Asianet Suvarna News Asianet Suvarna News

ಜೋರಾಗಿತ್ತು Sandalwood ಕಪಲ್ ಸಂಕ್ರಾಂತಿ ಸಡಗರ!

ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ. ಎಲ್ಲರ ಮನೆ, ಮನದಲ್ಲೂ ಸಿಹಿಯನ್ನು ಹಂಚಿ, ಸಿಹಿಯಾಗಿ ಮಾತನಾಡಿ ಖುಷಿಯಾಗಿ ಇರುವ ಕ್ಷಣ ಈ ಹಬ್ಬದ ವಿಶೇಷ. ದೇಶದ ಹಲವೆಡೆ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬ ಕನ್ನಡಿಗರ ಪಾಲಿಗೂ ವಿಶೇಷವೇ. ಇದನ್ನು ದಾಂಪತ್ಯಕ್ಕೆ ಕಾಲಿಟ್ಟಬಳಿಕ ಬಂದ ಮೊದಲ ಸಂಕ್ರಾಂತಿಯನ್ನು ನಮ್ಮ ಸ್ಯಾಂಡಲ್‌ವುಡ್‌ನ ನವ ಜೋಡಿಗಳಾದ ಐಂದ್ರಿತಾ ರೇ-ದಿಗಂತ್‌ ಮಂಚಾಲೆ, ಮೇಘನಾ ರಾಜ್‌-ಚಿರಂಜೀವಿ ಸರ್ಜಾ ಹೇಗೆ ಆಚರಿಸಿದ್ದಾರೆ. ಸೋನುಗೌಡ, ಹರ್ಷಿಕಾ ಪೂಣಚ್ಚರ ಸಂಕ್ರಾಂತಿ ಸ್ಪೆಷಲ್‌ ಏನು ಎನ್ನುವುದರ ಪುಟ್ಟವಿವರ ಇಲ್ಲಿದೆ.

Sandalwood celebrities Sankranthi celebration
Author
Bengaluru, First Published Jan 16, 2019, 2:17 PM IST

ಮೇಘನಾ ರಾಜ್‌

Sandalwood celebrities Sankranthi celebration

ಬೆಳಿಗ್ಗೆ ಪೂಜೆ, ಬಗೆ ಬಗೆಯ ಅಡುಗೆ

ಮನೆಯಲ್ಲಿ ಸಂಕ್ರಾಂತಿ ಆಚರಣೆ ಹೆಚ್ಚಾಗಿ ಮಾಡುತ್ತಿರಲಿಲ್ಲ. ಹಬ್ಬ ಎನ್ನುವ ಕಾರಣಕ್ಕೆ ಏನಾದರೂ ಸ್ಪೆಷಲ್‌ ಮಾಡುತ್ತಿದ್ದೆವು. ಮನೆಯಲ್ಲೇ ಪೂಜೆ ಮಾಡುತ್ತಿದ್ದೆವು. ಆದರೆ ನನ್ನ ಅಜ್ಜಿ ತಮಿಳು ಮೂಲವಾದ್ದರಿಂದ ಅವರ ಮನೆಯಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡುತ್ತಿದ್ದರು. ಹಾಗಾಗಿ ನಾನು ಅವರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಸಿಹಿ ಪೊಂಗಲ್‌, ಖಾರ ಪೊಂಗಲ್‌ ಎಲ್ಲಾ ಇರುತ್ತಿತ್ತು. ಈ ಬಾರಿಯ ಸಂಕ್ರಾಂತಿ ನನಗೆ ವಿಶೇಷ ಯಾಕೆಂದರೆ ಮದುವೆಯಾದ ಮೇಲೆ ಚಿರಂಜೀವಿ ಅವರ ಮನೆಯಲ್ಲಿ, ಅವರ ಕುಟುಂಬದವರೊಂದಿಗೆ ಸೇರಿಕೊಂಡು ಪಕ್ಕಾ ಗೌಡರ ಸ್ಟೈಲ್‌ನಲ್ಲಿ ಹಬ್ಬ ಮಾಡುತ್ತಿದ್ದೇವೆ. ಬೆಳಿಗ್ಗೆ ಪೂಜೆ ಆಯಿತು. ಹಬ್ಬದ ನಿಮಿತ್ತ ಬಗೆ ಬಗೆಯ ಅಡುಗೆ ಮಾಡಿದ್ದೇವೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದೆವು. ಹಾಗಾಗಿ ಮಿಕ್ಕ ಎಲ್ಲಾ ಸಂಕ್ರಾಂತಿಗಿಂತ ಇದು ಸ್ಪೆಷಲ್‌ ನನ್ನ ಪಾಲಿಗೆ.

