Asianet Suvarna News Asianet Suvarna News

ಎಕ್ಸ್‌ಪೋಸ್‌ಗೆ ನೋ ಪ್ರಾಬ್ಲೆಮ್ ಎಂದ ಕೃಷಿ ತಾಪಂಡ

ಕೃಷಿ ತಾಪಂಡ ಫಾರ್ಮ್‌ಗೆ ಬಂದಿದ್ದಾರೆ. ‘ಅಕಿರಾ’ ಚಿತ್ರದಿಂದ ಚಿತ್ರರಂಗಕ್ಕೆ ಬಂದ ಈಕೆಗೆ ಮುಂದೆ ‘ಬಿಗ್‌ಬಾಸ್’ ಮನೆಗೆ ಹೋಗುವ ಅವಕಾಶ ಸಿಕ್ಕಿ, ಆ ಮನೆಯಿಂದ ಆಚೆ ಬಂದ ಮೇಲೆ ಕೃಷಿ ಕಂಡ ತಿರುವುಗಳೇನು?

Actress Krishi Thapanda Ready to Krushi Thapanda
Author
Bengaluru, First Published Apr 23, 2018, 4:23 PM IST

ಬೆಂಗಳೂರು (ಏ. 23): ಕೃಷಿ ತಾಪಂಡ ಫಾರ್ಮ್‌ಗೆ ಬಂದಿದ್ದಾರೆ. ‘ಅಕಿರಾ’ ಚಿತ್ರದಿಂದ ಚಿತ್ರರಂಗಕ್ಕೆ ಬಂದ ಈಕೆಗೆ ಮುಂದೆ ‘ಬಿಗ್‌ಬಾಸ್’ ಮನೆಗೆ ಹೋಗುವ ಅವಕಾಶ ಸಿಕ್ಕಿ, ಆ ಮನೆಯಿಂದ ಆಚೆ ಬಂದ ಮೇಲೆ ಕೃಷಿ ಕಂಡ ತಿರುವುಗಳೇನು?

ಬಿಗ್‌ಬಾಸ್ ಶೋನಿಂದ ಬಂದ ನಿಮಗೆ ತುಂಬಾ ಅವಕಾಶಗಳು ಸಿಕ್ಕಿರಬೇಕಲ್ಲ?
ಯಾರು ಹೇಳಿದ್ದು? ಬಿಗ್‌ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದರೆ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತವೆ ಎಂಬುದು ತಪ್ಪು ಕಲ್ಪನೆ. ನನಗಂತೂ ಅಂಥ ಯಾವ ಅವಕಾಶಗಳು ಸಿಕ್ಕಿಲ್ಲ.
 
ಹಾಗಾದರೆ ಇಂಥ ಶೋಗಳಿಂದ ನಿಮ್ಮಂಥ ಕಲಾವಿದರಿಗೆ ಹೇಗೆ ಉಪಯೋಗ?
ನಾಲ್ಕು ಜನಕ್ಕೆ ನಮ್ಮ ಹೆಸರು ಗೊತ್ತಾಗುತ್ತದೆ. ಇವರು ಇಂಥ ಸಿನಿಮಾಗಳಲ್ಲಿ ನಟಿಸಿರುವ ನಟಿ ಅಂತ ಮಾತನಾಡಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಇದ್ದಾಗ 100 ಜನಕ್ಕೆ ಗೊತ್ತಾಗಿರುತ್ತೇವೆ. ಅದೇ  ಶೋಗೆ ಹೋಗಿ ಬಂದ ಮೇಲೆ ಸಾವಿರ ಜನಕ್ಕೆ ನಮ್ಮ ಹೆಸರು ಗೊತ್ತಾಗುತ್ತದೆ. ನಮ್ಮನ್ನು ಪರಿಚಯ ಮಾಡಿಕೊಳ್ಳುವುದಕ್ಕೆ  ಬಿಗ್‌'ಬಾಸ್‌ನಂತಹ ಶೋಗಳು ಒಂದು ವೇದಿಕೆ ಅಷ್ಟೆ.

ನೀವು ಬಿಗ್‌ಬಾಸ್‌ನಿಂದ ಮೇಲೆ ತುಂಬಾ ಕಥೆ ಕೇಳಿದ್ದೀರಂತಲ್ಲ?
ಮೊದಲೇ ಹೇಳಿದ್ನಲ್ಲ, ನಾಲ್ಕು ಜನಕ್ಕೆ ನಮ್ಮ ಹೆಸರು ಗೊತ್ತಾಗುತ್ತದೆ. ಪ್ರಸಿದ್ಧಿಯಿಂದ ಒಂದಿಷ್ಟು ಜನ ಬಂದು ಕತೆ ಹೇಳುತ್ತಾರೆ. ಹಾಗೆ ನಾನು ೨೦ ಕತೆಗಳನ್ನು ಕೇಳಿದ್ದೇನೆ. ಅದರಲ್ಲಿ ನಾಲ್ಕು ಕತೆಗಳು ನನಗೆ ಇಷ್ಟವಾದವು. ಕತೆ ಕೇಳಿದ ಮೇಲೆ ಆ ಕತೆಯಲ್ಲಿ ಕಾಣಿಸಿಕೊಳ್ಳುವುದು, ಬಿಡುವುದು ನಮ್ಮ ಪ್ರತಿಭೆ ಮೇಲೆ ನಿಂತಿರುತ್ತದೆ ಹೊರತು, ಪ್ರಭಾವದ ಮೇಲಲ್ಲ.

ನಿಮಗೆ ಚೆನ್ನಾಗಿದೆ ಅನಿಸಿದ ಆ ನಾಲ್ಕು ಕತೆಗಳು ಸಿನಿಮಾ ಆಗುತ್ತವೆಯೇ?
ಗೊತ್ತಿಲ್ಲ. ಆದರೆ, ನಾಲ್ಕು ಕತೆಗಳು ಚೆನ್ನಾಗಿದ್ವು ಅಂತಷ್ಟೆ ಹೇಳಿದೆ. ಆ ಸಿನಿಮಾಗಳು ಬೇರೆ ಬೇರೆ ಕಾರಣಗಳಿಗೆ ಕೈ ತಪ್ಪಿದವು. ಕೆಲವನ್ನು ನಾನೇ ರಿಜೆಕ್ಟ್ ಮಾಡಿದೆ. ಅದಕ್ಕೆ ಸಾಕಷ್ಟು ಕಾರಣಗಳಿವೆ. 

ಅಂದ್ರೆ, ನಿಮಗೆ ಪಾತ್ರಗಳ ಆಯ್ಕೆಯಲ್ಲಿ ಏನಾದರು ಷರತ್ತುಗಳಿವೆಯೇ?
ನಾನು ಯಾವ ರೀತಿ ಪಾತ್ರ ಮಾಡಕ್ಕೂ ಸಿದ್ಧ. ‘ಕಹಿ’ ಚಿತ್ರದಲ್ಲಿ  ಡಿ-ಗ್ಲಾಮರ್ ಪಾತ್ರ ಮಾಡಿದ್ದೇನೆ. ಅದೇ ರೀತಿ ಗ್ಲಾಮರ್, ಎಕ್ಸ್’ಪೋಸ್ ಮಾಡುವಂತಹ ಯಾವ ಪಾತ್ರ ಮಾಡಕ್ಕೂ ನಾನು ಸಿದ್ಧ. ಕತೆಗೆ ಪೂರಕವಾಗಿದ್ದರೆ ಪಾತ್ರಗಳ ವಿಚಾರದಲ್ಲಿ ನನ್ನದೇನು ತಕರಾರು ಇಲ್ಲ.

ಈಗ ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
ಈಗ ಮೂರು ಸಿನಿಮಾಗಳಿವೆ. ಕನ್ನಡಕ್ಕಾಗಿ ಒಂದನ್ನು ಒತ್ತಿ, ಅಲ್ಪವಿರಾಮ ಹಾಗೂ ರೂಪಾಯಿ. ಈ ಪೈಕಿ ‘ಅಲ್ಪವಿರಾಮ’ ವಿಭಿನ್ನ ಚಿತ್ರ. ೫ ರೀತಿಯ ಕ್ಯಾರೆಕ್ಟರ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮುಸ್ಲಿಂ ಹುಡುಗಿ, ಜ್ಯೂನಿಯರ್ ಆರ್ಟಿಸ್ಟ್, ವೇಶ್ಯೆ, ಬರ್ಖಾ ದತ್ ರೀತಿಯ ಪತ್ರಕರ್ತೆ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಿಶೋರ್ ಅವರು ಈ ಚಿತ್ರದ ನಾಯಕ. ‘ರುಪಾಯಿ’ ಈಗಷ್ಟೆ ಸೆಟ್ಟೇರಿದೆ. ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರೀಕರಣ ಮುಗಿದಿದೆ. ಇದರ ಜತೆಗೆ ಒಂದು ಹಾಲಿವುಡ್‌ನ ವೆಬ್ ಸರಣಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿರುವೆ.
 

ಆ ವೆಬ್ ಸರಣಿಯ ಕತೆ ಏನು? ಯಾವಾಗ ಶುರು?
ಕೆನಡಾದ ಪ್ರತಿಷ್ಠಿತ ಸಂಸ್ಥೆ ನಿರ್ಮಾಣ ಮಾಡುತ್ತಿರುವ ವೆಬ್ ಸರಣಿ  ಇದೆ. ಡಿಸೆಂಬರ್‌ನಿಂದ ಇದರ ಚಿತ್ರೀಕರಣ ನಡೆಯಲಿದೆ. ಮೂರು ತಿಂಗಳು ಕೆನಡಾದಲ್ಲೇ ಇರಬೇಕು. ಒಂದು ತಿಂಗಳು ಪೂರ್ವ ತರಬೇತಿ ಮಾಡಿಕೊಂಡ ಮೇಲೆಯೇ ಚಿತ್ರೀಕರಣಕ್ಕೆ  ಹೋಗುವುದು. ಇದು ಆದಿವಾಸಿಗಳ ಕತೆಯನ್ನು ಒಳಗೊಂಡ ಸರಣಿ. ನಾನು ಟ್ರೈಬಲ್‌ಗಳ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂಡಿಯನ್ ವಾರಿಯರ್ ಪಾತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಈ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ?
ಇದರ ಪ್ರೊಡಕ್ಷನ್‌ನಲ್ಲಿ ಮಲಯಾಳಂನ ಒಬ್ಬ ನಿರ್ಮಾಪಕರು ತೊಡಗಿಸಿಕೊಂಡಿದ್ದಾರೆ. ಅವರ ಮೂಲಕ ನನಗೆ ಸಿಕ್ಕಿರುವ ಅವಕಾಶ ಇದು. ಡಿಸೆಂಬರ್‌ನಲ್ಲಿ ನನ್ನ ಪಾತ್ರಕ್ಕೆ ತರಬೇತಿ. ಜನವರಿಯಿಂದ ಚಿತ್ರೀಕರಣ ನಡೆಯಲಿದೆ. ಮೂರು ತಿಂಗಳು ಕೆನಡಾದಲ್ಲೇ ಇರಬೇಕು. ಒಂದು ತಿಂಗಳು ಪೂರ್ವ ತರಬೇತಿ ಮಾಡಿಕೊಂಡ ಮೇಲೆಯೇ ಚಿತ್ರೀಕರಣಕ್ಕೆ ಹೋಗುವುದು. ಇದು ಆದಿವಾಸಿಗಳ ಕತೆಯನ್ನು ಆಧರಿಸಿದ ಚಿತ್ರ. ನಾನು ಟ್ರೈಬಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂಡಿಯನ್ ವಾರಿಯರ್ ಪಾತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡಿದ್ದಾರೆ. 

ಈ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ? 
ಇದರ ಪ್ರೊಡಕ್ಷನ್’ನಲ್ಲಿ ಒಬ್ಬ ನಿರ್ಮಾಪಕರು ತೊಡಗಿಸಿಕೊಂಡಿದ್ದಾರೆ. ಅವರ ಮೂಲಕ ನನಗೆ ಸಿಕ್ಕಿರುವ ಅವಕಾಶ ಇದು. ಜನವರಿಯಿಂದ ಚಿತ್ರೀಕರಣ ನಡೆಯಲಿದೆ. ಮೂರು ತಿಂಗಳು ಇಂಡಿಯಾಗೆ ಬರುವಂತಿಲ್ಲ. 

-ಆರ್. ಕೇಶವಮೂರ್ತಿ 

Follow Us:
Download App:
  • android
  • ios