Asianet Suvarna News Asianet Suvarna News

ಸುಮಲಾತ ಬೆಂಬಲಕ್ಕೆ ನಿಲ್ಲುತ್ತೇವೆ : ಕಾಂಗ್ರೆಸ್ ನಾಯಕರ ಬಹಿರಂಗ ಸವಾಲು

ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಲೇ ಇದೆ.  ಈ ವೇಳೆ ಕಾಂಗ್ರೆಸ್ ನಾಯಕರು ಬಹಿರಂಗ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡೇ ನೀಡ್ತೀವಿ ಎಂದಿದ್ದಾರೆ. 

Will support Mandya LS candidate Sumalatha challenges Congress leaders
Author
Bengaluru, First Published Apr 4, 2019, 12:03 PM IST

ಶ್ರೀರಂಗಪಟ್ಟಣ:  ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದು, ಈ ಮೈತ್ರಿ ಬಗ್ಗೆ ಹಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನವಿದೆ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಶ್ರೀರಂಗಪಟ್ಟಣ ಕಾಂಗ್ರೆಸ್ ನಾಯಕರು ಮೈತ್ರಿಯ ಬಗ್ಗೆ ತಮ್ಮ ಅಸಮಾಧಾನ  ಹೊರಹಾಕಿದ್ದಾರೆ. ನಮ್ಮ ಕಷ್ಟ ಸುಖ‌ ಕೇಳಲು ಯಾವ ನಾಯಕರು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಮೊಮ್ಮಗನನ್ನು ಬೆಳೆಸಲು ಮಂಡ್ಯವನ್ನ ಜೆಡಿಎಸ್ ಆಯ್ಕೆ ಮಾಡಿಕೊಂಡಿದೆ. ಇದರಿಂದ ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.  ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಅಂಬಿ ಅಣ್ಣನ ಋಣ ತೀರಿಸಲು ನಾವೂ ಸುಮಲತಾ ಬೆಂಬಲಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. 

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಪರ ಪ್ರಚಾರ ಮಾಡಬೇಡಿ ಎನ್ನುವ ಹಕ್ಕು ಯಾರಿಗೂ ಕೂಡ ಇಲ್ಲ. ಒಂದಲ್ಲ ನೂರು ಬಾವುಟ ಹಿಡಿದು ಪ್ರಚಾರ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. 

ಮಂಡ್ಯದಲ್ಲಿ ಗಂಗಾಧರ್ ಅವ್ರನ್ನ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಅಂಬರೀಶ್. ಗಂಗಾಧರ್ ಅಂಬರೀಶ್ ಅವರ ಋಣ ತೀರಿಸಲು ನಮ್ಮೆಲ್ಲರಿಗಿಂತ ಮೊದಲು ಸುಮಲತಾ ಪರ ನಿಲ್ಲಬೇಕಿತ್ತು ಎಂದಿದ್ದಾರೆ. 

ಇನ್ನು ಹಾಲಿ ಎಂಪಿಗಳಿರುವ ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ಬಿಡುವುದಾಗಿ ಹೇಳಿಕೊಂಡು ತುಮಕೂರನ್ನ ಜೆಡಿಎಸ್ ಕಿತ್ತುಕೊಂಡಿದೆ. ಮಂಡ್ಯದಲ್ಲಿ ಮೊಮ್ಮಗನನ್ನ ಬೆಳೆಸಲು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಸಭೆಯಲ್ಲಿ ರಾಜ್ಯ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios