Asianet Suvarna News Asianet Suvarna News

ಲೋಕ ಸಮರಕ್ಕೂ ಮುನ್ನವೇ ಮಂಗಳೂರಲ್ಲಿ ‘ಕೈ’ಗೆ ಬಿಗ್ ಶಾಕ್

ರಾಜ್ಯದ ಲೋಕ ಕಣ ದಿನೇ ದಿನೇ ಹೊಸ ಚಿತ್ರಣ ಪಡೆದುಕೊಳ್ಳುತ್ತಿದೆ. ಮಂಗಳೂರಿನಲ್ಲಿ ಚಿತ್ರಣ ಬದಲಾಗುತ್ತಿದ್ದು ಎಸ್ ಡಿಪಿಐ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡುಬಂದಿದೆ. 

Loksabha Elections Dakshina Kannada SDPI Candidate Final
Author
Bengaluru, First Published Mar 19, 2019, 5:05 PM IST

ಮಂಗಳೂರು[ಮಾ. 19]  ದಕ್ಷಿಣ ಕನ್ನಡ ಲೋಕಸಭಾ ಕಣದಲ್ಲಿ ಕಾಂಗ್ರೆಸ್-ಎಸ್ ಡಿಪಿಐ ವಾರ್ ನಡೆಯಲಿದೆಯೇ? ಸದ್ಯದ ಬೆಳವಣಿಗೆಗಳು ಹೌದು ಎನ್ನುತ್ತಿವೆ.

ಕಾಂಗ್ರೆಸ್ ಗೂ ಮೊದಲೇ ಎಸ್ ಡಿಪಿಐ ಅಭ್ಯರ್ಥಿ ಫೀಲ್ಡಿಗಿಳಿದಿದ್ದಾರೆ. ಎಸ್ ಡಿಪಿಐ ಸ್ಪರ್ಧೆಯಿಂದ ಕಾಂಗ್ರೆಸ್ ಗೆ  ಸೋಲಿನ ಭೀತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.ಎಸ್ ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯನ್ನೇ ದಕ್ಷಿಣ ಕನ್ನಡ ಜಿಲ್ಲೆ ಎಸ್ ಡಿಪಿಐ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

ಎಸ್ ಡಿಪಿಐ ಅಭ್ಯರ್ಥಿ ಹಾಕಿದ್ದು ಬಿಜೆಪಿಗೆ ಲಾಭ ಮಾಡಲು ಅಂತ ಸಚಿವ ಖಾದರ್ ಟಾಂಗ್ ನೀಡಿದ್ದಾರೆ.ಬಿಜೆಪಿ-ಎಸ್ ಡಿಪಿಐ ರಹಸ್ಯ ಒಪ್ಪಂದದ ಬಗ್ಗೆ ಸಚಿವ ಖಾದರ್ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಬೇಡ, ಕಾಫಿ ಕುಡಿದು ಹೊರಡಿ ಬೇಗ: ಹೊಟೇಲ್ ಮಾಲೀಕ!

ಖಾದರ್ ಹೇಳಿಕೆಗೆ ಎಸ್ ಡಿಪಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಯಾರಿಗೂ ಲಾಭ ಮಾಡಿಕೊಳ್ಳಲು ಸ್ಪರ್ಧಿಸುತ್ತಿಲ್ಲ ಅಂತ ಸ್ಪಷ್ಟನೆಯನ್ನು ಮುಖಂಡರು  ನೀಡಿದ್ದಾರೆ.

ಎಸ್ ಡಿಪಿಐ ಸ್ಪರ್ಧೆಯಿಂದ ಮುಸ್ಲಿಂ ಮತ ವಿಭಜನೆಯ ಭೀತಿ ಕಾಂಗ್ರೆಸ್ ಗೆ ಎದುರಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳದ ಎಸ್ ಡಿಪಿಐ ಅಭ್ಯರ್ಥಿಯನ್ನ ಕಣದಿಂದ ಹಿಂದಕ್ಕೆ ಸರಿಸಿದ್ದ ಕಾಂಗ್ರೆಸ್ರಮಾನಾಥ್ ರೈ ಗೆಲುವಿಗಾಗಿ ಒಪ್ಪಂದ ಮಾಡಿಕೊಂಡಿತ್ತು.

Follow Us:
Download App:
  • android
  • ios