Asianet Suvarna News Asianet Suvarna News

ಸುಮ್ನಿದ್ದಷ್ಟು ಒಳ್ಳೇದು: ಬಿಜೆಪಿಗೆ ರಫೆಲ್ ಸಲಹೆ ನೀಡಿದ ಶಿವಸೇನೆ!

ಬಿಜೆಪಿಗೆ ರಫೆಲ್ ಸಲಹೆ ನೀಡಿರುವ ಶಿವಸೇನೆ| ರಫೆಲ್ ವಿಚಾರದಲ್ಲಿ ಮೌನವಾಗಿರುವಂತೆ ಮಿತ್ರಪಕ್ಷ ಸಲಹೆ| ಸುಪ್ರೀಂ ತೀರ್ಪಿನ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಮನವಿ| ಬಿಜೆಪಿ ಕಾರ್ಯಕರ್ತರ ಬಡಿದಾಟಕ್ಕೆ ಶಿವಸೇನೆ ಅಸಮಾಧಾನ|  

Shiv Sena Advises BJP To Be Quite On Rafale verdict
Author
Bengaluru, First Published Apr 12, 2019, 6:04 PM IST

ಮುಂಬೈ(ಏ.12): ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಿತ್ರಪಕ್ಷ ಶಿವಸೇನೆ, ಈ ವಿಚಾರದಲ್ಲಿ ಬಿಜೆಪಿ ಮೌನವಾಗಿದ್ದಷ್ಟೂ ಒಳ್ಳೆಯದು ಎಂದು ಹೇಳಿದೆ.

ರಫೆಲ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದಿರುವ ಶಿವಸೇನೆ, ಈ ಕುರಿತು ಬಿಜೆಪಿ ಮೌನವಾಗಿರುವುದೇ ಒಳ್ಳೆಯದು ಎಂದು ಸಲಹೆ ನೀಡಿದೆ.

ಇದೇ ವೇಳೆ ಮಹಾರಾಷ್ಟ್ರ ಸಚಿವರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ಬಡಿದಾಡಿಕೊಂಡ ಘಟನೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಚುನಾವಣೆ ಸಮಯದಲ್ಲಿ ಒಗ್ಗಟ್ಟು ಪ್ರದರ್ಶಿಸದೇ ಹೋದಲ್ಲಿ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios