Asianet Suvarna News Asianet Suvarna News

ಮತದಾರರನ್ನು ಕಟ್ಟಿಹಾಕಲು ಮಂಡ್ಯದಲ್ಲಿ ಹೊಸ ಗಿಮಿಕ್: ಫೋಟೋ ವೈರಲ್ ..!

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರ ಚಿತ್ತ ಮಂಡ್ಯದತ್ತ ನೆಟ್ಟಿದೆ. ದಿನಕ್ಕೊಂದು ಸಿನಿಮೀಯ ಬೆಳವಣಿಗೆಗಳು ನಡೆಯುತ್ತಿರುವ ಮಂಡ್ಯದಲ್ಲಿ ಇದೀಗ ಮತದಾರರನ್ನು ಸೆಳೆಯಲು ಹೊಸ ಗಿಮಿಕ್ ಗಳು ನಡೆಯುತ್ತಿವೆ.

Promising By Voters To Vote For JDS in The Name Of Dharmasthala Manjunatha Swamy In Mandya
Author
Bengaluru, First Published Apr 17, 2019, 4:20 PM IST

ಬೆಂಗಳೂರು, (ಏ.17): ಮತದಾನದ ಹಿಂದಿನ ದಿನವನ್ನು 'ಕತ್ತಲೆರಾತ್ರಿ' ಎಂದು ಕರೆಯುವ ರಾಜಕೀಯ ಭಾಷೆಯಿದೆ. ಮತದಾರರನ್ನು ಸೆಳೆಯಲು ವೋಟಿಂಗ್ ಹಿಂದಿನ ದಿನ ನಾನಾ ಆಮೀಷಗಳನ್ನು ಒಡ್ಡಲಾಗುತ್ತೆ. ಅದ್ರಂತೆ ಮಂಡ್ಯದಲ್ಲೂ ಸಹ 'ಕತ್ತಲೆರಾತ್ರಿ' ಯಲ್ಲಿ ಆಮೀಷಗಳ ಅಬ್ಬರ ಜೋರಾಗಿದೆ.

ಮತದಾರರನ್ನು ಕಟ್ಟಿ ಹಾಕಲು ಮಂಡ್ಯದಲ್ಲಿ ಆಣೆ ಪ್ರಮಾಣದ ಗಿಮಿಕ್ ನಡೆಯುತ್ತಿದೆ ಎಂಬ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮತದಾರರಿಗೆ ಜೆಡಿಎಸ್ ನವರು ಮಂಜುನಾಥನ ಫೊಟೋ ಕೊಟ್ಟು ಆಣೆ ಮಾಡಿಸ್ತಿದ್ದಾರೆ. ಈ ಮೂಲಕ ಮತದಾರರನ್ನು ಕಟ್ಟಿ ಹಾಕಲು ಜೆಡಿಎಸ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 

ಬಹಿರಂಗ ಪ್ರಚಾರಕ್ಕೆ ತೆರೆ: 14 ಕ್ಷೇತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಅಭ್ಯರ್ಥಿಗಳು

‘ಅಭಿಷೇಕ್ ದಿ ರೆಬಲ್’ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಮಾದರಿ ಬ್ಯಾಲೆಟ್ ಪೇಪರ್ ಜೊತೆ ಮಂಜುನಾಥ ಸ್ವಾಮಿಯ ಫೋಟೋ ಹಾಕಿ ಪೋಸ್ಟ್ ಮಾಡಿ ಆರೋಪ ಮಾಡಿದ್ದು,  ಈ ಪೋಸ್ಟ್ ಫುಲ್ ವೈರಲ್ ಆಗಿದೆ. 

ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸಹ ಜನರಲ್ಲಿ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಐಟಿ ದಾಳಿ ಯಾಕಾಗ್ತಿದೆ? ಸುಮಲತಾ ಬಿಚ್ಚಿಟ್ರು ‘ಓಪನ್ ಸೀಕ್ರೆಟ್’

ಹೀಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ನಿಖಿಲ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಇಬ್ಬರ ಫೋಟೋಗಳು ವೈರಲ್ ಆಗಿವೆ.

'ಮಂಡ್ಯ ಅಂದ್ರೆ ಇಂಡಿಯಾ' 'ಇಂಡಿಯಾ ಅಂದ್ರೆ ಮಂಡ್ಯ' ಎಂಬ ಮಾತು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಾರ್ದನಿಸಿದ್ದು, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.

ಸಿಎಂ ಕುಮಾರಸ್ವಾಮಿ ಅವರು ಮಂಡ್ಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಶತಾಯಗತಾಯವಾಗಿ ಗೆಲ್ಲಲೇಬೇಕೆಂದು ಇನ್ನಿಲ್ಲ ಕಸರತ್ತು ನಡೆಸಿದ್ದಾರೆ. 

ಮತದಾರರಲ್ಲಿ ಗೊಂದಲ ಮೂಡಿಸಲು ಸುಮಲತಾ ಎನ್ನುವ ಮೂವರನ್ನ ಕಣಕ್ಕಿಳಿಸಲಾಗಿದೆ. ಅಷ್ಟೇ ಅಲ್ಲದೇ ಸುಮಲತಾ ಅಂಬರೀಶ್ ಅವರನ್ನ ಹೋಲುವ ಫೋಟೋವನ್ನು ವೋಟಿಂಗ್ ಮಷಿನ್ ನಲ್ಲಿ ಅಳವಡಿಸಲಾಗಿದೆ.

ಇದೀಗ ದಳಪತಿಗಳು ಆಣೆ ಪ್ರಮಾಣದ ಮೂಲಕ ಮತದಾರರಿಗೆ ಬ್ಲಾಕ್ ಮೇಲ್‌ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios