Asianet Suvarna News Asianet Suvarna News

ಚುನಾವಣೆ ಬೆನ್ನಲ್ಲಿ ಕಾಂಗ್ರೆಸ್ ಜೊತೆ ಮುರಿಯಿತು ಮೈತ್ರಿ

ಲೋಕಸಭಾ ಚುನಾವಣೆ ಯ ಬೆನ್ನಲ್ಲಿ ಕಾಂಗ್ರೆಸ್ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ. 

Lok Sabha Elections 2019 No Alliance Between Congress AAP In Delhi
Author
Bengaluru, First Published Apr 23, 2019, 8:13 AM IST

ನವದೆಹಲಿ: ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ನಡೆಸಿದ್ದ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ. 

ಅದರ ಬೆನ್ನಲ್ಲೇ, ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಪ್ರಕಟ ಮಾಡಿದೆ. ಅದರಂತೆ ಮೂರು ಬಾರಿ ದೆಹಲಿ ಸಿಎಂ ಪಟ್ಟಅಲಂಕರಿಸಿದ್ದ ಶೀಲಾ ದೀಕ್ಷಿತ್‌ ಅವರಿಗೆ ಈಶಾನ್ಯ ದೆಹಲಿ, ಕೇಂದ್ರದ ಮಾಜಿ ಸಚಿವ ಅಜಯ ಮಾಕನ್‌ಗೆ ನವದೆಹಲಿ, ಜೆ.ಪಿ. ಅಗರ್‌ವಾಲ್‌ಗೆ ಚಾಂದನಿ ಚೌಕ್‌, ಅರವಿಂದ್‌ ಸಿಂಗ್‌ ಲವ್ಲಿಗೆ ಪೂರ್ವ ದೆಹಲಿ, ರಾಜೇಶ್‌ ಲಿಲೋಥಿಯಾಗೆ ವಾಯುವ್ಯ ದೆಹಲಿ ಮತ್ತು ಮಹಾಬಲ್‌ ಮಿಶ್ರಾಗೆ ಪಶ್ಚಿಮ ದೆಹಲಿಯಿಂದ ಟಿಕೆಟ್‌ ನೀಡಲಾಗಿದೆ.

 ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹರ್ಷವರ್ಧನ್‌ ಎದುರು ಸೋಲುಂಡಿದ್ದ, ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ಗೆ ಪಕ್ಷ ಚಾಂದನಿ ಚೌಕ್‌ನಿಂದ ಟಿಕೆಟ್‌ ನಿರಾಕರಿಸಲಾಗಿದೆ. ಕಳೆದ ಬಾರಿ ದೆಹಲಿಯ ಎಲ್ಲಾ 7 ಸ್ಥಾನಗಳನ್ನೂ ಬಿಜೆಪಿ ಗೆದ್ದು ಕೊಂಡಿತ್ತು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

Follow Us:
Download App:
  • android
  • ios