Asianet Suvarna News Asianet Suvarna News

ಕನ್ನಡ ಚಿತ್ರರಂಗದ ಹೊಸ ಫಸಲು: ‘ಅಮೃತ’ದಂತಹ ಕನ್ನಡಕ್ಕೆ ಅಯ್ಯರ್ ಎಂಟ್ರಿ!

ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಕನ್ನಡವೇ ಮಾತೃ ಭಾಷೆ. ಆದರೂ, ತಮಿಳು ಚಿತ್ರರಂಗದ ಮೂಲಕ ಕನ್ನಡಕ್ಕೆ ಬಂದ ಕನ್ನಡತಿ ಅಮೃತಾ ಅಯ್ಯರ್. ಅದರಲ್ಲೂ ಕನ್ನಡದಲ್ಲಿ ಸಿಕ್ಕ ಮೊದಲ ಅವಕಾಶವೇ ವಿಶೇಷವಾದದ್ದು. ಎಷ್ಟು ಜನರಿಗೆ ಇಂತಹ ಅವಕಾಶ ಸಿಗುತ್ತೋ ಗೊತ್ತಿಲ್ಲ, ರಾಜ್ ಕುಟುಂಬದ ಕುಡಿ  ವಿನಯ್ ರಾಜ್ ಕುಮಾರ್ ಸಿನಿಮಾಕ್ಕೆ ನಾಯಕಿ ಆಗುವ ಮೂಲಕ ಕನ್ನಡದಲ್ಲಿ ನಟಿ ಆಗಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ ಅಮೃತಾ. ದೇವನೂರು ಚಂದ್ರು ನಿರ್ದೇಶನ ಗ್ರಾಮಾಯಣಕ್ಕೆ ನಾಯಕಿ. ಈಗಷ್ಟೇ ಆ ಚಿತ್ರದ ಮೊದಲ ಟೀಸರ್ ಹೊರ ಬಂದಿದ್ದು, ಅಲ್ಲಿರುವ ವಿನಯ್ ಗೆಟಪ್, ಲುಕ್,  ಚಿತ್ರದ ಕತೆ ಎಲ್ಲವೂ ವಿಶೇಷ. ಆ ಚಿತ್ರದೊಂದಿಗೆ ಕನ್ನಡದಲ್ಲಿ ಅಮೃತಾ ಸಿನಿಪಯಣ ಶುರುವಾಗುತ್ತಿದೆ.

10 best youngest hottest actress Amrutha Ayyer from sandalwood
Author
Bangalore, First Published Nov 8, 2018, 4:44 PM IST

1. ಹುಟ್ಟಿದ್ದು ಚೆನ್ನೈ, ಬೆಳೆದಿದ್ದು ಬೆಂಗಳೂರು. ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿದಿದೆ. ಇನ್ನಷ್ಟು ಓದುವ ಆಸೆಯಿದೆ. ಕರೆಸ್ಪಾಂಡೆನ್ಸ್  ತಗೋತೀದಿನಿ. ಸದ್ಯಕ್ಕೆ ಸಿನಿಮಾವೇ ಪ್ರೊಪೇಷನ್ ಅನ್ಕೊಂಡಿದ್ದೇನೆ. ತಮಿಳಿನಲ್ಲಿ ಮೂರು ಸಿನಿಮಾ ಆದವು. ಗ್ರಾಮಾಯಣದ ಮೂಲಕ ಈಗ ಕನ್ನಡದಲ್ಲಿ ಕೆರಿಯರ್ ಸ್ಟಾರ್ಟ್ ಆಗಿದೆ. ತುಂಬಾನೆ ಖುಷಿಯಿದೆ. ಹಾಗೆನೆ ಎಕ್ಸೈಟ್‌ಮೆಂಟ್ ಕೂಡ ಇದೆ. ನನ್ನನ್ನು ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಅನ್ನೋದು  ಎಕ್ಸೈಟ್‌ಮೆಂಟ್ ಹಿಂದಿನ ಕಾರಣ.

