Asianet Suvarna News Asianet Suvarna News

ಬಿಗ್​ಬಾಸ್-6ನ 8ನೇ ವಾರದ 8ನೇ ವಿಕೆಟ್ ಪತನ: ಯಾರವರು ಗೊತ್ತಾ?

ಬಿಗ್​ಬಾಸ್-6 ಮನೆಯಿಂದ ಈ ವಾರ ಮತ್ತೊಬ್ಬ ಸ್ಪರ್ಧಿ ಹೊರ ಬಂದಿದ್ದಾರೆ. ಈ ಮೂಲಕ ಸೀಜನ್ 6ರ 8ನೇ ವಾರದ 8ನೇ ವಿಕೆಟ್ ಪತನವಾದಂತಾಗಿದೆ.ಯಾರವರು?

Nayana Puttaswamy Eliminated from bigg boss kannada season 6
Author
Bengaluru, First Published Dec 15, 2018, 9:13 PM IST

8ನೇ ವಾರದ ಎಂಟನೇ ಸ್ಪರ್ಧಿ ಇಂದು (ಶನಿವಾರ) ಬಿಗ್​ಬಾಸ್ ಸೀಜನ್ 6ರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೇಫ್ ಗೇಮ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ, ನಯನ ಪುಟ್ಟಸ್ವಾಮಿ ಬಿಗ್ ಬಾಸ್ ಜರ್ನಿಯಿಂದ ಹೊರಬಿದ್ದಿದ್ದಾರೆ.

ಬಿಗ್​ ಬಾಸ್​ ಸೀಜನ್ -6ನ 7ನೇ ವಿಕೆಟ್ ಪತನ: ಯಾರು ಗೊತ್ತಾ?

ಲೆಕ್ಕಾಚಾರಗಳನ್ನ ಇಟ್ಟುಕೊಂಡೆ ಸೇಫ್ ಆಟ ಆಡುತ್ತಿದ್ದ ನಯನಾ, ತುಂಬಾ ವಾರಗಳ ಕಾಲ ವೀಕ್ಷಕರನ್ನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 8ನೇ ವಾರಕ್ಕೆ ನಯನಾ ಪುಟ್ಟಸ್ವಾಮಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಇವರಿಗೆ ರಿಯಾಲಿಟಿ ಶೋಗಳೆಲ್ಲಾ ಹೊಸದೇನಲ್ಲ. ಈ ಹಿಂದೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1’ ರಲ್ಲಿ ಭಾಗವಹಿಸಿ ಗೆದ್ದಿದ್ರು. ಅಷ್ಟೇ ಅಲ್ಲದೇ ಪವರ್, ಸಿದ್ಧಾರ್ಥ, ಅಲೆಮಾರಿ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.

Follow Us:
Download App:
  • android
  • ios