Asianet Suvarna News Asianet Suvarna News

ಬಿಜೆಪಿ ವಿರೋಧಿಸುವ ನಮ್ಮ ವಿರೋಧಿ ಪಕ್ಷದೊಂದಿಗೂ ಮೈತ್ರಿಗೆ ಸಿದ್ಧ : ನಾಯ್ಡು

ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷದೊಂದಿಗೂ ಕೂಡ ಮೈತ್ರಿ ಮಾಡಿಕೊಳ್ಳಲು ತಾವು ಸಿದ್ಧ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Ready to join hands with any party including rival TRS for anti BJP front Says Chandrababu Naidu
Author
Bengaluru, First Published May 18, 2019, 3:33 PM IST

ನವದೆಹಲಿ : ಸತತವಾಗಿ ಬಿಜೆಪಿ ವಿರೋಧಿ ಬಣವನ್ನು ಕಟ್ಟಲು ಯತ್ನಿಸುತ್ತಿರುವ ಟಿಡಿಪಿ ಮುಖಂಡ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಮ್ಮೆ ಬಿಜೆಪಿ ಬಗೆಗಿನ ವಿರೋಧವನ್ನು ಹೊರಹಾಕಿದ್ದಾರೆ. 

ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷದೊಂದಿಗೆ ತಾವು ಮೈತ್ರಿ ಮಾಡಿಕೊಳ್ಳಲು ಸಿದ್ಧ. ತಮ್ಮ ವಿಪಕ್ಷವಾದ ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ರೆಡಿ ಎಂದಿದ್ದಾರೆ. 

ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷ ಬೇಕಾದರೂ ಈ ಬಣಕ್ಕೆ ಸೇರ್ಪಡೆಯಾಗಬಹುದು. ಅಂತವರಿಗೆ ಸ್ವಾಗತ ಎಂದಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದ್ದು ಈ ಸಮಯದ ಒಳಗೆ ಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿದ್ದಾರೆ. 

ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ , ಸಿಪಿ[ಐ]ಎಂ ಮುಖಂಡ ಸೀತಾರಾಮ್ ಯೆಚೂರಿ ಅವರನ್ನು ಭೇಟಿ ಮಾಡಿದ್ದು,  ಮೇ 23ರ ಬಳಿಕ ಒಂದಾಗುವ ಸಾಧ್ಯತೆ ಇದೆ. 

ಇನ್ನು ಮೇ 19 ರಂದು ಲಕ್ನೋಗೆ ತೆರಳಿ ಬಹುಜನ ಸಮಾಜವಾದಿ ಮುಖಂಡೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲಿದ್ದಾರೆ. 

ನಾವು ಕೇವಲ ಟಿಆರ್ ಎಸ್ ಮಾತ್ರವಲ್ಲ, ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷವೂ ಕೂಡ ನಮ್ಮೊಂದಿಗೆ ಸೇರಬಹುದು ಎಂದು ಆಹ್ವಾನ ನೀಡಿದ್ದಾರೆ. ಒಕ್ಕೂಟವನ್ನು ರಚಿಸಲು ಎಲ್ಲಾ ನಾಯಕರನ್ನು ಭೇಟಿ ಮಾಡಲಾಗುವುದು ಎಂದಿದ್ದಾರೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios