Asianet Suvarna News Asianet Suvarna News

ಸಾಕಷ್ಟು ಸೌಂಡ್ ಮಾಡಿದ್ದ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಟ್ರೇಲರ್ ಬಿಡುಗಡೆ

ಉಪೇಂದ್ರ ಆಕ್ಟ್ ಮಾಡಿರೋ ಬಹು ನಿರೀಕ್ಷೆಯ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ ಹಲವು ವಿಷಯಗಳಿಗೆ ಸದ್ದು ಮಾಡುತ್ತಿರೋ ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

Upendra matte Hutti ba Tralair Revealed

ಬೆಂಗಳೂರು (ಸೆ.19): ಉಪೇಂದ್ರ ಆಕ್ಟ್ ಮಾಡಿರೋ ಬಹು ನಿರೀಕ್ಷೆಯ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ ಹಲವು ವಿಷಯಗಳಿಗೆ ಸದ್ದು ಮಾಡುತ್ತಿರೋ ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೀಕ್ಷೆಯ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗಾಂಧಿನಗರದಲ್ಲಿ ಹಲವು ವಿಷಯಗಳಿಗೆ ಸೌಂಡ್ ಮಾಡಿದ ಈ ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಪ್ರೇಮಾ,ಶ್ರುತಿ ಹರಿಹರನ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ, ಚಾಂದಿನಿ, ಸಾಧು ಕೋಕಿಲ, ಅವಿನಾಶ್, ವಸಿಷ್ಠ ಸಿಂಹ  ಹೀಗೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ. ತೆಲುಗಿನ ಸೊಗ್ಗಾಡೆ ಚಿನ್ನ ನಾಯನ ಚಿತ್ರದ ರಿಮೇಕ್ ಆಗಿರೋ ಈ ಚಿತ್ರಕ್ಕೆ ಎಚ್ ಟು ಓ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಲೋಕನಾಥ್, ಕನ್ನಡದ ನೇಟಿವಿಟಿಗೆ ನಿರ್ದೇಶನ ಮಾಡಿದ್ದಾರೆ. ಹೆಚ್ಚು ಕಡಿಮೆ ಶೂಟಿಂಗ್ ಮುಗಿಸಿರೋ ಉಪೇಂದ್ರ ಮತ್ತೆ ಹುಟ್ಟಿ ಬಾ ಸದ್ಯದಲ್ಲೇ ತೆರೆಗೆ ಬರಲಿದೆ.

Follow Us:
Download App:
  • android
  • ios