Asianet Suvarna News Asianet Suvarna News

ಯಶ್ ಮಗಳಿಗೆ ಅಂಬಿ ಕೊಟ್ಟ ತೊಟ್ಟಿಲಿನ ವಿಶೇಷತೆಗಳೇನು ಗೊತ್ತಾ?

ಕಲಿಯುಗ ಕರ್ಣ ಡಾ. ಅಂಬರೀಶ್ ಮಗನಂತಿರೋ ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಅಂಬಿ ಬಯಸಿದ್ದರು. ತಮ್ಮ ಆಪ್ತನಿಗೆ ಖುದ್ದು ಕರೆಮಾಡಿ ತೊಟ್ಟಿಲು ತಯಾರಿಸಲು ಹೇಳಿದ್ದರು. ತೊಟ್ಟಿಲು ಸಿದ್ದವಾಗಿದೆ. ತೊಟ್ಟಿಲಿನ ವಿಶೇಷತೆ ಬಗ್ಗೆ ಇಲ್ಲಿದೆ ವರದಿ. 

Specialty of Yash baby's cradle
Author
Bengaluru, First Published Dec 7, 2018, 5:42 PM IST

ಬೆಂಗಳೂರು (ಡಿ. 07): ಕಲಿಯುಗ ಕರ್ಣ ಡಾ. ಅಂಬರೀಶ್ ಮಗನಂತಿರೋ ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಅಂಬಿ ಬಯಸಿದ್ದರು. ತಮ್ಮ ಆಪ್ತನಿಗೆ ಖುದ್ದು ಕರೆಮಾಡಿ ತೊಟ್ಟಿಲು ತಯಾರಿಸಲು ಹೇಳಿದ್ದರು. ತೊಟ್ಟಿಲು ಸಿದ್ದವಾಗಿದೆ. ತೊಟ್ಟಿಲಿನ ವಿಶೇಷತೆ ಬಗ್ಗೆ ಇಲ್ಲಿದೆ ವರದಿ. 

ಅಂಬಿ ಕೊಟ್ಟ ಈ ತೊಟ್ಟಿಲಲ್ಲೇ ಯಶ್ ಮಗಳು ಬೆಳೆಯುತ್ತಾಳೆ; ಇಲ್ಲಿದೆ ಫೋಟೋ

ಕಟ್ಟಿಗೆಯಿಂದ ಈ ತೊಟ್ಟಿಲನ್ನು ನಿರ್ಮಾಣ ಮಾಡಲಾಗಿದೆ. ಶ್ರೀಧರ ಸಾಹುಕಾರ್ ಎನ್ನುವ ಕಲಾವಿದ ಈ ತೊಟ್ಟಿಲನ್ನು ತಯಾರಿಸಿದ ಪ್ರತಿಭಾನ್ವಿತ. ಇವರು ಧಾರವಾಡ ಜಿಲ್ಲೆಯ ಕಲಘಟಗಿಯ ನಿವಾಸಿ. ಕಲಘಟಗಿಯ ಚಿತ್ರಗಾರ ಕುಟುಂಬ ತೊಟ್ಟಿಲು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದೆ.

Specialty of Yash baby's cradle

ಯಶ್ ಮಗಳಿಗೆ ತಲುಪಿತು ಅಂಬಿ ಗಿಫ್ಟ್!

ಈ ಹಿಂದೂಮ್ಮೆ ಧಾರವಾಡಕ್ಕೆ ಬಂದಿದ್ದ ವರನಟ ಡಾ.ರಾಜಕುಮಾರ್ ತಮ್ಮ ಮೊಮ್ಮಕ್ಕಳ ನಾಮಕರಣಕ್ಕೆಂದು ಕಟ್ಟಿಗೆಯಲ್ಲಿ ನಿರ್ಮಾಣವಾದ ತೊಟ್ಟಿಲನ್ನ ತೆಗೆದುಕೊಂಡು ಹೋಗಿದ್ದರು. ಕಟ್ಟಿಗೆಯಲ್ಲಿ ಸುಂದರವಾಗಿ ನಿರ್ಮಾಣವಾದ ತೊಟ್ಟಿಲನ್ನ ನೋಡಿ ರಾಜಕುಮಾರ್ ಬೆರಗಾಗಿದ್ದರು. 

Specialty of Yash baby's cradleSpecialty of Yash baby's cradle

ಕಲಾವಿದನ ಕೈಚಳಕದಲ್ಲಿ ಸಿದ್ದವಾಗಿದ್ದ ಈ ತೊಟ್ಟಿಲು ನೋಡಿ ಇಡೀ ಕನ್ನಡ ಚಿತ್ರರಂಗವೂ ಆನಂದಿಸಿತ್ತು. ಅಂಬರೀಶ ಕೂಡ ಆ ತೊಟ್ಟಿಲನ್ನು ಕಂಡು ಖುಷಿಯಾಗಿದ್ದರು. ಅಲ್ಲದೇ ಮಗನಂತಿರೋ ಯಶ್-ರಾಧಿಕಾ ದಂಪತಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಬಯಸಿದ್ದರು. 

"

ಕಲಘಟಗಿಯಲ್ಲಿ ನಿರ್ಮಾಣವಾಗುವ ಈ ತೊಟ್ಟಿಲುಗಳಿಗೆ 600 ವರ್ಷಗಳ ಇತಿಹಾಸವಿದೆ. ಒಂದು ತೊಟ್ಟಿಲು ಮಾಡಲು ಎರಡು ತಿಂಗಳ ಕಾಲ ಸಮಯ ಬೇಕು. ತೊಟ್ಟಿಲನ್ನು ಸಾಗವಾಣಿ ಮರದ ಕಟ್ಟಿಗೆಯಿಂದ ಮಾಡಲಾಗುತ್ತಿದ್ದು, ಅದಕ್ಕೆ ಬಳಸುವ ಕಲರ್ ತುಂಬಾ ವಿಶೇಷವಾಗಿರುತ್ತದೆ. ತೊಟ್ಟಿಲಿಗೆ ಹಚ್ಚಲಾಗುವ ಬಣ್ಣವೂ ನೂರು ವರ್ಷಗಳ ಕಾಲ ಹೋಗುವುದಿಲ್ಲ. ಈ ಎಲ್ಲ ವಿಶೇಷತೆಗಳನ್ನು ಒಳಗೊಂಡಿರುವ ತೊಟ್ಟಿಲುಗಳಿಗೆ ದೇಶ-ವಿದೇಶದಿಂದಲೂ ಬಾರಿ ಬೇಡಿಕೆ ಬಂದಿದೆ. 

Follow Us:
Download App:
  • android
  • ios