entertainment
By Suvarna Web Desk | 06:45 PM May 18, 2017
ರಣ'ಬೀರ್ ಜೊತೆಯಿರುವ ಯುವತಿ ಯಾರು?

Highlights

ಹಾಗಿದ್ದರೆ ಯಾರಿದು ಯುವತಿ? ಎಂಬುದರ ಬಗ್ಗೆ ಟ್ವೀಟರ್ನಲ್ಲಿ ಸಾಕಷ್ಟುಊಹಾಪೋಹ, ಚರ್ಚೆಗಳು ಹರಿದಾಡಿದವು. ಬೂದು ಬಣ್ಣದ ಟಿ-ಶರ್ಟ್ಧರಿಸಿದ್ದ ಕಪೂರ್‌, ಬಿಳಿ ಟಾಪ್ಮತ್ತು ಶಾಟ್ಸ್ರ್ಧರಿಸಿದ್ದ ಯುವತಿಯೊಂದಿಗಿರುವ ಫೋಟೋ ಇಂಥ ವದಂತಿ ಹರಡುವುದಕ್ಕೆ ಕಾರಣವಾಗಿತ್ತು.

ಸಿನಿಮಾ ನಟ-ನಟಿಯರ ವಿಷಯದಲ್ಲಿ ಗಾಸಿಪ್‌ಗಳು ಹೊಸದೇನಲ್ಲ. ಬಾಲಿವುಡ್‌ ನಟ ರಣಬೀರ್‌ ಕಪೂರ್‌ ವಿಷಯದಲ್ಲೂ ಇದು ಸಾಕಷ್ಟುಬಾರಿ ನಡೆದಿದೆ. ರಣಬೀರ್‌ ಕಪೂರ್‌ ತಮ್ಮ ಹೊಸ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ‘ನಿಗೂಢ ಯುವತಿ'ಯೊಬ್ಬಳೊಂದಿಗೆ ಅವರು ಕಾಣಿಸಿಕೊಂಡಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರದಿಂದ ಭಾರೀ ವೈರಲ್‌ ಆಗುತ್ತಿದೆ.

ಹಾಗಿದ್ದರೆ ಯಾರಿದು ಯುವತಿ? ಎಂಬುದರ ಬಗ್ಗೆ ಟ್ವೀಟರ್‌ನಲ್ಲಿ ಸಾಕಷ್ಟುಊಹಾಪೋಹ, ಚರ್ಚೆಗಳು ಹರಿದಾಡಿದವು. ಬೂದು ಬಣ್ಣದ ಟಿ-ಶರ್ಟ್‌ ಧರಿಸಿದ್ದ ಕಪೂರ್‌, ಬಿಳಿ ಟಾಪ್‌ ಮತ್ತು ಶಾಟ್ಸ್‌ರ್‍ ಧರಿಸಿದ್ದ ಯುವತಿಯೊಂದಿಗಿರುವ ಫೋಟೋ ಇಂಥ ವದಂತಿ ಹರಡುವುದಕ್ಕೆ ಕಾರಣವಾಗಿತ್ತು.
ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಇದೊಂದು ರಣಬೀರ್‌ ನಟಿಸಿರುವ ಒಳ ಉಡುಪಿನ ಜಾಹೀರಾತಿನ ಫೋಟೊ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಈ ಫೋಟೊಗೆ ಹೆಚ್ಚಿನ ಕಾಲ್ಪನಿಕ ಅರ್ಥಗಳನ್ನು ಕಟ್ಟುವ ಅಗತ್ಯವಿಲ್ಲ ಎಂದು ರಣಬೀರ್‌ರನ್ನು ಬಲ್ಲವರು ಹೇಳಿದ್ದಾರೆ. 33 ವರ್ಷದ ರಣಬೀರ್‌ ಕಪೂರ್‌ ಅವರ ಹೆಸರು ಈ ಹಿಂದೆ ದೀಪಿಕಾ ಪಡುಕೋಣೆ ಅವರ ಜತೆ ತಳುಕು ಹಾಕಿಕೊಂಡಿದ್ದುಂಟು. ಈಗ ಅವರು ಕತ್ರೀನಾ ಕೈಫ್‌ ಜೊತೆ ಓಡಾಡುತ್ತಿದ್ದಾರೆ ಎಂಬ ಸುದ್ದಿಗಳು ಇವೆ.

Show Full Article


Recommended


bottom right ad