Asianet Suvarna News Asianet Suvarna News

ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟ

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಗಣಣೆ ಆರಂಭವಾಗಿದೆ. ಇದೇ ವೇಳೆ ಮಂಡ್ಯದಲ್ಲಿ ಕಣಕ್ಕೆ ಇಳಿದಿರುವ ಸುಮಲತಾ ಪಕ್ಷೇತರ ಅಭ್ಯರ್ಥಿಯಲ್ಲ. ಅವರು ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

Loksabha Elections 2019 Sumalatha Is BJP Candidate Says Dinesh Gundurao
Author
Bengaluru, First Published Apr 11, 2019, 9:53 AM IST

ದಾವ​ಣ​ಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಬ​ಲಿಸಿ, ಹೇಳಿ​ಕೆ​ ನೀಡಿ​ರು​ವುದೇ ಸುಮ​ಲತಾ ಅವರು ಬಿಜೆಪಿ ಅಭ್ಯರ್ಥಿ ಎಂಬು​ದನ್ನು ಸ್ಪಷ್ಟ​ಪ​ಡಿ​ಸು​ತ್ತದೆ ಎಂದು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹೇಳಿದ್ದಾರೆ. 

ಬುಧ​ವಾರ ಸುದ್ದಿಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮಂಡ್ಯ​ದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿ​ಎ​ಸ್‌ನ ನಿಖಿಲ್‌ ಕುಮಾ​ರಸ್ವಾಮಿ ಭಾರೀ ಮತ​ಗಳ ಅಂತ​ರ​ದಲ್ಲಿ ಜಯ ಸಾಧಿ​ಸ​ಲಿದ್ದು, ಅಲ್ಲಿ ಮೈತ್ರಿ ಪಕ್ಷದ ಗೆಲುವು ನಿಶ್ಚಿತ ಎಂದರು. 

ಇದೇ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯ​ಕ​ರ್ತರು ಸುಮ​ಲತಾ ಪರ ಕೆಲಸ ಮಾಡಿ, ಪಕ್ಷ ವಿರೋಧಿ ಚಟು​ವ​ಟಿಕೆ ನಡೆ​ಸಿ​ದರೆ ಸಹಿ​ಸು​ವು​ದಿಲ್ಲ. ಈಗಾ​ಗಲೇ ಐವ​ರನ್ನು ಪಕ್ಷ​ದಿಂದಲೇ ಉಚ್ಚಾ​ಟಿ​ಸಿದ್ದು ಇಂತಹ ಘಟ​ನೆ​ಗಳು ಪುನ​ರಾ​ವ​ರ್ತ​ನೆ​ಯಾ​ದರೆ ಅಂತಹವರಿಗೆ ಪಕ್ಷದ ಹುದ್ದೆ​ಗ​ಳಿಂದಲೇ ಗೇಟ್‌ ಪಾಸ್‌ ನೀಡ​ಲಾ​ಗು​ವುದು ಎಂದು ಎಚ್ಚ​ರಿ​ಕೆ ಸಂದೇಶ ರವಾ​ನಿ​ಸಿ​ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios