Asianet Suvarna News Asianet Suvarna News

'ಬಿಗ್ ಬಾಸ್' ಸ್ಪರ್ಧಿ ಸೋನು ಪಾಟೀಲ್ ಯಾರು?

ತೊಡೆ ತಟ್ಟಿ ಬಿಗ್‌ಬಾಸ್ ಮನೆಗೆ ಮೊದಲು ಪ್ರವೇಶಿಸಿದ ಉತ್ತರ ಕರ್ನಾಟಕದ ಹೆಣ್ಣು ಸೋನು ಪಾಟೀಲ್. ಶ್ರೀ ಸಾಮಾನ್ಯೆಯಾದರೂ ಈಕೆಯದ್ದು ಸ್ಟ್ರಾಂಗ್ ವ್ಯಕ್ತಿತ್ವ.

Who is Bigg Boss contestant Sonu patil
Author
Bengaluru, First Published Oct 26, 2018, 1:46 PM IST

ಬಿಗ್‌ಬಾಸ್ 6ನೇ ಸೀಸನ್‌ಗೆ ಬರುತ್ತಿದ್ದಂತೆ, ‘ಮೂರಡಿ ಬುಲೆಟ್ಟು, ಆಟಂ ಬಾಂಬು...’ ಎಂದೆಲ್ಲಾ ಬಿಲ್ಡಪ್ ತಗೊಂಡವರು ಮೊದಲ ದಿನವೇ ಜಿಮ್ ರವಿ ಜೊತೆ ಜಗಳವಾಡಿದ್ದಾರೆ. ಯಾರಪ್ಪಾ ಇದು ಮಾತಿನ ಮಲ್ಲಿ, ಪಟ ಪಟ ಅಂತ ಮಾತಾಡಿ ಎಲ್ಲಾರೊಂದಿಗೂ ಜಗಳವಾಡುವವಳು ಎಂದು ಕೊಳ್ಳುವವರಿಗೆ ಇಲ್ಲಿದೆ ಉತ್ತರ. 

- ಈಕೆ ಬಾಗಲಕೋಟೆಯ ಪುಟ್ಟ ಹಳ್ಳಿಯಲ್ಲಿರುವ ರೈತನ ಮಗಳು. ಓದಿದ್ದು ಎಂಎ ಜರ್ನಲಿಸಂ. ಬಣ್ಣದ ಲೋಕದೆಡೆಗೆ ಆಸಕ್ತಿ. ಅದಕ್ಕೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. 

- ಸೋನು ರಿಯಲ್ ನೇಮ್ ಜ್ಯೋತಿ. ಪೆಟ್ ಆ್ಯಂಡ್ ಲಕ್ಕಿ ನೇಮ್ ಸೋನು ಅಂತೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಸೋನುಗೆ ಇಲ್ಲಿ ಕಂಡಿದ್ದು ಕೇವಲ ಕಲ್ಲು ಮುಳ್ಳುಗಳ ಹಾದಿ. ಬಸ್‌ಸ್ಟ್ಯಾಂಡ್‌ನಲ್ಲಿಯೇ ಮಲಗಿ, ಮನೆಗೆಲಸ ಮಾಡಿ ತುತ್ತು ದುಡಿದುಕೊಂಡಿದ್ದಿದೆ.

- ಗಾಂಧಾರಿ, ಅಮೃತ ವರ್ಷಿಣಿ, ಶ್ರೀಮಾನ್ ಶ್ರೀಮತಿ, ಮೊಗ್ಗಿನ ಮನಸ್ಸು..ಮುಂತಾದ ಧಾರಾವಾಹಿಗಳಲ್ಲಿ ಪಾತ್ರ ಮಾಡಿಯೂ ಗುರುತಿಸಿಕೊಂಡಿದ್ದಾರೆ.  

- ಅಷ್ಟೇ ಅಲ್ಲದೆ ಸಂಚಾರಿ ವಿಜಯ್ ಜೊತೆ 'ಕೊಟ್ಟೂರೇಶ್ವರ ಮಹಾತ್ಮೆ' ಚಿತ್ರದಲ್ಲಿಯೂ ನಟಿಸಿದ್ದಾರೆ. ಜೀವನದಲ್ಲಿ ಒಂದು ಸಲವಾದರೂ ಸುದೀಪ್ ಅವರನ್ನು ಮೀಟ್ ಆಗಬೇಕೆಂಬ ಮಹಾನ್ ಕನಸು ಹೊತ್ತ ಸೋನುಗೆ ಬಿಗ್‌ಬಾಸ್‌ಗೆ ಪ್ರವೇಶ ಸಿಕ್ಕಿದ್ದು, ಕೋಟಿ ಸಿಕ್ಕಷ್ಟು ಖುಷಿಯಾಗಿದೆ.

Follow Us:
Download App:
  • android
  • ios