Asianet Suvarna News Asianet Suvarna News

ಕ್ರಿಸ್ಮಸ್‌ಗೆ ದಾಸನ ‘ಡಿ53’ ಪೋಸ್ಟರ್ ರಿಲೀಸ್!

ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುಗಡೆಯ ಹಂತದಲ್ಲಿರುವಾಗಲೇ, ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ, ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಹೇಗಿದೆ ನೋಡಿ....

Challenging star Darshan D 53 robert poster release
Author
Bengaluru, First Published Dec 25, 2018, 11:58 AM IST

ದರ್ಶನ್ - ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಚಿತ್ರ ನೋಡಲು ಕಾತುರದಿಂದ ಕಾಯುತ್ತಿರೋ ಚಿತ್ರ ಕಸಿಕರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಕ್ರಿಸ್ಮಸ್‌ಗೆ ಈ ಚಿತ್ರ ತಂಡ ಸೂಪರ್ ಸಪ್ರೈಸ್ ನೀಡಿದೆ.

ತರುಣ್ ಸುಧೀರ್ ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಚಿತ್ರ 'ಚೌಕ'ದಲ್ಲಿ ರಾಬರ್ಟ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಸಣ್ಣ ಪಾತ್ರವಾದರೂ ಆ ಪಾತ್ರಕ್ಕೊಂದು ತೂಕವಿತ್ತು. ಈಗ ಅದೇ ಪಾತ್ರದ ಹೆಸರನ್ನಿಟ್ಟಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

‘ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ #D53 ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಿಲಾಗಿದೆ. ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ಈ ಚಿತ್ರ ನಿರ್ದೇಶಿಸಲಿದ್ದಾರೆ. 2019 ರಿಂದ ಚಿತ್ರ ಶೂಟಿಂಗ್ ಶುರುವಾಗಲಿದೆ . ಎಲ್ಲರಿಗೂ ಕ್ರಿಸ್ಮಸ್ ಹಾರ್ದಿಕ ಶುಭಾಷಯಗಳು,’ ಎಂದು ಟ್ವೀಟ್ ಮಾಡಿದ್ದಾರೆ.

 

ಇದು ದರ್ಶನ್ ಅಭಿನಯದ 53ನೇ ಚಿತ್ರವಾಗಿದ್ದು ಈಗಾಗಲೇ ಚಿತ್ರದ ಸ್ರ್ಕಿಪ್ಟ್ ಕೆಲಸ ಮುಗಿಸಿರುವ ಚಿತ್ರ ತಂಡ ಹೊಸ ವರ್ಷಾರಂಭದಲ್ಲಿ ಶೂಟಿಂಗ್ ಆರಂಭಿಸಲಿದೆ.

Follow Us:
Download App:
  • android
  • ios