Asianet Suvarna News Asianet Suvarna News

ಮನೆಯಲ್ಲಿ ವಿಲನ್ ಹವಾ, ಇವರನ್ನು ಕಂಡ್ರೆ ಶಿವಣ್ಣಗೆ ಭಯ!

ಬಿಗ್ ಬಾಸ್ ಮನೆಯಲ್ಲಿ ಭಾನುವಾರ ವಿಲನ್ ಹವಾ. ನಿರ್ದೇಶಕ ಜೋಗಿ ಪ್ರೇಮ್, ಶಿವರಾಜ್ ಕುಮಾರ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದರು. ಮನೆಯೊಳಗೆ ಕುಣಿದು ಕುಪ್ಪಳಿಸಿದರು.

The Villain Team Director Prem Shivarajkumar in bigg boss kannada season 6
Author
Bengaluru, First Published Oct 28, 2018, 10:18 PM IST

ಬಿಗ್ ಬಾಸ್ ಆರಂಭವಾಗಿ ಮೊದಲ ಭಾನುವಾರ ವಿಲನ್ ತಂಡ ಭೇಟಿ ನೀಡಿದ್ದು ವಿಶೇಷವಾಗಿತ್ತು. ಮನೆಯೊಳಗೆ ಪ್ರೇಮ್ ಮುಂಬಾಗಿಲ ಮೂಲಕ ಎಂಟ್ರಿ ಕೊಟ್ಟರೆ ಶಿವರಾಜ್ ಕುಮಾರ್ ಕನ್ ಫೆಶನ್ ರೂಂ ನಿಂದ ಬಂದರು.

ಬಿಗ್ ಬಾಸ್ ಮನೆಗೆ ಮೊದಲಿಗೆ ಪ್ರವೇಶಿಸಿದ ನಿರ್ದೇಶಕ ಪ್ರೇಮ್ ಮನೆಯ ಎಲ್ಲ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಮನೆಯ ಸದಸ್ಯರು ಸಂಭ್ರಮದಿಂದ ಪ್ರೇಮ್ ಅವರನ್ನು ಬರಮಾಡಿಕೊಂಡಿರು. ಶಿವಣ್ಣ ಮನೆಯ ಸದಸ್ಯರಿಗೆ ಹಂಚಲು ಸಿಹಿ ತಂದಿದ್ದೇನೆ, ಬಿಗ್ ಬಾಸ್ ಆದೇಶದ ಬಳಿಕ ಅದನ್ನು ತೆರೆಯುತ್ತೇನೆ ಎಂದರು

ಶಿವಣ್ಣ ಬಳಿ ಊಟಕ್ಕೆ ಮನವಿ: ಗೋದಲದಿಂದ ಲಕ್ಸುರಿ ಬಜೆಟ್ ಪಾಯಿಂಟ್ ಗಳು ಇದ್ದರೂ ರೇಶನ್ ಖರೀದಿ ಮಾಡಲು ಸಾಧ್ಯವಾಗಿಲ್ಲ. ನೀವೆ ಏನಾದರೂ ಮಾಡಬೇಕು ಎಂದು ಸ್ಪರ್ಧಿಗಳು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಿವಣ್ಣ ಹೊರ ಬಂದ ಮೇಲೆ ಸುದೀಪ್ ಬಳಿ  ಚಿಕನ್ ಬಿರಿಯಾನಿ, ಮಟನ್ ಫ್ರೈ, ಡೆಸರ್ಸ್ಟ್, ವೆಜ್ ಐಟಂ ಕಳುಹಿಸುವ ಮಾತು ಉಳಿಸಿಕೊಂಡರು.

ಬಿಗ್ ಬಾಸ್ ಮನೆ ಸ್ಪರ್ಧಿಗಳ ಪಟ್ಟಿ

ಡ್ಯಾನ್ಸ್: ಪ್ರೇಮ್ ಮತ್ತು ಶಿವಣ್ಣ ಒಂದುಗೂಡಿದ ಸ್ಪರ್ಧಿಗಳು ವಿಲನ್ ಹಾಡಿಗೆ ಒಟ್ಟಿಗೆ ನರ್ತಿಸಿದರು. ರಾವಣ... ಹಾಡು ಮೊಳಗಿತು. ಮನೆಯ ಬಗ್ಗೆ ಇಬ್ಬರು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದರು.

ಗೀತಾ ಅಂದರೆ ಭಯ: ಶಿವರಾಜ್ ಕುಮಾರ್ ಗೆ ಪತ್ನಿ ಗೀತಾ ಅವರನ್ನು ಕಂಡರೆ ಭಯವಂತೆ.  ವೇದಿಕೆಯಲ್ಲಿ ಸುದೀಪ್ ಸರಣಿ ಪ್ರಶ್ನೆಗಳನ್ನು ಕೇಳಿದರೆ ಶಿವಣ್ಣ ವಿಲನ್ ಡೈಲಾಗ್ ಹೇಳುತ್ತಲೇ ಎಲ್ಲದಕ್ಕೂ ಉತ್ತರ ನೀಡಿದರು. ಕಾಲ್ ಶೀಟ್ ಕೊಡುವ ವಿಚಾರ, ಬಾಸ್-ಬಿಗ್ ಬಾಸ್, ಅಭಿನಯ ಚಕ್ರವರ್ತಿ, ಚಕ್ರವರ್ತಿಗಳ ಚಕ್ರವರ್ತಿ ಹೀಗೆ ಹತ್ತು ಹಲವು ವಿಚಾರಗಳು ಚರ್ಚೆಯಾದವು. ಒಟ್ಟಿನಲ್ಲಿ ಸಂಡೆಯ ಎಪಿಸೋಡ್ ಸಖತ್ ಮಜಾ ನೀಡಿತು.



 

Follow Us:
Download App:
  • android
  • ios