Asianet Suvarna News Asianet Suvarna News

ಸಂದರ್ಶನ: ವರ್ಗ ಸಂಘರ್ಷದ ‘ಭೈರವಗೀತ’

ಡಾಲಿ ಖ್ಯಾತಿಯ ಧನಂಜಯ್ ಈಗ ‘ಭೈರವ ಗೀತ’ ಇಂದು ಬಿಡುಗಡೆಯಾಗುತ್ತಿದೆ. ‘ಟಗರು’ ನಂತರ ಮತ್ತೊಂದು ಬಗೆಯ ವಿಭಿನ್ನ ಮತ್ತು ವಿಶಿಷ್ಟ ಕತೆಯೊಳಗಡೆ ಪಕ್ಕಾ ರಗಡ್ ಲುಕ್‌ನ ಕತೆಯಲ್ಲಿ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಭೈರವ ಗೀತ’ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದೆ. ಹಾಗೆನೆ, ಈ ಚಿತ್ರದೊಂದಿಗೆ ಧನಂಜಯ್ ಟಾಲಿವುಡ್‌ಗೂ ಎಂಟ್ರಿ ಆಗುತ್ತಿದ್ದಾರೆ. ಹೀಗೊಂದು ವಿಶೇಷತೆ ಹೊಂದಿರುವ ‘ಭೈರವ ಗೀತ’ ಚಿತ್ರದ ಕುರಿತು ನಟ ಧನಂಜಯ್ ಇಲ್ಲಿ ಮಾತನಾಡಿದ್ದಾರೆ.

 

Exclusive interview of bhairava geetha
Author
Bengaluru, First Published Dec 7, 2018, 9:13 AM IST

ಎಕ್ಸೈಟ್‌ಮೆಂಟ್ ಇದೆ, ನಿರೀಕ್ಷೆಗಳೂ ಇವೆ..
ತುಂಬಾ ಎಕ್ಸೈಟ್‌ಮೆಂಟ್ ಇದೆ. ಯಾಕಂದ್ರೆ, ಅನೇಕ ಕಾರಣಕ್ಕೆ ವಿಶೇಷ ಎನಿಸಿದ ಸಿನಿಮಾವಿದು. ಈ ವಾರ ಕನ್ನಡದಲ್ಲಿ, ಮುಂದಿನ ವಾರ ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಸಹಜವಾಗಿಯೇ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ನನ್ನನ್ನು ಪರಿಚಯಿಸುತ್ತಿರುವ ಸಿನಿಮಾವಿದು ಅಂದ್ಮೇಲೆ ಇಲ್ಲಿನಷ್ಟೇ, ಅಲ್ಲಿಯ ಅವಕಾಶಗಳ ಬಗೆಗೂ ಸಾಕಷ್ಟು ನಿರೀಕ್ಷೆಗಳಿವೆ. ಹಾಗಂತ ಸಿನಿಮಾದ ಸೋಲು-ಗೆಲುವು ನಮ್ಮ ಕೈಯಲ್ಲಿಲ್ಲ. ಎಷ್ಟೇ ಚೆನ್ನಾಗಿ ಸಿನಿಮಾ ಮಾಡಿದರೂ, ಇವತ್ತಿನ ಪೈಪೋಟಿ ಹಾಗೂ ಚಿತ್ರಮಂದಿರಗಳ ಸಮಸ್ಯೆಗಳ ನಡುವೆ ಯಾರು ಗೆಲ್ತಾರೋ, ಯಾರು ಸೋಲ್ತಾರೋ ಗೊತ್ತೇ ಆಗುತ್ತಿಲ್ಲ. ಆದರೂ ಈ ಸಿನಿಮಾದ ಕತೆ ಜತೆಗೆ ಮೇಕಿಂಗ್ ಪ್ರೇಕ್ಷಕರಿಗೆ ಹಿಡಿಸುತ್ತದೆ ಎನ್ನುವ ನಂಬಿಕೆಯಿದೆ. ಅಂದುಕೊಂಡಂತೆ, ಇದು ಕನ್ನಡದ ಪ್ರೇಕ್ಷಕರಿಗೆ ಹಿಡಿಸಿದರೆ, ಇಲ್ಲಿ ಇನ್ನಷ್ಟು ಅವಕಾಶಗಳು ಸಿಗಬಹುದು. ಅತ್ತ ತೆಲುಗಿನಲ್ಲಿ ಗೆದ್ದರೆ ಅಲ್ಲಿಯೂ ನನಗೆ ಇನ್ನಷ್ಟು ಎಕ್ಸ್‌ಪೋಸರ್ಸ್ ಸಿಗಬಹುದು. 

ಆಕಸ್ಮಿಕವಾಗಿಯೇ ಸಿಕ್ಕ ಅವಕಾಶ ಇದು...
ಕನ್ನಡದ ಮಟ್ಟಿಗೆ ನಾನಿನ್ನು ಈಗಷ್ಟೇ ಬೆಳೆಯುತ್ತಿರುವ ನಟ. ಇಷ್ಟು ಬೇಗ ಟಾಲಿವುಡ್ ಕಡೆಗೆ ಹೋಗುತ್ತೇನೆಂದು ಭಾವಿಸಿರಲಿಲ್ಲ. ಆದರೂ ಅದಕ್ಕೆ ಕಾರಣವಾಗಿದ್ದು ‘ಟಗರು’ ಚಿತ್ರ. ರಾಮ್ ಗೋಪಾಲ್ ವರ್ಮ ‘ಟಗರು’ ಚಿತ್ರ ನೋಡಲು ಬೆಂಗಳೂರಿಗೆ ಬಂದರು. ಸಿನಿಮಾ ನೋಡಿ, ನನ್ನ ಪಾತ್ರವನ್ನು ಮೆಚ್ಚಿಕೊಂಡರು. ನಿನಗೊಂದು ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡುವೆ ಎಂದರು. ಕೊನೆಗದು ನಿಜವೂ ಆಯಿತು. ‘ಭೈರವಗೀತ’ ಶುರುವಿನ ಹೊತ್ತಿಗೆ ನನ್ನನ್ನು ಹೈದರಾಬಾದ್‌ಗೆ ಬರಲು ಹೇಳಿದರು. ಕ್ಯಾರೆಕ್ಟರ್ ಹೇಳಿದರು. ನೀವೇ ಹೀರೋ ಅಂದರು. ಅದೃಷ್ಟ ಎನ್ನುವ ಹಾಗೆ ಅದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ನಿರ್ಮಾಣವಾಯಿತು. ಇದೆಲ್ಲ ಜಸ್ಟ್ ಆಕಸ್ಮಿಕ. ಆ ಮೂಲಕ ಈಗ ಟಾಲಿವುಡ್‌ಗೂ ಪರಿಚಯವಾಗುತ್ತಿದ್ದೇನೆ ಎನ್ನುವ ಖುಷಿಯಿದೆ. ಆ ಖುಷಿ ಉಳಿಯಬೇಕಾದರೆ, ಅಲ್ಲಿ ಅವಕಾಶಗಳು ಸಿಗಬೇಕು. ಅದಕ್ಕೆ ಈ ಸಿನಿಮಾ ಎಷ್ಟರ ಮಟ್ಟಿಗೆ ಪ್ಲಾಟ್‌ಫಾರ್ಮ್ ಆಗುತ್ತೋ ಗೊತ್ತಿಲ್ಲ. ಆದರೆ, ಸಿನಿಮಾ ಟ್ರೇಲರ್ ಅನ್ನು ಅಲ್ಲಿನ ಅನೇಕರು ಮೆಚ್ಚಿಕೊಂಡಿದ್ದಾರೆ. ಪ್ರಶಂಸೆ ಹೇಳಿದ್ದಾರೆ. ಸಿನಿಮಾ ತೆರೆ ಕಂಡ ಮೇಲೆ ಇದು ಇನ್ನೊಂದು ಹಂತಕ್ಕೂ ತೆಗೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆಯಲ್ಲೂ
ಇದ್ದೇನೆ.

ಬಡವ ಮತ್ತು ಶ್ರೀಮಂತನ ನಡುವಿನ ಹೋರಾಟ
ಸಿನಿಮಾದ ಟ್ರೇಲರ್, ಟೀಸರ್ ಹಾಗೂ ಫಸ್ಟ್ ಲುಕ್ ನೋಡಿದವರಿಗೆ ಕತೆಯ ಒನ್‌ಲೈನ್ ಗೊತ್ತಾಗಿರುತ್ತೆ. ಮೇಲ್ನೋಟದ ಲುಕ್‌ನಲ್ಲೇ ಅಲ್ಲಿನ ಸಂಘರ್ಷ ಏನು ಅನ್ನೋದು ತಿಳಿದಿರುತ್ತದೆ. ಅದಕ್ಕೆ ತಕ್ಕಂತೆಯೇ ಇದು ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟಗಾಥೆ. ಇದು ಇವತ್ತಿನ ಕತೆಯಲ್ಲ. ತಲೆಮಾರುಗಳಿಂದಲೂ ಈ ಸಂಘರ್ಷ ನಡೆಯುತ್ತಲೇ ಇದೆ. ಈ ಕತೆಯೂ ಅದನ್ನೇ ಹೇಳುತ್ತದೆ. ನಾಯಕ ಒಬ್ಬ ಲೇಬರ್ ಕ್ಲಾಸ್ ಹುಡುಗ. ಕಾರ್ನಾಡರ ‘ಹಯವದನ’ ನಾಟಕದ ಕಪಿಲನ ಹಾಗೆ. ಅವನ ಕೆಚ್ಚು, ರಚ್ಚು, ಆವೇಷ ಎಲ್ಲವೂ ಅಲ್ಲಿನ ಭೂಮಾಲಿಕನ ವಿರುದ್ಧ. ಹಾಗಾಗಿಯೇ ಚಿತ್ರವನ್ನು ಬಹುತೇಕ ರಗಡ್ ಲುಕ್‌ನಲ್ಲೇ ತೆರೆಗೆ ತರಲಾಗಿದೆ. ಕತೆಯನ್ನು ನೈಜತೆಯಲ್ಲಿ ತೋರಿಸಬೇಕು ಎನ್ನುವ ಕಾರಣಕ್ಕೆ ಹಸಿ ಹಸಿ ಹಿಂಸೆಯ ಸೀನ್‌ಗಳನ್ನು ತೆರೆಗೆ ತರಲಾಗಿದೆ. ಅದು ಹಿಂಸೆಯ ವೈಭವೀಕರಣದಂತೆ ಕಂಡರೂ, ಸಿನಿಮಾ ನೋಡುವಾಗ ಅದರ ವಾಸ್ತವತೆ ಅರ್ಥವಾಗುತ್ತೆ.

Exclusive interview of bhairava geetha

ಪ್ರೀತಿಯ ನೈಜತೆ ತೋರಿಸಲು ಅದೂ ಕೂಡ ಬೇಕು..
ಹುಡುಗ-ಹುಡುಗಿಯ ಪ್ರೀತಿಯನ್ನು ಈಗ ರೂಪಕದಲ್ಲಿ ತೋರಿಸುವ ಕಾಲ ಈಗಿಲ್ಲ. ಕಾಲ ಸಾಕಷ್ಟು ಬದಲಾಗಿದೆ. ಹಾಲಿವುಡ್‌ನಲ್ಲಾಗಲಿ, ಬಾಲಿವುಡ್‌ನಲ್ಲಾಗಲಿ ಲಿಪ್ ಲಾಕ್ ಅನ್ನೋದು ಮೈಲಿಗೆ ಅಂತೇನು ಉಳಿದಿಲ್ಲ. ಕತೆಯ ಜತೆಗೆ ನೋಡುತ್ತಾ ಹೋದಾಗ ಅದು ಅಶ್ಲೀಲ ಎನಿಸಲು ಸಾಧ್ಯವೇ ಇಲ್ಲ. ಅದರಲ್ಲೂ ಒಬ್ಬ ಲೇಬರ್ ಕ್ಲಾಸ್ ಹುಡುಗ ಒರಟುತನ, ಆವೇಷದ ವ್ಯಕ್ತಿತ್ವಕ್ಕೆ ತಕ್ಕಂತೆ ಆತನ ಪ್ರೀತಿ, ಪ್ರೇಮದ ಪರಿಯನ್ನು ಹೇಳಬೇಕಾದರೆ, ಲಿಪ್‌ಲಾಕ್ ಕೂಡ ಸಹಜವಾಗಿರುತ್ತೆ. ಅದರ ತೀವ್ರತೆ ತೋರಿಸುವುದಕ್ಕಾಗಿ ಲಿಪ್‌ಲಾಕ್ ಇಲ್ಲಿ ಬಂದಿದ್ದು ಬಿಟ್ಟರೆ ಇದು ಯಾವುದೇ ಗಿಮಿಕ್ ಆಗಲಿ, ಅಥವಾ ಪ್ರೇಕ್ಷಕರನ್ನು ಮುಜುಗರಕ್ಕಿಡು ಮಾಡುವುದಕ್ಕಾಗಲಿ ಅಲ್ಲ.

ನಾನಗ್ಯಾವ ವ್ಯತ್ಯಾಸವೂ ಕಾಣಲಿಲ್ಲ..
ಕನ್ನಡ ಅಥವಾ ತೆಲುಗು ಅಂತಲ್ಲ, ಅದು ಯಾವುದೇ ಉದ್ಯಮವಾದರೂ ಒಂದು ಕತೆ ಅಥವಾ ತಂಡದ ಮೇಲೆ ಒಂದು ಸಿನಿಮಾದ ಮೇಕಿಂಗ್ ವಿಶೇಷ ಎನಿಸುತ್ತೆ, ಅದ್ಭುತ ಎನ್ನುವಂತೆ ಕಾಣುತ್ತೆ. ನನಗೂ ಹಾಗೆ. ಟಾಲಿವುಡ್ ಅಂದಾಕ್ಷಣ ಹಾಗಂತೆ, ಹೀಗಂತೆ ಅಂದುಕೊಳ್ಳುವ ಮಾತುಗಳ ನಡುವೆ ಈ ಸಿನಿಮಾದ ಚಿತ್ರೀಕರಣದ ಅನುಭವ ವಿಶೇಷ ಎನಿಸಿದ್ದು, ಅದರ ಕತೆಗೆ ತಕ್ಕಂತೆ ಅದನ್ನು ತೆರೆಗೆ ತರಲು ಒಂದು ಪ್ರಬುದ್ಧವಾದ ತಂಡ ಅಲ್ಲಿದಿದ್ದು. ವರ್ಮಾ ಸಿನಿಮಾವಿದು ಅಂತೆಂದರೂ, ಅವರು ಎಂದಿಗೂ ಸೆಟ್‌ಗೆ ಬಂದಿಲ್ಲ. ಅವರು ತಮ್ಮ ಕೆಲಸಗಳಲ್ಲಿ ಬ್ಯುಸಿಯಿದ್ದುಕೊಂಡೆ ಪ್ರತಿದಿನ ಚಿತ್ರೀಕರಣದ ಮಾಹಿತಿ ಪಡೆಯುತ್ತಿದ್ದರು. ರಫ್ ವಿಡಿಯೋ ತರಿಸಿಕೊಂಡು ಹಾಗಲ್ಲ, ಹೀಗೆ ಅಂತ\ ಮಾರ್ಗದರ್ಶನ ನೀಡುತ್ತಿದ್ದರು. ಅದನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದು ಕೇವಲ 22 ವರ್ಷದ ನಿರ್ದೇಶಕ. ಹಾಗಾಗಿ ನನಗೆ ಸ್ಯಾಂಡಲ್‌ವುಡ್ ಅಥವಾ ಟಾಲಿವುಡ್ ಎನ್ನುವ ಯಾವುದೇ ವ್ಯತ್ಯಾಸ ಕಾಣಲಿಲ್ಲ. 

ಕೀಳಾಗಿ ನೋಡುವವರಿಗೆ ಎಚ್ಚರಿಕೆ
ಸಮಾಜದಲ್ಲಿ ಯಾರನ್ನೂ ಯಾರೂ ಸಹ ಕೀಳಾಗಿ ನೋಡಬಾರದು. ಹಾಗೆ ಕೀಳಾಗಿ ನೋಡಿ ಅವನ ಮೇಲೆ ದೌರ್ಜನ್ಯ ಎಸಗಿದರೆ ಏನಾಗುತ್ತದೆಂಬುದನ್ನು ತಣ್ಣನೆಯ ಕ್ರೌರ್ಯದ ಮೂಲಕ ತೋರಿಸಲಾಗಿದೆ. ಕನ್ನಡದಲ್ಲೂ ಇಂತಹ ಕತೆಗಳು ಬಂದಿರಬಹುದು. ಆದರೆ ಈ ಕತೆಯನ್ನು ನಿರೂಪಿಸಿದ ರೀತಿ ವಿಶೇಷವಾಗಿದೆ. ಎಲ್ಲರಲ್ಲೂ ಒಂದು ಕ್ಷಣ ಯೋಚನೆ ಹುಟ್ಟಿಸುವ ಹಾಗೆ ಪ್ರತಿ ದೃಶ್ಯಗಳು ಬಂದಿವೆ. ಕೀಳಾಗಿ ಕಾಣುವ ಮನಸುಗಳು ನಮ್ಮ ನಡುವೆ ಇದ್ದರೆ ಒಮ್ಮೆ ಭೈರವಗೀತ ಸಿನಿಮಾ ನೋಡಿದರೆ ಅವರ ಮನಸ್ಸು ಬದಲಾಗುತ್ತದೆ. ಬದಲಾಗದಿದ್ದರೆ ಏನಾಗುತ್ತದೆಂಬ ಎಚ್ಚರಿಕೆಯೂ ಸಿನಿಮಾದಲ್ಲಿದೆ. ಈ ಸಿನಿಮಾದ ಸ್ಟಿಲ್‌ಗಳನ್ನು ನೋಡುವಂತೆ ಇದು ಹಸಿಬಿಸಿ ಚಿತ್ರವಲ್ಲ. ಮಹತ್ವದ ಸಿನಿಮಾ.

ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಮೂರು
ಸಿನಿಮಾ ಜರ್ನಿ ಸೊಗಸಾಗಿದೆ. ಡಾಲಿ ಸಕ್ಸಸ್ ಬೆನ್ನಲೇ ಕನ್ನಡದಲ್ಲಿ ಸಾಕಷ್ಟು ಆಫರ್ ಬರುತ್ತಿವೆ. ಸೂರಿ ಜತೆಗೆ ಮತ್ತೆ ಪಾಪ್‌ಕಾರ್ನ್ ಮಂಕಿ ಟೈಗರ್ ಶುರುವಾಗಿದೆ.ಡಾಲಿ ಹೆಸರಲ್ಲೇ ಒಂದು ಸಿನಿಮಾ ಬರುವುದು ಗ್ಯಾರಂಟಿ ಆಗಿದೆ. ಅದಿನ್ನು ಮಾತುಕತೆ ಹಂತದಲ್ಲಿದೆ. ಅತ್ತ ‘ಭೈರವ ಗೀತ ’ ಚಿತ್ರದ ಕ್ರೇಜ್‌ನಲ್ಲೇ ತೆಲುಗಿನಲ್ಲಿ ಎರಡು ಕತೆ ಕೇಳಿದ್ದೇನೆ. ಅವರೆಡು ಚೆನ್ನಾಗಿವೆ.ಒಪ್ಪಿಕೊಳ್ಳುವುದು ಬಾಕಿಯಿದೆ.ಅತ್ತ ತಮಿಳಿನಲ್ಲೂ ಒಂದು ಆಫರ್ ಬಂದಿದೆ. ಹೀರೋ ಜತೆಗೆಯೇ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ಸದ್ಯಕ್ಕೆ ಕೈ ತುಂಬಾ ಆಫರ್ ಇವೆ. ಮುಂದೆ ‘ಭೈರವ ಗೀತ ’ನನ್ನ ಕರಿಯರ್‌ಗೆ ಎಂತಹ ಪ್ಲಾಟ್‌ಫಾರ್ಮ್ ಸೃಷ್ಟಿಸಬಹುದು ಎನ್ನುವುದನ್ನು ಕಾತರದಲ್ಲಿ ಕಾಯುತ್ತಿದ್ದೇ

 

Follow Us:
Download App:
  • android
  • ios