Asianet Suvarna News Asianet Suvarna News

ಸೀತಾರಾಮ ಕಲ್ಯಾಣ ಶತದಿನೋತ್ಸವ!

ಸ್ಥಳ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಮಂದಿರದ ಅಂಗಳ. ಅದು ಸಿನಿಮಾ ಪತ್ರಿಕಾಗೋಷ್ಟಿ. ಆದರೆ, ಅಲ್ಲಿ ೮೦ಕ್ಕೂ ಹೆಚ್ಚು ಮಂದಿ ಇದ್ದರು. 

 

Seetharama kalyana 130 artist together in 100 days shooting completion
Author
Bengaluru, First Published Nov 20, 2018, 9:06 AM IST

ಇವರೆಲ್ಲ ಅತಿಥಿಗಳೋ, ಚಿತ್ರರಂಗದ ಗಣ್ಯರೋ ಅಲ್ಲ. ಎಲ್ಲರೂ ಚಿತ್ರತಂಡವರೇ. ಇವರಲ್ಲಿ ಅರ್ಧ ಜನ ವೇದಿಕೆ ಮೇಲೆ ಕೂತಿದ್ದರು. ಚಿತ್ರತಂಡದ ಸಂಖ್ಯಾಬಲಕ್ಕೆ ತಕ್ಕಂತೆ ಬೃಹತ್ ಮಂಟಪ. ವಿಶಾಲವಾದ ವೇದಿಕೆ. ಸಾಲದಕ್ಕೆ ಈ ವೇದಿಕೆ ಪಕ್ಕದಲ್ಲೇ ಯಾರದ್ದೋ ಮದುವೆ ಸಂಭ್ರಮ. ಸಂಕ್ರಾಂತಿ ಹಬ್ಬ, ಮದುವೆ ಸಂಭ್ರಮ ಎರಡನ್ನೂ ಒಟ್ಟಿಗೆ ನೆನಪಿಸಿದಂತಿದ್ದ ಚಿತ್ರತಂಡದ ಉಡುಗೆ ತೊಡುಗೆ. ಎಲ್ಲರ ಔಟ್‌ಲುಕ್ ಮದುವೆ ಮೂಡಿನಲ್ಲಿತ್ತು. ಹೀಗೆ ಚಿತ್ರದ ಹೆಸರಿಗೆ ತಕ್ಕಂತೆ ಮದುವೆ ಸಂಭ್ರಮದಂತೆ ಪತ್ರಿಕಾಗೋಷ್ಟಿ ಮಾಡಿಕೊಂಡಿದ್ದು ‘ಸೀತಾರಾಮ ಕಲ್ಯಾಣ’. ನಿಖಿಲ್ ಕುಮಾರ್ ನಾಯಕನಾಗಿ, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಎ. ಹರ್ಷ ನಿರ್ದೇಶಿಸಿದ್ದು, ಸುಮಾರು 100 ದಿನಗಳ ಚಿತ್ರೀಕರಣ ಮುಗಿಸಿಕೊಂಡಿದೆ. ಜತೆಗೆ ಈಗಷ್ಟೇ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ.

ಈ ಎರಡು ಸಂಭ್ರಮಗಳನ್ನು ಹೇಳಿಕೊಳ್ಳುವುದಕ್ಕಾಗಿ ಚಿತ್ರತಂಡ ಹೀಗೆ ಮಾಧ್ಯಮಗಳ ಮುಂದೆ ಬಂತು. ವೇದಿಕೆ ಮೇಲೆ ನಿಖಿಲ್ ಕುಮಾರ್, ರಚಿತಾ ರಾಮ್, ಎ ಹರ್ಷ, ಸುನೀಲ್ ಗೌಡ, ಲಹರಿ ವೇಲು, ಶರತ್ ಕುಮಾರ್, ಮಧೂ, ಆದಿತ್ಯ ಮೆನನ್, ಶಿವಾರ್ ಕೆ ಆರ್ ಪೇಟೆ, ನಯನ, ರಘು ನಿಡುವಳ್ಳಿ, ಗಿರಿಜಾ ಲೋಕೇಶ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಹಾಜರಿದ್ದರು. ಇದರ ಎರಡು ಪಟ್ಟು ಸದಸ್ಯರು ವೇದಿಕೆ ಮುಂದೆ ಆಸೀನರಾಗಿದ್ದರು. ಬಹು ತಾರಾಗಣ ಸಿನಿಮಾ ಎಂಬುದನ್ನು ಇವರ ಸಂಖ್ಯೆ ನೋಡಿದರೆ ಗೊತ್ತಾಗುವಂತಿತ್ತು. 

ನಿಖಿಲ್ ಮೈಕು ತೆಗೆದುಕೊಂಡು ತೆರೆ ಮೇಲೆ ಮತ್ತು ತೆರೆ ಹಿಂದೆ ಕೆಲಸ ಮಾಡಿದ ಎಲ್ಲರನ್ನೂ ವೇದಿಕೆಗೆ ಕರೆದು ಎಲ್ಲರ ಕುರಿತು ಮಾತನಾಡುವ ಮೂಲಕ ಕೃತಜ್ಞತೆ ಸಲ್ಲಿಸಿದರು. ತಮಾಷೆ, ಮಾತು ಮತ್ತು ಮಾತುಗಳಲ್ಲೇ ‘ಸೀತಾರಾಮ ಕಲ್ಯಾಣ’ ಚಿತ್ರದ ಪತ್ರಿಕಾಗೋಷ್ಟಿ ಎಂಬ ಮದುವೆ ಸಂಭ್ರಮ ಮುಗಿಯಿವುದಕ್ಕೆ ಮೂರು ಗಂಟೆ ಬೇಕಾಯಿತು. 

ಮೊದಲ ಪ್ರಯತ್ನದಲ್ಲೇ ಗೆಲುವು ಕಂಡ ಸಾಯಿ ಸುಕನ್ಯಾ
ಅಂದಹಾಗೆ ‘ಸೀತಾರಾಮ ಕಲ್ಯಾಣ’ ಚಿತ್ರದಿಂದ ಬಿಡುಗಡೆಯಾಗಿರುವ ‘ನಿನ್ನ ರಾಗ ನಾನು, ನನ್ನ ರಾಣಿ ನೀನು’ ಎಂದು ಸಾಗುವ ಅತ್ಯಂತ ಮೆಲೋಡಿ ಗೀತೆಗೆ ಸಾಹಿತ್ಯ ನೀಡಿರುವುದು ಸಾಯಿ ಸುಕನ್ಯಾ ಎಂಬುವವರು. ಇದು ಇವರಿಗೆ ಮೊದಲ ಹಾಡಿನ ರಚನೆ. ಮೊದಲ ಹೆಜ್ಜೆಯಲ್ಲೇ ಗೆಲುವು ಕಂಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ 1.6ಮಿಲಿಯನ್ ವ್ಯೆಸ್ ಪಡೆದುಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರತಂಡಕ್ಕೆ ಬಹುವಾಗಿ ಮೆಚ್ಚಿಗೆಯಾಗಿರುವ ಗೀತೆ ಇದಾಗಿದೆ. ಹೀಗಾಗಿ ಪತ್ರಿಕಾಗೋಷ್ಟಿಯಲ್ಲಿ ಸ್ವತಃ ನಿಖಿಲ್ ಕುಮಾರ್ ಅವರೇ ಸಾಯಿ ಸುಕನ್ಯಾ ಅವರನ್ನು ವೇದಿಕೆಗೆ ಕರೆದು, ‘ನನ್ನ ಚಿತ್ರಕ್ಕೆ ಅತ್ಯುತ್ತಮ ಗೀತೆಯನ್ನು ನೀಡಿದ್ದೀರಿ’ ಎಂದು ಮೆಚ್ಚುಗೆ ಮಾತುಗಳನ್ನಾಡಿ ದ್ದಾರೆ. ಅಲ್ಲಿಗೆ ಸಾಯಿ ಸುಕನ್ಯಾ ಅವರಿಗೆ ಎ ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಬಿಗ್ ಓಪನಿಂಗ್ ಎನ್ನುವಂತಾಗಿದೆ. 

ಇದು ನೂರು ದಿನ ಚಿತ್ರೀಕರಣ ಮುಗಿಸಿರುವ ಸಂಭ್ರಮ ಹಂಚಿಕೊಳ್ಳಲು ಕರೆದಿರುವ ಪತ್ರಿಕಾಗೋಷ್ಟಿ. ನಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿದ್ದ ‘ಸೂರ್ಯವಂಶ’, ‘ಚಂದ್ರಚಕೋರಿ’ ಚಿತ್ರಗಳ ನಂತರ ಅಂಥದ್ದೇ ದೊಡ್ಡ ಕೌಟುಂಬಿಕ ಸಿನಿಮಾ ಇದು. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರು ಪತ್ರಿಕಾಗೋಷ್ಟಿಗೆ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ದೊಡ್ಡ ಬಜೆಟ್‌ನ, ದೊಡ್ಡ ಫ್ಯಾಮಿಲಿ ಕತೆ ‘ಸೀತಾರಾಮ ಕಲ್ಯಾಣ’- ನಿಖಿಲ್ ಕುಮಾರ್, ನಟ

 

ತುಂಬಾ ಜನ ಇದನ್ನ ರೀಮೇಕ್ ಸಿನಿಮಾ ಎನ್ನುತ್ತಿದ್ದಾರೆ. ನಮ್ಮ ತಂಡದಲ್ಲೂ ಇದೇ ಅನುಮಾನವಿತ್ತು. ತಂಡದಲ್ಲಿರುವ ಬಹುತೇಕರು ಸಿನಿಮಾ ನೋಡಿದ್ದಾರೆ. ಇದು ಸ್ವಮೇಕ್ ಸಿನಿಮಾ ಎಂಬುದು ಅವರಿಗೆ ಗೊತ್ತಾಗಿದೆ. ಈಗಲೂ ನಾನು ಹೇಳುತ್ತಿದ್ದೇನೆ ಯಾವ ಕಾರಣಕ್ಕೂ ಇದು ರೀಮೇಕ್ ಅಲ್ಲ. ಸೀತಾರಾಮ ಕಲ್ಯಾಣ ಅಪ್ಪಟ ಕನ್ನಡದ ಸಿನಿಮಾ - ಎ ಹರ್ಷ, ನಿರ್ದೇಶ

Follow Us:
Download App:
  • android
  • ios