Asianet Suvarna News Asianet Suvarna News

ಶೃಂಗಾರ ಸಮಯದಿ ಹೊಂಗೆ ಮರ ಹೂ ಬಿಟ್ಟಿದೆ... ಇದು ಭಟ್ಟರ ಕಥೆ!

ರಂಗಾ​ಯಣ ರಘು ಪೋಲಿ ಪುಸ್ತಕ ಬರೆ​ಯು​ತ್ತಾ​ರೆ: ಯೋಗ​ರಾಜ್‌ ಭಟ್‌

Yogaraj Bhat Exclusive interview Panchatantra
Author
Bengaluru, First Published Mar 29, 2019, 10:04 AM IST

ಆರ್‌ ಕೇಶವಮೂರ್ತಿ

ನಿಮಗೂ ಈಗಲೂ ನೆನ​ಪಿಗೆ ಬರುವ ಪಂಚತಂತ್ರ​ದ ಕತೆ​ಗಳು ಯಾವು​ವು?

ಬಾಲ​ಮಿತ್ರ, ಚಂದ​ಮಾಮ, ಬೇತಾ​ಳನ ಕತೆ​ಗಳು. ಜತೆಗೆ ಆಮೆ ಮತ್ತು ಮೊಲದ ಕತೆ. ಇವು ಯಾವಾ​ಗಲೂ ನನ್ನ ತಲೆ​ಯ​ಲ್ಲಿ​ರು​ತ್ತವೆ. ಬಾಲ​ಕ​ರಿಂದ ಹಿಡಿದು ವಯೋ​ವೃದ್ಧರವರೆಗೂ ಓದಿ​ಸಿ​ಕೊ​ಳ್ಳುವ ಗುಣ ಇರು​ವಂತಹ ಕತೆ ಇವು.

ನೀವು ಹೇಳಿದ ಈ ಕತೆ​ಗಳ ಅಂತ​ರಂಗ​ದಲ್ಲಿ ಲೈಟಾಗಿ ನೀತಿ ಪಾಠ ಇರು​ತ್ತದೆ. ಹಾಗಾ​ದರೆ ನಿಮ್ಮ ಈ ಪಂಚ​ತಂತ್ರ ಚಿತ್ರವೂ ನೀತಿ ಪಾಠ ಹೇಳು​ತ್ತ​ದೆ​ಯೇ?

ಖಂಡಿತ ಇದೆ. ಆದರೆ, ‘ನಾನು ನಿಮ​ಗೊಂದು ನೀತಿ ಪಾಠ ಹೇಳು​ತ್ತಿ​ರುವೆ ಕೇಳಿ’ ಎನ್ನುವ ದಾಟಿ​ಯ​ಲ್ಲಂತೂ ಇರಲ್ಲ. ನೀವೇ ಹೇಳಿ​ದಂತೆ ಲೈಟಾಗಿ ಮನ​ರಂಜ​ನಾ​ತ್ಮ​ಕ​ವಾಗಿ ಹೇಳಿ​ದ್ದೇನೆ. ಪಕ್ಕಾ ಕಮ​ರ್ಷಿ​ಯಲ್‌ ಚೌಕ​ಟ್ಟಿ​ನಲ್ಲೇ ಎಲ್ಲ​ರಿಗೂ ಹಿಡಿ​ಸುವ ನೀತಿ ಇಲ್ಲದೆ. ಅನ​ನು​ಭವಿ ಅನು​ಭವ ಪಡೆ​ದು​ಕೊ​ಳ್ಳು​ವುದು ಹೇಗೆಂಬ ನೀತಿ ಇಲ್ಲದೆ. ತಲೆ​ಮಾ​ರು​ಗಳ ನಡುವೆ ಅಂತರ ಕಡಿಮೆ ಆಗಿ ಎಲ್ಲರೂ ಹ್ಯೂಮನ್‌ ಬೀಯಿಂಗ್‌ ಆದರೆ ಹೇಗೆ ಎನ್ನುವ ನೀತಿ ಇಲ್ಲಿದೆ.

Yogaraj Bhat Exclusive interview Panchatantra

ಇಂಥ ನೀತಿ ಪಾಠದ ಕತೆ​ಯಲ್ಲಿ ಹೊಂಗೆ ಮರ, ಶೃಂಗಾರ ಯಾಕೆ ಬರು​ತ್ತ​ದೆ?

ಇದು ಈ ಜನ​ರೇ​ಷ​ನ್‌ನ ಕತೆ. ಪ್ರೇಮ- ಕಾಮ ಎನ್ನು​ವುದು ಬೆರಳ ತುದಿ​ಯಲ್ಲೇ ಇದೆ. ಅದನ್ನೇ ನಾನು ಸಾಫ್ಟ್‌ ಆಗಿ, ರೊಮ್ಯಾಂಟಿಕ್‌ ಆಗಿ ಮನ​ಸ್ಸಿಗೆ ಮುದ ನೀಡು​ವಂತೆ ಹೇಳು​ವು​ದಕ್ಕೆ ಹೊರ​ಟಾಗ ಶೃಂಗಾ​ರದ ಹೊಂಗೆ ಮರ ಹೂವು ಬಿಟ್ಟು ಸ್ಪರ್ಶಿ​ಸಿತು. ಅಲ್ಲದೆ ‘ಶೃಂಗಾ​ರದ ಹೊಂಗೆ ಮರ’ ಎನ್ನು​ವುದು ಚಿತ್ರ​ದಲ್ಲಿ ರಂಗಾ​ಯಣ ರಘು ಪಾತ್ರಧಾರಿ ಬರೆಯುವ ಒಂದು ಪೋಲಿ ಪುಸ್ತ​ಕ​ದ ಹೆಸರು.

ಶೃಂಗಾ​ರದ ಜತೆಗೆ ಪೋಲಿ ಪುಸ್ತಕ ಕತೆಯೂ ಇದೆ. ಹಾಗಿ​ದ್ದರೆ ಯಾವ ವಯ​ಸ್ಸಿ​ನ​ವರ ಸಿನಿಮಾ ಇದು?

ಆರು ವರ್ಷ​ದಿಂದ ತೊಂಭ​ತ್ತೈದು ವರ್ಷ ವಯ​ಸ್ಸಿನ ತನಕ ಎಲ್ಲರು ಖುಷಿ​ಯಾಗಿ ನೋಡು​ವಂತಹ ಸಿನಿಮಾ ಇದು. ಈ ವಿಚಾ​ರ​ದಲ್ಲಿ ಯಾವುದೇ ಅನು​ಮಾ​ನ​ವಿಲ್ಲ. ಅದ್ಭು​ತ​ವಾದ ಹಾಡು​ಗ​ಳಿವೆ. ಹುಡು​ಗ- ಹುಡು​ಗಿಯ ಪ್ರೀತಿ, ಪ್ರೇಮ, ಜೀವ​ನದ ಮೌಲ್ಯ​ಗ​ಳಿವೆ. ಸಿಕ್ಕಾ​ಪಟ್ಟೆಥ್ರಿಲ್‌ ಕೊಡುವ ರೇಸು ಇದೆ.

ಪಂಚ​ತಂತ್ರದ್ದು ಯಾವ ರೀತಿಯ ಕತೆ?

ಒಂದು ಸಾಲಿ​ನಲ್ಲಿ ಹೇಳು​ವು​ದಾ​ದರೆ ಹಿರಿ​ಯರು ಮತ್ತು ಕಿರಿ​ಯರು ಜತೆ​ಯಾಗಿ ಓಡು​ವುದೇ ಈ ಚಿತ್ರದ ಕತೆ. ಅಂದರೆ ಆಮೆ ಮತ್ತು ಮೊಲದ ಕತೆ. ಇಲ್ಲಿ ಮೊಲ ಈಗಿನ ಜನ​ರೇ​ಷನ್‌. ಆಮೆ ಹಿರಿ​ಯ​ರನ್ನು ಪ್ರತಿ​ನಿ​ಧಿ​ಸು​ತ್ತದೆ. ಹಾಗಿ​ದ್ದರೆ ಇಲ್ಲಿ ಯಾರು ಗೆಲ್ಲ​ಬೇಕು? ಎಂಬುದು ಚಿತ್ರದ ಮತ್ತೊಂದು ತಿರು​ವುದು. ರೇಸ್‌ ಅನ್ನು ಬೇಸ್‌ ಮಾಡಿ​ಕೊಂಡು ಮಾಡಿ​ರುವ ಸಿನಿಮಾ. ಕ್ರಿಕೆಟ್‌ ನೋಡು​ತ್ತಿ​ದ್ದಾಗ ಹೇಗೆ ಕುತೂ​ಹರ, ರೋಮಾಂಚನ ಮೂಡಿ​ಸು​ತ್ತದೋ ಹಾಗೆ ಚಿತ್ರದ ಕೊನೆಯ 10- 15 ನಿಮಿಷ ಪ್ರೇಕ್ಷ​ಕ​ನ​ನ್ನು ಹಿಡಿದು ಕೂರಿ​ಸುವ ತಾಕತ್ತು ಇರುವ ಕತೆ ‘ಪಂಚ​ತಂತ್ರ’ ಚಿತ್ರ​ಲ್ಲಿದೆ.

ಸಾಫ್ಟ್‌ ಲವ್‌ ಸ್ಟೋರಿಗೆ ಕಾರ್‌ ರೇಸ್‌ ಯಾಕೆ?

ಜೀವ​ನ​ದಲ್ಲಿ ಎಲ್ಲರು ರೇಸಿಗೆ ಬಿದ್ದಿ​ದ್ದಾರೆ. ಪರೀ​ಕ್ಷೆ​ಯಲ್ಲಿ ಪಾಸಾಗೋ ರೇಸು, ಟಿಆ​ರ್‌ಪಿ ರೇಸು, ರಾಜ​ಕಾ​ರ​ಣಿ​ಗಳ ಗೆಲ್ಲೋ ರೇಸು. ಎಲ್ಲಿ ನೋಡಿ​ದರೂ ಈಗ ರೇಸು. ಹಾಗೆ ನಮ್ಮ ಚಿತ್ರ​ದಲ್ಲೂ ಕಾರ್‌ ರೇಸ್‌ ಇದೆ. ಅದು ಯಾಕೆ ಬರು​ತ್ತದೆ ಎಂಬು​ದನ್ನು ನೀವು ಸಿನಿಮಾ ನೋಡ​ಬೇಕು. ಆದರೆ, 25 ನಿಮಿ​ಷ​ಗಳ ಕಾಲ ಬರುವ ಈ ಕಾರ್‌ ರೇಸ್‌, ಪ್ರೇಮದ ಜತೆಗೆ ರೋಮಾಂಚನ ಮೂಡಿ​ಸು​ತ್ತದೆ. ಈ ಕಾರ​ಣಕ್ಕೆ ಕಾರ್‌ ರೇಸು ಕತೆಯ ಒಂದು ಭಾಗ. ಯಾರೂ ಮುಟ್ಟಿ​ರದ ಅಂಶ​ವನ್ನು ಹೇಳುವ ಪ್ರಯತ್ನ. ಹೀಗಾಗಿ ಚಿತ್ರ​ದಲ್ಲಿ ಕಾರ್‌ ರೇಸ್‌ ಬಹು ಮುಖ್ಯ​ವಾದ ಪಾತ್ರ ವಹಿ​ಸಿ​ದೆ.

ಭಟ್ಟರ ಪಂಚತಂತ್ರಕ್ಕೆ ಬಂದ ಜೋಗಿ ಪ್ರೇಮ್!

ಒಬ್ಬ ನಿರ್ದೇ​ಶ​ಕ​ರಾಗಿ ಬೇರೊ​ಬ್ಬರ ಕತೆ​ಯನ್ನು ನಿಭಾ​ಯಿ​ಸಿದ ಅನು​ಭವ ಹೇಗಿ​ತ್ತು?

ನಿಭಾ​ಯಿ​ಸಿದೆ ಅನ್ನು​ವು​ದ​ಕ್ಕಿಂತ ನನಗೆ ಸವಾಲು ಒಡ್ಡಿದ ಕತೆ ಇದು. ಕಾಂತ​ರಾಜ್‌ ಹಾಗೂ ಮಾಸ್ತಿ ಇಬ್ಬರು ಸೇರಿ​ಕೊಂಡು ಬರೆದ ಕತೆಗೆ ನಾನು ಚಿತ್ರ​ಕತೆ ಮತ್ತು ಸಂಭಾ​ಷಣೆ ಬರೆ​ದು​ಕೊಂಡೆ. ಆದ​ರೆ, ಕಾರ್‌ ರೇಸ್‌ ನನಗೆ ಹೊಸದು. ಕನ್ನ​ಡ​ದಲ್ಲೂ ಯಾರೂ ಕೂಡ ಆಯ್ಕೆ ಮಾಡಿ​ಕೊಂಡಿ​ರದ ಗೇಮ್‌ ಇದು. ಇದ​ನ್ನ ಇಂಟರ್‌ನ್ಯಾಶನಲ್‌ ಸ್ಟ್ಯಾಂಡರ್ಡ್‌ನಲ್ಲಿ ತೆಗೆಯಬೇಕೆಂದು ಯೋಚಿಸಿ, ಅದಕ್ಕೆ ಎಂಟೆಂಟು ಕ್ಯಾಮೆರಾ ಬೇಕೆಂದು ತಿಳಿದುಕೊಳ್ಳಲು ನಮಗೆ ಮೂರು ದಿನ ಬೇಕಾಯಿತು. ಆ ನಂತರ ಇಂಟರ್‌ನ್ಯಾಶನಲ್‌ ರೇಸ್‌ ತಂಡ​ವ​ನ್ನು ಕರೆಸಿ, ಅವರಿಂದಲೇ ರೇಸ್‌ ಶೂಟಿಂಗ್‌ ಮಾಡಿಸಿದೆ. ಹೀಗೆ ನನಗೆ ಹೊಸ ಬಗೆಯ ಮತ್ತು ಸವಾಲು ಹಾಕಿ​ದ ಚಿತ್ರ​ವಿ​ದು. ಪ್ರೀತಿ​ಯಲ್ಲಿ ಬರು​ವ ಬ್ರೇಕಪ್‌ ಅನ್ನು ಹೇಗೋ ಸುಲಭವಾಗಿ ಹ್ಯಾಂಡಲ್‌ ಮಾಬಹುದು. ಆದರೆ, ಆಮೆ ಮತ್ತು ಮೊಲ ಗ್ಲೋಬಲ್‌ ಕಂಟೆಂಟ್‌. ಈ ಎರಡೂ ಪ್ರಾಣಿ​ಗ​ಳನ್ನು ಪ್ರತಿ​ನಿ​ಧಿ​ಸು​ವ ಯುವಕರು- ವೃದ್ಧರು. ಅದನ್ನು ಕ್ಲೈಮ್ಯಾಕ್ಸ್‌ಗೆ ಅಳವಡಿಸೋದು ಮತ್ತೊಂದು ಸವಾಲು ಎನಿ​ಸಿ​ತು.

ಮತ್ತೆ ಮತ್ತೆ ಯಂಗ್‌ ಜನ​ರೇ​ಷ​ನ್‌ ಜತೆ ಸಿನಿಮಾ ರೂಪಿ​ಸು​ತ್ತಿ​ರುವ ಗುಟ್ಟೇ​ನು?

ನನ್ನ ಚಿತ್ರ​ಗ​ಳ ಕತೆ​ಗಳು ಹೊಸ​ದಾ​ಗಿ​ರು​ತ್ತವೆ. ನನ್ನ ಈ ಹೊಸ ಕತೆ​ಗ​ಳಿಗೆ ಹೊಸ​ಬರೇ ಬೇಕು. ಇದೇ ಗುಟ್ಟು. ಇನ್ನೂ ನನಗೆ ಹೀರೋ​ಗ​ಳಿ​ಗಾಗಿ ಕಾಯು​ವು​ದಕ್ಕೆ ಆಗಲ್ಲ. ಅವರು ಇಮೇಜ್‌, ಟೈಮ್‌, ಬಂಡ​ವಾಳ ಎಲ್ಲವೂ ನಿರೀ​ಕ್ಷೆಗೆ ಮೀರಿ ನಿಂತಿ​ರು​ತ್ತದೆ. ಆದರೆ, ಹೊಸ ತಂಡದ ಜತೆ ಸಿನಿಮಾ ಮಾಡಿ​ದರೆ ಏನೋ ಸಾಧಿ​ಸಿದ ಹೆಮ್ಮೆ. ಮೊದ​ಲಿಂದಲೂ ಹೊಸ​ಬರ ಜತೆ ಸಿನಿಮಾ ಮಾಡಿ ತೃಪ್ತಿ ಕಂಡಿ​ರುವ ನಿರ್ದೇ​ಶಕ ನಾನು. ಜತೆಗೆ ಎಲ್ಲ ಹೀರೋ​ಗಳು ಒಂದು ಟೈಮ್‌​ನಲ್ಲಿ ಹೊಸ​ಬರೇ ಆಗಿ​ದ್ದ​ರ​ಲ್ಲವೇ ಎಂಬುದು ನನ್ನ ನಂಬಿಕೆ. ಈಗ ನಮ್ಮ ಚಿತ್ರ​ದಲ್ಲಿ ನಟಿ​ಸಿ​ರುವ ವಿಹಾನ್‌, ಸೋನಾಲ್‌, ಅಕ್ಷರ ಇವ​ರು​ಗಳು ಮುಂದೆ ದೊಡ್ಡ ಹೀರೋ​ಗ​ಳಾ​ಗ​ಬ​ಹುದು. ಆ ಕ್ರೆಡಿಟ್ಟು ನನ್ನ ಚಿತ್ರಕ್ಕೆ ಸಲ್ಲು​ತ್ತದೆ ಎನ್ನುವ ಖುಷಿಯೂ ಇದೆ. ಎಲ್ಲ​ಕ್ಕಿಂತ ಮುಖ್ಯ​ವಾ​ಗಿ ಹೊಸಬರನ್ನಿಟ್ಟುಕೊಂಡು ಹೊಸ ಪ್ರಯೋಗ ಮಾಡುವುದು ಸುಲಭ. ಅವರು ನನ್ನ ಕಲ್ಪನೆಗೆ ಸಾಥ್‌ ಕೊಡುತ್ತಾರೆ.

Yogaraj Bhat Exclusive interview PanchatantraYogaraj Bhat Exclusive interview Panchatantra

ಭಟ್ಟ​ರಿಗೆ ಗಂಭೀ​ರ​ವಾದ ಸಿನಿಮಾ, ಕತೆ ಮಾಡೋದು ಬರಲ್ಲ ಅನ್ನು​ವ​ವ​ರಿಗೆ ನಿಮ್ಮ ರಿಯಾ​ಕ್ಷ​ನ್‌?

ಈ ಗಂಭೀರ ಅನ್ನೋ ಪದ ಕೇಳಿ​ದಾಗ ನನಗೆ ಸಿಕ್ಕಾ​ಪಟ್ಟೆನಗು ಬರು​ತ್ತದಪ್ಪ. ನೂರಾರು ಜನ​ರನ್ನ ಒಬ್ಬನೇ ಹೊಡಿ​ಯೋದು, ಎಲ್ಲಿಂದಲೋ ಜಂಪ್‌ ಮಾಡಿ​ಕೊಂಡು ಬರು​ವುದು, ಹಾರು​ವುದು, ಜಿಗಿ​ಯು​ವುದು ನನಗೆ ಕಾಮಿಡಿ ಥರ ಕಾಣು​ತ್ತದೆ. ಹಾಗೆ ನನ್ನ ಸಿನಿ​ಮಾ- ಕತೆ​ಗಳು ಅವ​ರಿಗೂ ಹಾಸ್ಯ​ವಾಗಿ ಕಾಣ​ಬ​ಹುದು. ಆದರೆ, ನಾನು ಮೂಲತಃ ತುಂಬಾ ಗಂಭೀರ ವ್ಯಕ್ತಿ ಗೊತ್ತಾ.

Follow Us:
Download App:
  • android
  • ios