Asianet Suvarna News Asianet Suvarna News

ಲೋಕ ಚುನಾವಣೆಯಲ್ಲಿ ಮತದಾನಕ್ಕೆ ಕೃತಕ ಕೈ ಬೆರಳು?

ನಕಲಿ ಕೈಬೆರಳುಗಳಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. ಆದರೆ ಈ ಸುದ್ದಿ ನಿಜಾನಾ? ಇದರ ಹಿಂದಿನ ಸತ್ಯಾಸತ್ಯತೆ ಏನು? ಇ್ಲಲಿದೆ ವಿವರ

Viral Check Post on Fake Fingers Being Made to Cast Bogus Votes is False
Author
Bangalore, First Published Apr 13, 2019, 12:21 PM IST

ನವದೆಹಲಿ[ಏ.13]:ನಕಲಿ ಕೈಬೆರಳುಗಳಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. ಜಿದ್ದಾಜಿದ್ದನ ಕದನವಾಗಿರುವ ಈ ಲೋಕಸಭಾ ಚುನಾವಣೆಯಲ್ಲಿ ನಕಲಿ ಮತದಾನ ಮಾಡಲು ಈ ಕೃತಕ ಬೆರಳುಗಳನ್ನು ಉಪಯೋಸುವ ಯೋಜನೆ ರೂಪುಗೊಂಡಿದೆ ಎಂದು ಆರೋಪಿಸಲಾಗಿದೆ.

ಮತ ಚಲಾಯಿಸಿದ ಬಳಿಕ ಮತಹಾಕಿದ ಗುರುತಿಗಾಗಿ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಆದರೆ ಈ ಕೃತಕ ಬೆರಳುಗಳನ್ನು ಬಳಸಿ ಒಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಮತ ಹಾಕುವ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಪಕ್ಷದ ಕುರಿತು ಇಲ್ಲಿ ಉಲ್ಲೇಖ ಇಲ್ಲ.

ಆದರೆ ನಿಜಕ್ಕೂ ಈ ಚುನಾವಣೆಯಲ್ಲಿ ಇಂಥದ್ದೊಂದು ಅಕ್ರಮ ನಡೆಯುತ್ತಿದೆಯೇ ಎಂದು ಪರಿಶೀಲಿಸಿದಾಗ ಈ ಕೃತಕ ಬೆರಳುಗಳು ಭಾರತದಲ್ಲಿ ಇದುವರೆಗೂ ಬಳಕೆಯಾಗಿಲ್ಲ, ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಎಬಿಸಿ ನ್ಯೂಸ್‌ 2013ರಲ್ಲಿ ‘ಯಕುಜಾ ಗ್ಯಾಂಗ್‌ಸ್ಟರ್‌ಗಳಿಗೆ ಪ್ರೋಸ್ಥೆಟಿಕ್‌ ಫಿಂಗರ್‌ ನೆರವಾಗಲಿವೆ’ ಎಂಬ ವರದಿ ಪ್ರಕಟಿಸಿದೆ. ಅದರಲ್ಲಿ ಜಪಾನಿನಲ್ಲಿರುವ ಯಕುಜಾ ಸಮುದಾಯದಲ್ಲಿ ಯಾವುದಾರು ಅಪರಾಧ ಎಸಗಿದ್ದರೆ, ಬೆರಳುಗಳನ್ನು ಕತ್ತರಿಸುವ ಶಿಕ್ಷೆ ಜಾರಿಯಲ್ಲಿದೆ. ಹೀಗೆ ಬೆರಳು ಕತ್ತರಿಸಿಕೊಂಡ ಸಂತ್ರಸ್ತರಿಗೆ ಈ ಕೃತಕ ಬೆರಳುಗಳು ನೆರವಾಗಲಿವೆ ಎಂದಿದೆ.

Follow Us:
Download App:
  • android
  • ios