Asianet Suvarna News Asianet Suvarna News

5ನೇ ಹಂತದ ಮತದಾನ ಪೂರ್ಣ, ಯಾವ ರಾಜ್ಯದಲ್ಲಿ ಎಷ್ಟು?

ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಗಿದಿದ್ದು ಇನ್ನೆರಡು ಹಂತ ಬಾಕಿ ಉಳಿದಿದೆ.  ಹಾಗಾದರೆ ಸೋಮವಾರ ಯಾವೆಲ್ಲ ರಾಜ್ಯಳಲ್ಲಿ, ಎಷ್ಟು ಸರಾಸರಿ ಮತದಾನ ಆಗಿದೆ? ಇಲ್ಲಿದೆ ಉತ್ತರ.

Loksabha Elections 2019 Phase 5 Voter Turnout Figures
Author
Bengaluru, First Published May 6, 2019, 8:01 PM IST

ನವದೆಹಲಿ[ಮೇ. 06]  ಏಳು ರಾಜ್ಯಗಳ 51 ಕ್ಷೇತ್ರಗಳಿಗೆ ಸೋಮವಾರ ನಡೆದ ಐದನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು ಶೇ. 62.56 ರಷ್ಟು ಮತದಾನವಾಗಿದೆ.

ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ (7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ ಲಡಾಖ್, ಅನಂತ್​ನಾಗ್ ಲೋಕಸಭಾ ಕ್ಷೇತ್ರಗಳಿಗೆ ಇಂದು  ಮತದಾನ ನಡೆದಿದೆ.   51 ಕ್ಷೇತ್ರಗಳ ಮತದಾನದ ಪ್ರಮಾಣ ಲಭ್ಯವಾಗಿದೆ.

‘ಇದೇನಿದು ಸುಮಲತಾಗೆ ಕೇಂದ್ರದಲ್ಲಿ ಸುಮಲತಾಗೆ ಮಂತ್ರಿ ಪಟ್ಟ’

ನಾಲ್ಕನೇ ಹಂತದ ಚುನಾವಣೆ ವೇಳೆ ಪಶ್ವಿಮ ಬಂಗಾಳದಲ್ಲಿ ಉಂಟಾಗಿದ್ದ ಹಿಂಸಾತ್ಮಕ ಘಟನೆಗಳು ಈ ಸಾರಿಯೂ ಮುಂದುವರಿದವು ಆದರೆ ಮತದಾನದ ಪ್ರಮಾಣದಲ್ಲಿ ಹಿನ್ನಡೆಯಾಗಲಿಲ್ಲ. ಸೋನಿಯಾ ಗಾಂಧಿ(ರಾಯ್​ ಬರೇಲಿ), ರಾಹುಲ್​ ಗಾಂಧಿ ಹಾಗೂ ಸ್ಮೃತಿ ಇರಾನಿ(ಅಮೇಠಿ), ರಾಜನಾಥ್​ ಸಿಂಗ್​(ಲಖನೌ) ಹಾಗೂ ರಾಜ್ಯವರ್ಧನ್​ ಸಿಂಗ್​ ರಾಠೋಡ್​( ಜೈಪುರ ಗ್ರಾಮೀಣ)  ಕ್ಷೇತ್ರಕ್ಕೆ ಮತದಾನ ನಡೆದಿದೆ.

ರಾಜ್ಯವಾರು ಲೆಕ್ಕಾಚಾರ[ಸಂಜೆ 6 ಗಂಟೆ ವೇಳೆಗೆ]

ಬಿಹಾರ- ಶೇ. 56.79

ಮಧ್ಯ ಪ್ರದೇಶ- 62.96

ಜಮ್ಮು ಮತ್ತು ಕಾಶ್ಮೀರ- ಶೇ. 17.07

ರಾಜಸ್ಥಾನ-  ಶೇ. 63.03

ಉತ್ತರ ಪ್ರದೇಶ- ಶೇ. 53.32

ಪಶ್ಚಿಮ ಬಂಗಾಳ- ಶೇ. 74.06

ಜಾರ್ಖಂಡ್- ಶೇ. 63.99

Follow Us:
Download App:
  • android
  • ios