ಚಿರು- ಮೇಘನಾ ಮೊದಲ ದೀಪಾವಳಿ ; ಮನೆಯಲ್ಲಿ ಕಳೆಗಟ್ಟಿದೆ ಸಂಭ್ರಮ

ಚಿರಂಜೀವಿ ಸರ್ಜಾ

Sandalwood celebrities Sankranthi celebration

ಸಂಕ್ರಾಂತಿಯನ್ನು ಮೊದಲಿನಿಂದಲೂ ಸಾಧಾರಣವಾಗಿಯೇ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಈ ಬಾರಿ ನಾನು ಮೇಘನಾ ಮದುವೆಯಾದ ಮೇಲೆ ಮೊದಲ ಸಂಕ್ರಾಂತಿ ಎನ್ನುವುದು ವಿಶೇಷ ಅಷ್ಟೇ. ಬೆಳಿಗ್ಗೆಯಿಂದಲೂ ಮನೆಯಲ್ಲಿ ಸಡಗರವಿದೆ. ಒಂದಷ್ಟುಮಂದಿ ನೆಂಟರು ಬಂದಿದ್ದಾರೆ. ಮೇಘನಾ ಫುಲ್‌ ಬ್ಯುಸಿಯಾಗಿದ್ದಾಳೆ.

ಐಂದ್ರಿತಾ ರೇ

Sandalwood celebrities Sankranthi celebration

ಅತ್ತೆಯೊಂದಿಗೆ ಐಂದ್ರಿತಾ ಹಬ್ಬ

ದಿಗಂತ್‌ ಮತ್ತು ನಾನು ಮೊದಲಿನಿಂದಲೂ ಪರಿಚಿತರು. ಹಾಗಾಗಿ ಮೊದಲ ಸಂಕ್ರಾಂತಿ ಎನ್ನುವುದು ಏನೂ ಇಲ್ಲ. ಬೇರೆ ಬೇರೆ ಹಬ್ಬಳಿಗೆ ನಾನು ಅವರ ಫ್ಯಾಮಿಲಿ ಜೊತೆ ಒಂದಾಗುತ್ತಿದ್ದೆ. ಆದರೆ ಈಗ ಅಫೀಸಿಯಲಿ ಮದುವೆಯಾದ ಮೇಲೆ ಮೊದಲ ಸಂಕ್ರಾಂತಿ ಎನ್ನುವುದು ವಿಶೇಷ. ಹಬ್ಬಗಳು ಎಂದರೆ ಹೆಣ್ಣು ಮಕ್ಕಳಿಗೆ ಹೆಚ್ಚು ಕೆಲಸ, ಹಾಗಾಗಿ ಮನೆಯಲ್ಲಿ ನಾನು ನನ್ನ ಅತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಅವರು ತುಂಬಾ ಸಾಫ್ಟ್‌, ತುಂಬಾ ಒಳ್ಳೆಯವರು, ಅವರೊಂದಿಗೆ ಇದ್ದು ಹಬ್ಬ ಮಾಡುವುದು, ಸಣ್ಣ ಪುಟ್ಟಹೆಲ್ಪ್‌ ಮಾಡುವುದು ತುಂಬಾ ಖುಷಿ ನೀಡುತ್ತೆ. ಬೆಳಿಗ್ಗೆ ಮನೆಯಲ್ಲೇ ಪೂಜೆ ಆಯಿತು. ಬೆಳ್ಳುಳ್ಳಿ, ಈರುಳ್ಳಿ ಹಾಕದ ಕಿಚಡಿ, ಪಾಯಸ, ಸ್ವೀಟ್‌ ಎಲ್ಲವನ್ನೂ ಮಾಡಿ ಊಟ ಮಾಡಿದ್ದು ಆಯಿತು. ಇಂದು ಎಲ್ಲರೂ ಮನೆಯಲ್ಲೇ ಇರುವುದರಿಂದ ಒಟ್ಟಿಗೆ ಕೂತು ಸಂಭ್ರಮಿಸುತ್ತಿದ್ದೇವೆ.

ದಿಗಂತ್- ಐಂದ್ರಿತಾ ಮದುವೆ ಫೋಟೋ ರಿವೀಲ್

ಸೋನು ಗೌಡ

Sandalwood celebrities Sankranthi celebration

ಇದೇ ದಿನ ಮ್ಯಾಚ್‌ ಇರೋದು ಖುಷಿ ಕೊಟ್ಟಿದೆ

ಸಂಕ್ರಾಂತಿ ದಿನವೇ ನನ್ನ ಹೊಸ ಸಿನಿಮಾ ‘ಚಂಬಲ್‌’ ಹಾಡು ಬಿಡುಗಡೆಯಾಗಿದೆ. ಹಾಗಾಗಿ ಈ ಸಂಕ್ರಾಂತಿ ನನಗೆ ಸ್ಪೆಷಲ್‌. ‘ಫಾರ್ಚುನರ್‌’ ಕೂಡ ಚೆನ್ನಾಗಿ ಪ್ರದರ್ಶನವಾಗುತ್ತಿದೆ. ನಾಳಿದ್ದು ‘ಐ ಲವ್‌ ಯು’ ಆಡಿಯೋ ಲಾಂಚ್‌ ಇದೆ. ಹೀಗೆ ಸಾಲು ಸಾಲು ಸಿನಿಮಾ ಬರುತ್ತಿರುವುದು ನನಗೆ ಖುಷಿ. ಹಬ್ಬ ಎಂದರೆ ಫ್ಯಾಮಿಲಿ ಎಲ್ಲಾ ಒಟ್ಟಾಗುತ್ತೇವೆ. ಒಟ್ಟಾದಾಗ ಬಗೆ ಬಗೆಯ ತಿಂಡಿಗಳು, ಮಾತು ಕತೆಗಳು ನಡೆಯುತ್ತವೆ. ಇದು ನನಗೆ ಯಾವತ್ತಿಗೂ ಖುಷಿ ನೀಡುವ ವಿಚಾರ. ನನಗೆ ಚಿಕ್ಕಂದಿನಿಂದಲೂ ಕ್ರಿಕೆಟ್‌ ಎಂದರೆ ಇಷ್ಟ. ಇವತ್ತೇ ಇಂಡಿಯಾ ಆಸ್ಪ್ರೇಲಿಯಾ ಮ್ಯಾಚ್‌ ನಡೆಯುತ್ತಿದೆ. ಹಾಗಾಗಿ ಫ್ಯಾಮಿಲಿ ಜೊತೆಯಲ್ಲಿ ಕೂತು ಮ್ಯಾಚ್‌ ನೋಡುವುದು ನನ್ನ ಖುಷಿಯನ್ನು ಡಬ್ಬಲ್‌ ಮಾಡಿದೆ. ಸಿಹಿ ಪೊಂಗಲ್‌, ಖಾರ ಪೊಂಗಲ್‌, ಸ್ವೀಟ್ಸ್‌ ಎಲ್ಲವನ್ನೂ ಮಾಡಿಯಾಗಿದೆ. ಅಕ್ಕ ಪಕ್ಕದ ಮನೆಯ ಪುಟ್ಟಹುಡುಗಿಯರು ಬಂದು ಎಳ್ಳು ಬೆಲ್ಲ ಕೊಟ್ಟು ಹೋಗಿದ್ದಾರೆ. ಇವೆಲ್ಲದರ ಜೊತೆಗೆ ಕಡೆಯದಾಗಿ ಇಂಡಿಯಾ ಮ್ಯಾಚ್‌ ಗೆದ್ದರೆ ನನ್ನ ಖುಷಿ ತ್ರಿಬ್ಬಲ್‌ ಆಗುತ್ತೆ.

ಅಬ್ಬಾ..! ಈ ನಟಿಯರ ಫೇವರೆಟ್ ಆ್ಯಪ್ ಇದಂತೆ

ಹರ್ಷಿಕಾ ಪೂಣಚ್ಚ

Sandalwood celebrities Sankranthi celebration

ನನಗೆ ಹೊಸ ವರ್ಷವೇ ಸಂಕ್ರಾಂತಿ

ನಮ್ಮ ಕೊಡವ ಸಂಪ್ರದಾಯದಲ್ಲಿ ಸಂಕ್ರಾಂತಿ ಆಚರಣೆ ಇಲ್ಲ. ಆದರೆ ನಾನು ಹುಟ್ಟಿಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ನನ್ನ ಸುತ್ತಲಿನವರೆಲ್ಲಾ ಜೋರಾಗಿ ಸಂಕ್ರಾಂತಿ ಮಾಡುವುದನ್ನು ನೋಡಿ, ನಾನು ಅದರಲ್ಲಿ ಭಾಗವಹಿಸುತ್ತಾ ಬಂದು ಸಂಕ್ರಾಂತಿ ನಮ್ಮ ಮನೆಯ ಹಬ್ಬವೇ ಆಗಿ ಹೋಗಿದೆ. ನನಗೆ ಮೊದಲಿನಿಂದಲೂ ಹಬ್ಬಗಳು ಎಂದರೆ ಸಡಗರಕ್ಕೆ ಕಾರಣ.

