Asianet Suvarna News Asianet Suvarna News

ಬಿಜೆಪಿ ಪ್ರಣಾಳಿಕೆ ‘ಪ್ರತ್ಯೇಕ ವ್ಯಕ್ತಿಯ ಸೊಕ್ಕಿನ ಧ್ವನಿ’ ಎಂದ ರಾಹುಲ್!

ಬಿಜೆಪಿ ಪ್ರಣಾಳಿಕೆ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ| ಬಿಜೆಪಿ ಪ್ರಣಾಳಿಕೆಯನ್ನು ಪ್ರತ್ಯೇಕ ವ್ಯಕ್ತಿಯ ಸೊಕ್ಕಿನ ಧ್ವನಿ ಎಂದ ರಾಹುಲ್| ‘ಮುಚ್ಚಿದ ಕೊಠಡಿಯಲ್ಲಿ ಓರ್ವ ವ್ಯಕ್ತಿಯ ಅಣತಿಯಂತೆ ಪ್ರಣಾಳಿಕೆ ರಚನೆ'| ಕಾಂಗ್ರೆಸ್ ಪ್ರಣಾಳಿಕೆ ಈ ದೇಶದ ಜನರ ಧ್ವನಿಯಾಗಿದೆ ಎಂದ ರಾಹುಲ್ ಗಾಂಧಿ|

Rahul Gandhi Accuses BJP Manifesto As Voice Of Isolated Man
Author
Bengaluru, First Published Apr 9, 2019, 1:13 PM IST

ನವದೆಹಲಿ(ಏ.09): ಲೋಕಸಭೆ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ‘ಪ್ರತ್ಯೇಕ ವ್ಯಕ್ತಿಯ ಸೊಕ್ಕಿನ ಧ್ವನಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಚರ್ಚೆಯ ಮೂಲಕ ತಯಾರಿಸಲಾಗಿದ್ದರೆ, ಬಿಜೆಪಿಯ ಪ್ರಣಾಳಿಕೆ ಮುಚ್ಚಿದ ಕೊಠಡಿಯಲ್ಲಿ ಓರ್ವ ವ್ಯಕ್ತಿಯ ಅಣತಿಯಂತೆ ರೂಪಿಸಲಾಗಿದೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಪ್ರಣಾಳಿಕೆ ಅಲ್ಪದೃಷ್ಟಿ ಮತ್ತು ಸೊಕ್ಕಿನಿಂದ ಕೂಡಿದ್ದು, ಕಾಂಗ್ರೆಸ್ ಪ್ರಣಾಳಿಕೆ ಈ ದೇಶದ ಜನರ ಧ್ವನಿಯಾಗಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios