Asianet Suvarna News Asianet Suvarna News

ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ಇಬ್ರಾಹಿಂ ಸುತಾರಾ ಮಾತುಗಳನ್ನು ಕೇಳಲೇಬೇಕು

ತಮ್ಮ ಬದುಕನ್ನು ಇತರರಿಗೋಸ್ಕರ ಮುಡುಪಾಗಿಟ್ಟಿರೋ ಇಂತಹ ಅಸಾಮಾನ್ಯ ಸಾಧಕರು ಹಲವರಿದ್ದಾರೆ. ಇವರ ಪೈಕಿ ಇಬ್ರಾಹಿಂ ಸುತಾರಾ ಕೂಡಾ ಒಬ್ಬರು. 

Ibrahim Sutar stands as moral motivation for youths
Author
Bengaluru, First Published Dec 29, 2018, 2:03 PM IST

ಬೆಂಗಳೂರು (ಡಿ. 29): ನಮ್ಮ ನಡುವೆ ಅನೇಕ ಸಾಧಕರಿದ್ದಾರೆ. ಕೆಲವರು ಮುಖ್ಯವಾಹಿನಿಗೆ ಬರುತ್ತಾರೆ. ಇನ್ನು ಕೆಲವರು ಎಲೆ ಮರೆಯ ಕಾಯಿಯಾಗಿಯೇ ಉಳಿಯುತ್ತಾರೆ. ನಮ್ಮೊಳಗಿನ ಅಪರೂಪದ ಸಾಧಕ ಇಬ್ರಾಹಿಂ ಸುತಾರ. 

ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ಅಪರೂಪದ ವ್ಯಕ್ತಿಯಾಗಿ ನಿಲ್ಲುತ್ತಾರೆ ಪದ್ಮಶ್ರೀ ವಿಜೇತ ಇಬ್ರಾಹಿಂ ಸುತಾರ. 

ಬಾಗಲಕೋಟೆಯವರಾದ ಇಬ್ರಾಹಿಂರವರು ಗೀತೆ, ವೇದಾಂತದಂಥ ವಿಷಯಗಳನ್ನು ತಿಳಿದುಕೊಂಡು ಅದನ್ನು ಸರಳೀಕರಿಸಿ ಜನರಿಗೂ ಆ ಗಟ್ಟಿ ಸತ್ವ ತಲುಪುವಂತೆ ಮಾಡಿದ ಅಪರೂಪದ ವ್ಯಕ್ತಿತ್ವ ಇವರದ್ದು.  
ಸರ್ವಧರ್ಮ ಭಾವೈಕ್ಯತೆಗೆ ಶ್ರಮಿಸುವ ಸುತಾರರು ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಭಾವೈಕ್ಯತೆಯ ಅರ್ಥವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಎಲ್ಲಾ ಧರ್ಮದವರನ್ನು ಗೌರವವಾಗಿ ಕಾಣುವಂತೆ ಹೇಳಿದ್ದಾರೆ.  ಜೊತೆಗೆ ನಿಜವಾದ ಗುರುವನ್ನು ಅರಿಯುವ ಬಗೆಯನ್ನು ಹೇಳಿದ್ದಾರೆ. 

ಅವರ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇಂತಹ ಅಪರೂಪದ ಸಾಧಕರಿಗೆ ಸಲಾಂ ಹೇಳದಿದ್ದರೆ ಹೇಗೆ? 

ಭಾವೈಕ್ಯತೆ ಬಗ್ಗೆ ಸುತಾರರು ಹೇಳುವುದನ್ನು ಕೇಳಿ.  

 

Follow Us:
Download App:
  • android
  • ios