Asianet Suvarna News Asianet Suvarna News

ನಂ. 1 ಭ್ರಷ್ಟಾಚಾರಿ ಹೇಳಿಕೆ: ಮೋದಿಗೆ ಸಂಕಷ್ಟ!

ರಾಜೀವ್‌ ಕುರಿತ ‘ನಂ.1 ಭ್ರಷ್ಟಾಚಾರಿ’ ಹೇಳಿಕೆ ಇದೀಗ ಪ್ರಧಾನಿ ಮೋದಿಗೆ ಹೊಸ ಸಂಕಷ್ಟ ತಂದೊಡ್ಡಿದೆ. ಏನದು? ಇಲ್ಲಿದೆ ನೋಡಿ ವಿವರ

Modi s comment on Rajiv Gandhi is obscene Congress affidavit in Supreme Court
Author
Bangalore, First Published May 8, 2019, 11:33 AM IST

ನವದೆಹಲಿ[ಮೇ.08]: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಬಗ್ಗೆ ನೀಡಿದ್ದ ‘ನಂ.1 ಭ್ರಷ್ಟಾಚಾರಿ’ ಹೇಳಿಕೆಗೆ ಸಂಬಂಧಿಸಿ ಚುನಾವಣಾ ಆಯೋಗ ಕ್ಲೀನ್‌ಚಿಟ್‌ ನೀಡಿದೆಯಾದರೂ, ಇದಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್‌ ಈ ಸಂಬಂಧ ಮಂಗಳವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ನಿಮ್ಮ ತಂದೆಯ ಜೀವನ ನಂ. 1 ಭ್ರಷ್ಟಾಚಾರಿಯಾಗಿ ಕೊನೆಯಾಯ್ತು: ರಾಹುಲ್ ವಿರುದ್ಧ ಮೋದಿ ಕಿಡಿ!

ಆಯೋಗದ ತೀರ್ಪಿನಿಂದ ಇಂಥ ಹೇಳಿಕೆಗಳಿಗೆ ನಿಯಂತ್ರಣವೇ ಇಲ್ಲದಂತಾಗುತ್ತದೆ. ಅಲ್ಲದೆ, ಪಾರದರ್ಶಕತೆ ಬಗ್ಗೆ ಸಂಶಯ ಬರುತ್ತದೆಂಬ ಅಂಶವನ್ನು ಕೋರ್ಟ್‌ಗೆ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಕರ್ಮ’ ಕಾಯುತ್ತಿದೆ: ಮೋದಿಯನ್ನು ಮತ್ತೆ ತಬ್ಬಿಕೊಂಡ ರಾಹುಲ್!

ಪ್ರಧಾನಿ ಹುದ್ದೆಯಲ್ಲಿದ್ದವರು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಅಷ್ಟಕ್ಕೂ ಇದು ಪ್ರಶ್ನಾತೀತವೇನಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನೀಡಿರುವ ಈ ಹೇಳಿಕೆ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 123ಎ ಅಡಿಯಲ್ಲಿ ಅರ್ಜಿಯನ್ನು ವಿಚಾರಣೆಗೆ ಪರಿಶೀಲಿಸಬೇಕು ಎಂದು ದೂರುದಾರ, ಕಾಂಗ್ರೆಸ್‌ ಸಂಸದೆ ಸುಷ್ಮಿತಾ ದೇವ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬುಧವಾರ ಈ ಸಂಬಂಧಿತ ಅರ್ಜಿ ವಿಚಾರಣೆಗೊಳಪಡುವ ಸಾಧ್ಯತೆ ಇದೆ.

Follow Us:
Download App:
  • android
  • ios