದು ರೀತಿ ಇರಲು ಕಾರಣವಾದರೂ ಏನು? ಹುಟ್ಟುಗುಣ, ಅನುಭವ ಅಂತೆಲ್ಲ ಕಾರಣಗಳನ್ನು ಪಟ್ಟಿ ಮಾಡುತ್ತಿದ್ದರೆ ಆ ಪಟ್ಟಿಗೆ ರಾಶಿಯನ್ನೂ ಸೇರಿಸಿ.

ಹೌದು, ಪ್ರೀತಿ ಹಾಗೂ ಸಂಬಂಧದ ವಿಷಯಕ್ಕೆ ಬಂದರೆ ಪ್ರತಿ ರಾಶಿಯವರಲ್ಲೂ ಕೆಲವೊಂದಿಷ್ಟು ಪಾಸಿಟಿವ್, ಮತ್ತೊಂದಿಷ್ಟು ನೆಗೆಟಿವ್ ಸ್ವಭಾವಗಳಿರುತ್ತವೆ. ನೀವೇನಾದರೂ ಈ ರಾಶಿಯವರನ್ನು ಡೇಟ್ ಮಾಡುತ್ತಿದ್ದರೆ, ಅವರನ್ನು ಅರ್ಥ ಮಾಡಿಕೊಳ್ಳಲು ಆಗುವಂಥ ಕೆಲ ವಿಷಯಗಳು ಇಲ್ಲಿವೆ ಓದಿ...

ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

ಧನು

ಧನು ರಾಶಿಯವರಿಗೆ ಸ್ವಾತಂತ್ರ್ಯವಾಗಿರುವುದು ಎಲ್ಲಕ್ಕಿಂತ ಮುಖ್ಯ. ಹಾಗಾಗಿ ಸಂಬಂಧವೊಂದಕ್ಕೆ ಕಮಿಟ್  ಆಗುವುದರಿಂದ ತಮ್ಮ ಹಾರುವ ರೆಕ್ಕೆಗಳನ್ನು ಕಟ್ಟಿಹಾಕಿದಂತಾಗುತ್ತದೆಂಬುದು ಅವರ ನಿಲುವು. ಇವರು ಯಾವಾಗಲೂ ಹೊಸತನ್ನು ಹುಡುಕುತ್ತಲೇ ಇರುತ್ತಾರೆ ಹಾಗೂ ಯಾವುದಾದರೂ ಹಳೆಯದಾದ ಕೂಡಲೇ ಈ ಬಗ್ಗೆ ಬೇಗ ಬೋರಾಗುತ್ತಾರೆ. ಸಂಬಂಧದ ವಿಷಯದಲ್ಲೂ ಇದು ನಿಜ. ಅವರ ಸಂಗಾತಿಯು ಇವರ ವೇಗಕ್ಕೆ ಹೋಗಲು, ತಮ್ಮ ನಡುವಿನ ಸಂಬಂಧವನ್ನು ಎಕ್ಸೈಟಿಂಗ್ ಆಗಿಡಲು ಒಂದಿಷ್ಟು ಪ್ರಯತ್ನಗಳನ್ನು ಹಾಕುತ್ತಲೇ ಇದ್ದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ದೂರಾಗಬೇಕೆಂದಲ್ಲಿ ಇರು ಎರಡು ಬಾರಿ ಯೋಚಿಸಲಾರರು. ಆದರೆ, ಇವರಾಗಿಯೇ ಯಾರೊಂದಿಗಾದರೂ ಪ್ರೀತಿಯಲ್ಲಿ ಬಿದ್ದರೆ ಮಾತ್ರ ಬಹಳ ಪ್ರಾಮಾಣಿಕ ಪಾರ್ಟ್ನರ್ ಆಗುವರಲ್ಲದೆ, ಪ್ರೀತಿಯನ್ನು ರೋಚಕವಾಗಿಡುವರು.

ವೃಶ್ಚಿಕ

ಈ ರಾಶಿಯವರು ಹೆಚ್ಚು ಬುದ್ಧಿವಂತರೂ, ತುಂಬಾ ಪ್ರೀತಿಸಬಲ್ಲವರೂ ಹಾಗೂ ಪ್ರೀತಿಯಲ್ಲಿ ಬಿದ್ದರೆ ಪ್ರಾಮಾಣಿಕತೆಗೆ ಮಿತಿಯೇ ಇಲ್ಲದವರೂ ಹೌದು. ಆದರೆ, ವೃಶ್ಚಿಕ ರಾಶಿಯವರು ಯಾರನ್ನೂ ಬೇಗ ನಂಬಲಾರರು. ಅವರ ಆಯ್ಕೆಯ ಬಗ್ಗೆ ಪೂರ್ಣ ನಂಬಿಕೆ ಬಾರದೆ ಅವರು ಕಮಿಟ್ ಆಗಲಾರರು. ವೃಶ್ಚಿಕ ರಾಶಿಯವರ ತಲೆಯಲ್ಲಿ ಏನಾಗುತ್ತಿದೆ ಎಂಬುದು ಹೆಚ್ಚಿನ ಬಾರಿ ಪಾರ್ಟ್ನರ್ ಅರಿವಿಗೂ ಬರದು. 

ಕುಂಭ

ಕುಂಭ ರಾಶಿಯವರ ಸ್ವಭಾವ ಹೀಗೆಯೇ ಎಂದು ಯಾರೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಅಲ್ಲದೆ, ಯಾರಾದರೂ ತಮ್ಮನ್ನು ಡಾಮಿನೇಟ್ ಮಾಡುತ್ತಾರೆಂದರೆ ಇವರಿಗೆ ಎಲ್ಲಿಲ್ಲದ ಕೋಪ. ಇವರಲ್ಲಿ ಸಾಮಾನ್ಯವಾಗಿ ಸಂಬಂಧದ ಕುರಿತು ಊಹಾತ್ಮಕ, ಕಲ್ಪನಾತ್ಮಕ ಚಿತ್ರಣವೇ ಹೆಚ್ಚಾಗಿದ್ದು, ಇಂಥ ಸಂಬಂಧಕ್ಕಾಗಿ ಸುತ್ತಣ ಪ್ರಪಂಚದಲ್ಲಿ ಹುಡುಕಿ ಸಿಗದೆ ಬೇಸರಪಟ್ಟುಕೊಳ್ಳುತ್ತಾರೆ. ಇವರು ಯಾವುದೇ ಆರೋಪವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲಾರರು. ಸಂಗಾತಿಯು ಇವರ ತಪ್ಪನ್ನು ಹುಡುಕಿ ಆಡಿದರೆ ಅವರಿಂದ ದೂರ ಹೋಗಲು ಆರಂಭಿಸುತ್ತಾರೆ. 

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ಮೇಷ

ಇರು ಸ್ವಭಾವತಃ ತಾಳ್ಮೆ ಇಲ್ಲದವರು ಹಾಗೂ ಮನಸ್ಸಿಗೆ ಬಂದದ್ದನ್ನು ಮಾಡುವವರು. ತಾವಂದುಕೊಂಡಂತೆ ಏನೂ ನಡೆಯಲಿಲ್ಲವೆಂದರೆ ಅವರು ತಮ್ಮ ಸಂಗಾತಿಯನ್ನು ಕಡೆಗಣಿಸಲಾರಂಭಿಸಬಹುದು. ಸಂಗಾತಿಯಿಂದ ಇವರ ನಿರೀಕ್ಷೆಯ ವಿಷಯಗಳು ಬಹಳ ಹೆಚ್ಚಾಗಿರುವುದರಿಂದ ಯಾವುದೇ ಸಂಬಂಧಕ್ಕೆ ಕಮಿಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

ತುಲಾ

ತುಲಾ ರಾಶಿಯವರು ಹೆಚ್ಚು ಜನಸಂಪರ್ಕ ಉಳ್ಳವರು ಹಾಗೂ ತಮಾಷೆಯನ್ನು ಇಷ್ಟಪಡುವವರು. ಆದರೆ ಸಂಬಂಧದ ವಿಷಯಕ್ಕೆ ಬಂದರೆ ಅವರು ಯಾವುದೇ ನಿರ್ಧಾರಕ್ಕೆ ಬರಲಾರರು ಹಾಗೂ ಒತ್ತಡವನ್ನು ತಾಳಿಕೊಳ್ಳಲಾರರು. ಯಾವುದಾದರೂ ವಿಷಯದ ಕುರಿತು ಬಹಳ ಸಮಯ ಕೊರಗುವ ಅವರು, ತಾವೇನಾದರೂ ತಪ್ಪು ನಿರ್ಧಾರ ತೆಗೆದುಕೊಂಡರೆ ಎಂದೇ ವರ್ಷಗಟ್ಟಲೆ ಚಿಂತಿಸಿ ಯಾವ ನಿರ್ಧಾರವನ್ನೂ ಕೈಗೊಳ್ಳದೆ ಕೂರುವರು. ಇದೇ ಕಾರಣಕ್ಕೆ ಸಂಬಂಧವೊಂದಕ್ಕೆ ಕಮಿಟ್ ಆಗಬೇಕೆಂದರೆ ಅದು ಇವರಿಗೆ ಬಹಳ ದೊಡ್ಡ ತಲೆನೋವು ಎನಿಸುವುದು. 

ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

ಮೀನ

ಈ ರಾಶಿಗೆ ಸೇರಿದವರು ಬಹಳ ಸೃಜನಶೀಲರು ಹಾಗೂ ಕಲ್ಪನಾಶಕ್ತಿ ಹೆಚ್ಚಿರುವವರು. ತಮ್ಮದೇ ಆದ ರೀತಿಯಲ್ಲಿ ಜಗತ್ತನ್ನು ನೋಡುವವರು. ಇವರನ್ನು ಸಂತೋಷ ಪಡಿಸುವುದು ಸುಲಭದ ಕೆಲಸ ಖಂಡಿತಾ ಅಲ್ಲ. ಸಂಬಂಧದ ವಿಷಯಕ್ಕೆ ಬಂದರೆ ಈ ಬಗ್ಗೆ ಹೆಚ್ಚು ಕನಸುಳ್ಳವರು. ಎಲ್ಲ ಆಯ್ಕೆಗಳನ್ನು ತೆರೆದಿಟ್ಟುಕೊಂಡು ಸಮಯ ತೆಗೆದುಕೊಂಡು ಆ ಕುರಿತ ನಿರ್ಧಾರಕ್ಕೆ ಬರುವವರು ಇವರು. ಲಿಪ್‌ಸ್ಟಿಕ್ ಶೇಡಿನಿಂದ ಹಿಡಿದು, ಯಾವ ಕೆಫೆಗೆ ಹೋಗಬೇಕು, ತಮ್ಮ ಜೀವನಸಂಗಾತಿ ಯಾರಾಗಬೇಕು ಸೇರಿದಂತೆ ಜೀವನದಲ್ಲಿ ಪ್ರತಿ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಬಹಳಷ್ಟು ಆಯ್ಕೆ ಮುಂದಿಟ್ಟುಕೊಂಡು ನಿಧಾನವಾಗಿ ನಿರ್ಧಾರಕ್ಕೆ ಬರುತ್ತಾರೆ. 

Follow Us:
Download App:
  • android
  • ios