Asianet Suvarna News Asianet Suvarna News

ಪತಿ ಕರ್ತವ್ಯ ನಿಭಾಯಿಸಿದ್ದೇನೆ: ಪತ್ನಿ ಪರ ಪ್ರಚಾರ ಮಾಡಿ, ಮೋದಿಗೆ ಟಾಂಗ್!

ಲಕ್ನೋದಲ್ಲಿ ಪತ್ನಿ ಪರ ಪ್ರಚಾರ ಮಾಡಿದ ಶತ್ರುಘ್ನ ಸಿನ್ಹಾ| ಲಕ್ನೋ ಲೋಕಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಪೂನಂ ಸಿನ್ಹಾ| ಪೂನಂ ಪರ ಪ್ರಚಾರ ನಡೆಸಿದ ಶತ್ರುಘ್ನ ಸಿನ್ಹಾ| ಶತ್ರುಘ್ನ ಸಿನ್ಹಾ ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ| ಗಂಡನ ಕರ್ತವ್ಯ ನಿಭಾಯಿಸಿದ್ದಾಗಿ ಹೇಳಿ ಮೋದಿಗೆ ಟಾಂಗ್ ಕೊಟ್ಟ ಶತ್ರುಘ್ನ| ಪತ್ನಿ ಪರ ಪ್ರಚಾರ ನಡೆಸಿದ ಶತ್ರುಘ್ನ ನಡೆ ಖಂಡಿಸಿದ ಕಾಂಗ್ರೆಸ್ ಅಭ್ಯರ್ಥಿ|

Shatrughan Sinha Backing Wife At Samajwadi Rally
Author
Bengaluru, First Published Apr 20, 2019, 4:54 PM IST

ಲಕ್ನೋ(ಏ.20): ಲಕ್ನೋ ಲೋಕಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಪೂನಂ ಸಿನ್ಹಾ ಪರ, ಪಾಟ್ನಾ ಸಾಹೀಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಪ್ರಚಾರ ಮಾಡಿದ್ದಾರೆ.

ಕಾಂಗ್ರೆಸ್ ಸದಸ್ಯರಾಗಿ ಮತ್ತೊಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಏಕೆ ಎಂದು ಕೇಳಲಾದ ಪ್ರಶ್ನೆಗೆ, ರಾಜಕಾರಣ ಹೊರತುಪಡಿಸಿ 'ಗಂಡನ ಕರ್ತವ್ಯ'ಎಂಬುದೂ ಇರುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಲಕ್ನೋ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜನಾಥ್ ಸಿಂಗ್ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಆಚಾರ್ಯ ಪ್ರಮೋದ್ ಕೃಷ್ಣನಮ್ ಮತ್ತು ಎಸ್‌ಪಿ ಅಭ್ಯರ್ಥಿಯಾಗಿ ಪೂನಂ ಸಿನ್ಹಾ ಕಣಕ್ಕಿಳಿದಿದ್ದಾರೆ.

ಇನ್ನು ಎಸ್‌ಪಿ ಅಭ್ಯರ್ಥಿ ಪರ ಶತ್ರುಘ್ನ ಪ್ರಚಾರ ನಡೆಸಿದ್ದನ್ನು ಕಾಂಗ್ರೆಸ್ ಅಭ್ಯರ್ಥಿ ಆಚಾರ್ಯ ಪ್ರಮೋದ್ ಕೃಷ್ಣನಮ್ ವಿರೋಧಿಸಿದ್ದಾರೆ. ಪಕ್ಷದ ಸದಸ್ಯನಾಗಿ, ಅಭ್ಯರ್ಥಿಯಾಗಿ ಮತ್ತೊಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಎಷ್ಟು ಸರಿ ಎಂದು ಪ್ರಮೋದ್ ಪ್ರಶ್ನಿಸಿದ್ದಾರೆ.

ಪೂನಂ ಸಿನ್ಹಾ ಲಕ್ನೋ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆಯೂ ಶತ್ರುಘ್ನ ಹಾಜರಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios