Asianet Suvarna News Asianet Suvarna News

ಮನೆ ಮನೆಯ ಚಿತ್ರಮಂದಿರವಾಗಲಿದೆ ಕಲರ್ಸ್ ಕನ್ನಡ ಸಿನಿಮಾ

ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೊಸ ಚಿತ್ರಮಂದಿರ ಆರಂಭ | ನಿಮ್ಮ ಮನೆಗೇ ಬರಲಿದೆ  ಕಲರ್ಸ್‌ಕನ್ನಡ ಸಿನಿಮಾ | ‘ಮನೆ ಮನೆಯ ಚಿತ್ರಮಂದಿರ’ ಎಂಬ ಘೋಷ ವಾಕ್ಯದೊಂದಿಗೆ ಆರಂಭ

Viacom 18 launch Colors Kannada Cinema
Author
Bengaluru, First Published Sep 21, 2018, 1:25 PM IST

ಬೆಂಗಳೂರು (ಸೆ. 21): ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೊಸ ಚಿತ್ರಮಂದಿರ ಆರಂಭವಾಗಿದೆ.

ಕಲರ್ಸ್‌ಕನ್ನಡ ಸಿನಿಮಾ ಎಂಬ ಈ ಚಿತ್ರಮಂದಿರ ನಿಮ್ಮ ಮನೆಗೇ ಬರಲಿದೆ. ‘ಮನೆ ಮನೆಯ ಚಿತ್ರಮಂದಿರ’ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾಗಿರುವ ಈ ಹೊಸ ಚಾನೆಲ್ ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ಚಾನೆಲ್‌ಗಳನ್ನು ಕನ್ನಡಿಗರಿಗೆ ನೀಡಿರುವ ವಯಾಕಾಮ್‌ 18 ಸಂಸ್ಥೆಯ ಹೊಸ ಕೊಡುಗೆ.

ಗುಣಮಟ್ಟದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್  ಚಾನೆಲ್‌ಗಳು ಸಿನಿಮಾ ವಿಚಾರದಲ್ಲೂ ಈ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ. ಈ ಚಿತ್ರಮಂದಿರದಲ್ಲಿ ದಿನವೂ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತವೆ. ಸಿನಿಮಾಗಳ ಜೊತೆಗೆ ತೆರೆಯ ಹಿಂದಿನ ಕತೆಗಳು, ಸಿನಿಮಾ ವಿಮರ್ಶೆಗಳು, ತಾರೆಯರ ಜೊತೆಗೆ ಮಾತುಕತೆ, ಹರಟೆ- ಹೀಗೆ ಒಬ್ಬ ಸಿನಿಮಾ ಪ್ರೇಕ್ಷಕನಿಗೆ ಚಲನಚಿತ್ರ ಜಗತ್ತಿನ ಎಲ್ಲ ಮಾಹಿತಿಗಳನ್ನೂ ಈ ಚಿತ್ರಮಂದಿರ ನೀಡಲಿದೆ.

ಕಲರ್ಸ್ ಕನ್ನಡ ಸಿನಿಮಾ ಲೈಬ್ರರಿಯಲ್ಲಿ ೪೫೦ಕ್ಕೂ ಹೆಚ್ಚು ಸಿನಿಮಾಗಳ ಭಂಡಾರವೇ ಇದೆ. ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅಭಿನಯಿಸಿದ ‘ಗಂಧದಗುಡಿ’, ವಿಷ್ಣುವರ್ಧನ್-ರಜನಿಕಾಂತ್ ಜೋಡಿಯ ‘ಕಿಲಾಡಿ ಕಿಟ್ಟು’, ರಾಜ್‌ಕುಮಾರ್ ಮತ್ತು ಅಂಬರೀಷ್ ಅಭಿನಯಿಸಿದ ‘ಒಡಹುಟ್ಟಿದವರು’- ಹೀಗೆ ಎಲ್ಲವೂ ಸಿಗಲಿದೆ.

ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ ಸೇರಿದಂತೆ ಹೊಚ್ಚ ಹೊಸ ಚಲನಚಿತ್ರಗಳ ದಂಡೇ ಇಲ್ಲಿರಲಿದೆ. ಸೆ. 24 ರಂದು ‘ಕಲರ್ಸ್‌ಕನ್ನಡ ಸಿನಿಮಾ’ ತೆರೆಗೆ ಬರಲಿದೆ. ಮೊದಲ ವಾರ ಪ್ರತಿ ದಿನವೂ ಸಂಜೆ 7 ಗಂಟೆಗೆ ಹೊಸ ಚಲನಚಿತ್ರಗಳ ಪ್ರಸಾರ ಆಗಲಿದೆ.

‘ನಮ್ಮ ವೀಕ್ಷಕರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಮಾರುಕಟ್ಟೆಯಲ್ಲಿ ಮುಂಚೂಣಿಯ ಸ್ಥಾನ ಕಾಯ್ದುಕೊಳ್ಳುವಲ್ಲಿ ಕಲರ್ಸ್ ಕನ್ನಡ ಸಿನಿಮಾ ನಮಗೆ ನೆರವಾಗಲಿದೆ’ ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ರೀಜನಲ್ ಎಂಟರ್‌ಟೇನ್‌ಮೆಂಟ್‌ನ ಹೆಡ್ ರವೀಶ್‌ಕುಮಾರ್.

‘ಅತ್ಯುತ್ತಮ ಸಿನಿಮಾಗಳ ದೊಡ್ಡ ಸಂಗ್ರಹ ನಮ್ಮಲ್ಲಿದೆ. ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಹೊಸ ಅನುಭವ ನೀಡಲಿದೆ. ಸಿನಿಮಾಗಳಿಗೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ ಚಾನೆಲ್ ಪ್ರಸಾರ ಮಾಡಲಿದೆ’ಎನ್ನುತ್ತಾರೆ ಕಲರ್ಸ್ ಕನ್ನಡ ಸಿನಿಮಾ ಚಾನೆಲ್‌ನ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್. 

Follow Us:
Download App:
  • android
  • ios