2. ಆ್ಯಕ್ಟಿಂಗ್ ಜರ್ನಿ ತುಂಬಾನೆ ಆಕಸ್ಮಿಕವಾಗಿ ಶುರುವಾದದ್ದು. ಚಿಕ್ಕವಯಸ್ಸಿನಿಂದಲೂ ನಟಿ ಆಗ್ಬೇಕು ಅನ್ನೋ ಆಸೆ ಇತ್ತಾದರೂ, ಅದು ಈಡೇರುತ್ತೆ ಅಂತ ನ್ಕೊಂಡಿರಲಿಲ್ಲ. ಅದೆಲ್ಲ ಹೇಗಾಯಿತೋ ಗೊತ್ತಿಲ್ಲ, ಈಗ ನಾನೀಗ ನಟಿ. ಕಾಲೇಜು ದಿನಗಳಲ್ಲೇ ಭರತ ನಾಟ್ಯ ಜತೆಗೆ ಡಾನ್ಸ್ ಕಲಿತುಕೊಂಡಿದ್ದು ಒಂದ್ರೀತಿ ಸಿನಿಮಾದ ಮೇಲಿನ ಸೆಳೆತ ಹೆಚ್ಚಾಗುವ ಹಾಗೆ ಮಾಡಿತು.ಅವಕಾಶ ಸಿಕ್ಕರೆ ಒಂದ್ ಕೈ ನೋಡೋಣ ಅಂತೆಂದುಕೊಳ್ಳುತ್ತಿದ್ದಾಗ ್ರೆಂಡ್ ಒಂದು ಶಾರ್ಟ್ ಮೂವೀ ಮಾಡಿದ. ಆದ್ಕೆ ನಾನೇ ಹೀರೋಯಿನ್ ಆಗಿ ಸೆಲೆಕ್ಟ್ ಆದೆ. ಆತನೇ ಅದ್ನ ಡೈರೆಕ್ಟ್ ಮಾಡಿದ್ದು. ಅದು ಯುಟ್ಯೂಬ್‌ಗೆ ರಿಲೀಸ್ ಆದ ನಂತರ ಒಳ್ಳೆಯ ರೆಸ್ಪಾನ್ಸ್ ಸಿಕ್ತು, ಅದನ್ನು ನೋಡಿಯೇ ಮೊಟ್ಟ ಮೊದಲ ಬಾರಿಗೆ ತಮಿಳಿನಲ್ಲಿ ಪಡೆವೀರನ್ ಚಿತ್ರಕ್ಕೆ ಸೆಲೆಕ್ಟ್ ಆದೆ.

3. ಮೊದಲ ಸಿನಿಮಾ ನನ್ನ ಪಾಲಿಗೆ ತುಂಬಾನೆ ವಿಶೇಷವಾದದ್ದು. ಮಣಿರತ್ಮಂ ಬಳಿ ಸಹಾಯಕ ನಿರ್ದೇಶಕರಾಗಿದ್ದ ಧನ್ ಈ ಸಿನಿಮಾದ ನಿರ್ದೇಶಕ. ಹೆಸರಾಂತ ಗಾಯಕ ಕೆ.ಜೆ. ಏಸುದಾಸ್ ಪುತ್ರ ವಿಜಯ್ ಎಸುದಾಸ್ ಈ ಚಿತ್ರದ ನಾಯಕ. ಹಾಗೆಯೇ ಇಳಯರಾಜ್ ಪುತ್ರ ಕಾರ್ತಿಕ್ ರಾಜ್ ಇದರ ಸಂಗೀತ ನಿರ್ದೇಶಕ. ಇಷ್ಟೆಲ್ಲ ವಿಶೇಷ ಎನಿಸಿದ್ದ ಈ ಚಿತ್ರಕ್ಕೆ ಅವಕಾಶ ಸಿಕ್ಕಿದ್ದೇ ಅದೃಷ್ಟ ಎನ್ನುವ ಹಾಗಿತ್ತು. ಆಫರ್ ಬಂದ ತಕ್ಷಣವೇ ಒಪ್ಪಿಕೊಂಡೆ. ಆದ್ರೆ, ಸಿನಿಮಾ ಅಂತ ಮೊದಲು ಕ್ಯಾಮರಾ ಎದುರಿಸಿದ್ದು ಅದೇ ಮೊದಲು. ತುಂಬಾನೆ ನರ್ವಸ್ ಆಗಿದ್ದೆ. ಆದ್ರೆ ಅವರೆಲ್ಲರ ಸಹಾಯಕರ, ಸಲಹೆಯ ಮೂಲಕ ಎಂಜಾಯ್ ಮಾಡುತ್ತಾ ಚಿತ್ರೀಕರಣ ಮುಗಿಸಿದೆ.

4.  ಪಾತ್ರ ಅನ್ನೋದು ಹೀಗೆ ಇರಬೇಕು ಅಂತ ಈಗಲೇ ನಿರ್ದೇಶಕರಿಗೆ ಡಿಮ್ಯಾಂಡ್ ಮಾಡುವಷ್ಟು ನಾನಿನ್ನು ಬೆಳೆದಿಲ್ಲ. ಹೊಸ ರೀತಿಯ ಎಲ್ಲಾ ಬಗೆಯ ಪಾತ್ರಗಳಲ್ಲೂ ಅಭಿನಯಿಸಬೇಕು, ಪ್ರೇಕ್ಷಕರ ಮುಂದೆ ನಟಿ ಆಗಿ ಗುರುತಿಸಿಕೊಳ್ಳಬೇಕು ಅನ್ನೋ ಆಸೆಯಂತೂ ಇದ್ದೇ ಇದೆ.

5. ನಂಗೆ ಶ್ರೀದೇವಿ ಅಂದ್ರೆ ಪ್ರಾಣ. ಅವರ ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ, ಈಗಲೂ ನೋಡುತ್ತಿದ್ದೇನೆ. ಅವರಂತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು, ಅಭಿನಯಿಸಬೇಕು ಅನ್ನೋ ಆಸೆಯಿದೆ. ಅದು ಯಾವಾಗ ಸಿಗುತ್ತೋ ಗೊತ್ತಿಲ್ಲ.

-ದೇಶಾದ್ರಿ ಹೊಸ್ಮನೆ

Follow Us:
Download App:
  • android
  • ios