ಬಲು ಚಂದ ಈ ಗುಳಿಕೆನ್ನೆ ಹುಡುಗಿ; ನಗುವಲ್ಲೇ ಮಾಡ್ತಾಳೆ ಮೋಡಿ..!

ನನ್ನ ಪಾಲಿಗೆ ಸಂಕ್ರಾಂತಿ ವಿಶೇಷ ಯಾಕೆ ಎಂದರೆ, ನನಗೆ ಹೊಸ ವರ್ಷ ಶುರುವಾಗುವುದು ಸಂಕ್ರಾಂತಿಯಿಂದ. ಯಾಕೆಂದರೆ ಜನವರಿ ಒಂದಕ್ಕೆ ಹೊಸ ವರ್ಷ ಬಂದಾಗ ನಾನು ಬೇರೆ ಬೇರೆ ಕಡೆ ಟ್ರಾವೆಲ್‌ನಲ್ಲಿ ಇರುತ್ತೀನಿ. ಹಾಲಿಡೇಸ್‌ ಎಂಜಾಯ್‌ ಮಾಡುತ್ತಿರುತ್ತೇನೆ. ಪ್ರತಿ ವರ್ಷವೂ ಜನವರಿಯಲ್ಲಿ ಹದಿನೈದು ದಿನ ಫುಲ್‌ ಹಾಲಿಡೇ ಮೂಡ್‌ ನನ್ನದು. ಹಾಗಾಗಿ ನನ್ನ ಕೆಲಸಗಳು, ಸಿನಿಮಾ ಸಂಬಂಧಿ ಮಾತುಕತೆಗಳು ಶುರುವಾಗುವುದು ಸಂಕ್ರಾಂತಿ ಬಳಿಕವೇ. ಹಾಗಾಗಿ ನನಗೆ ಇದು ಹೊಸ ವರ್ಷದ ಆರಂಭ. ಪ್ರತಿ ಹಬ್ಬಕ್ಕೂ ನನ್ನ ಇಷ್ಟದ ಹೋಳಿಗೆಯನ್ನು ನಾನೇ ಮಾಡಿಕೊಳ್ಳವುದು ರೂಢಿ. ಆದರೆ ಈ ವರ್ಷ ಸ್ವಲ್ಪ ಬ್ಯುಸಿ ಇದ್ದ ಕಾರಣ ಹೋಳಿಗೆ ಮಾಡಲು ಆಗಿಲ್ಲ. ಸಿಂಪಲ್‌ ಆಗಿ ಕಬ್ಬು, ಎಳ್ಳು ಬೆಲ್ಲ ಎಲ್ಲಾ ತಂದು ಹಬ್ಬ ಮಾಡಿದ್ದೇವೆ.

ಲೂಸ್‌ ಮಾದ ಯೋಗಿ

Sandalwood celebrities Sankranthi celebration

ಸಂಜೆಗೆ ಅತ್ತೆ ಮನೆಯಲ್ಲಿ ಸಂಕ್ರಾಂತಿ

ನನ್ನ ‘ಲಂಬೋದರ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿರುವುದು, ಮುಂದಿನ ಶುಕ್ರವಾರ ಹೊಸದಾಗಿ 80 ಥಿಯೇಟರ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಸಂಕ್ರಾಂತಿಯನ್ನು ಸ್ಪೆಷಲ್‌ ಮಾಡಿದೆ. ಉಳಿದಂತೆ ಬೆಳಿಗ್ಗೆ ಬೆಳಿಗ್ಗೆಯೇ ಪೂಜೆ ಆಯಿತು. ಮನೆಯಲ್ಲಿ ಬೇರೆ ಬೇರೆ ರೀತಿಯ ಅಡುಗೆ ಮಾಡಿದ್ದಾರೆ. ಸಂಜೆ ವೇಳೆಗೆ ಅತ್ತೆ ಮನೆಗೆ ಹೋಗಿ ಅಲ್ಲಿ ಅವರೊಂದಿಗೆ ಸಂಕ್ರಾಂತಿ ಆಚರಣೆ ಮಾಡುವ ಪ್ಲ್ಯಾನ್‌ ಇದೆ.

ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಲೂಸ್ ಮಾದ ಯೋಗಿ ಈ ಸಾಂಗ್

Follow Us:
Download App:
  • android
  • ios