Asianet Suvarna News Asianet Suvarna News

#MeToo ಬಗ್ಗೆ ರಜಿನಿ ಮಾತು ಜೊತೆಗೊಂದಿಷ್ಟು ತಿಳಿಮಾತು

ಈ ಬಗ್ಗೆ ಮಾತನಾಡಿರುವ ರಜಿನಿ ಅವರು, ಮೀಟೂ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇದೊಂದು ಉತ್ತಮ ಅಭಿಯಾನ, ಆದರೆ ಇದು ದುರುಪಯೋಗವಾಗದೆ ಸರಿಯಾಗಿ ಉಪಯುಕ್ತವಾಗಬೇಕು ಎಂದು ಸಲಹೆ ನೀಡಿದ್ದಾರೆ.

Rajinikanth on #MeToo: Great, but shouldn't be misused by women
Author
Bengaluru, First Published Oct 20, 2018, 5:45 PM IST

ಚೆನ್ನೈ[ಅ.20]: ಇತ್ತೀಚಿಗೆ ತೀವ್ರ ಸ್ವರೂಪ ಪಡೆಯುತ್ತಿರುವ #MeToo ಅಭಿಯಾನದ ಬಗ್ಗೆ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಜಿನಿ ಅವರು, ಮೀಟೂ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇದೊಂದು ಉತ್ತಮ ಅಭಿಯಾನ, ಆದರೆ ಇದು ದುರುಪಯೋಗವಾಗದೆ ಸರಿಯಾಗಿ ಉಪಯುಕ್ತವಾಗಬೇಕು ಎಂದು ಸಲಹೆ ನೀಡಿದ್ದಾರೆ.

ತಮಿಳಿನ ಖ್ಯಾತ ಚಿತ್ರಸಾಹಿತಿ ವೈರಮುತ್ತು ಅವರ ಬಗ್ಗೆ ಆರೋಪ ಮಾಡಿರುವ ಹಿನ್ನಲೆ ಗಾಯಕಿ ಚಿನ್ಮಯಿ ಶ್ರೀಪಾದ್ ಸೇರಿದಂತೆ ಹಲವು ಮಹಿಳೆಯರ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂಪರ್ ಸ್ಟಾರ್, ಚಿನ್ಮಯಿ ಆರೋಪಕ್ಕೆ  ವೈರಮುತ್ತು ಅವರು ಕಾನೂನು ಮಾರ್ಗದಲ್ಲೆ ಉತ್ತರ ನೀಡಲಿದ್ದಾರೆ ಎಂದು ಹಿರಿಯ ಸಾಹಿತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಸ್ವಿಟ್ಜರ್ಲ್ಯಾಂಡ್ ನಡೆದ ಕಾರ್ಯಕ್ರಮವೊಂದರಲ್ಲಿ ವೈರಮುತ್ತು ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಚಿನ್ಮಯಿ ಆರೋಪಿಸಿದ್ದರು.

ನಾನಾ ಪಾಟೇಕರ್, ರಘುದೀಕ್ಷಿತ್ ಸೇರಿದಂತೆ ಹಲವು ಗಣ್ಯರ ವಿರುದ್ಧ  #MeToo ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ವ್ಯಕ್ತವಾಗುತ್ತಿದೆ. ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಕನ್ನಡದ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ನಟಿಯ ವಿರುದ್ಧದ ಆರೋಪವನ್ನು ಅಲ್ಲಗೆಳದಿರುವ  ಅರ್ಜುನ ಸರ್ಜಾ ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದಾರೆ.

ಶೃತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ?

ನ.27ಕ್ಕೆ ರೋಬೋಟ್ ಬಿಡುಗಡೆ
ರಜಿನಿಕಾಂತ್ ಅವರ ಬಹು ನಿರೀಕ್ಷಿತ ಹಾಗೂ ಭಾರಿ ವೆಚ್ಚದ ಚಿತ್ರ ರೋಬೋಟ್ 2 ನ.27 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಡಿ.12 ರಂದು ತಮ್ಮ ಹುಟ್ಟುಹಬ್ಬದ ದಿನದಂದು ರಾಜಕೀಯ ಪಕ್ಷ ಘೋಷಿಸುವುದರ ಬಗ್ಗೆ ನಿರಾಕರಿಸಿದ್ದಾರೆ.   

#MeToo : ಸ್ಯಾಂಡಲ್ ವುಡ್ ಸ್ಟಾರ್ ನಟನ ಕರಾಳ ಮುಖ ಬಿಚ್ಚಿಟ್ಟ ಶ್ರುತಿ ಹರಿಹರನ್

Follow Us:
Download App:
  • android
  • ios