Asianet Suvarna News Asianet Suvarna News

ಮಂಡ್ಯ: ದೇವೆಗೌಡರ ಕುಟುಂಬದ ಬಗ್ಗೆ 'ನೋ ಅವಾಜ್ ನೋ ಸೌಂಡ್'..!

 ಚುನಾವಣೆಗೆ ಮಹಿಳೆ ನಿಲ್ಲುವುದೇ ಒಂದು ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ  ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ವೈಯಕ್ತಿಕ ಟೀಕೆಗಳನ್ನು ಮುಂದುವರಿಸಿದ್ದಾರೆ. ಇದೀಗ ಜೆಡಿಎಸ್ ಕಾರ್ಯಕರ್ತರು ಸುಮಲತಾ ಪರ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ.

JDS activists interrupts Yash campaign In Mandya For Sumalatha Ambareesh
Author
Bengaluru, First Published Apr 10, 2019, 4:46 PM IST

ಮಂಡ್ಯ, (ಏ.10): ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಬುಧವಾರ ಮಂಡ್ಯ ಜಿಲ್ಲೆಯ ಚಂದಾಪುರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. 

ದೇವೆಗೌಡರ ಕುಟುಂಬದ ಬಗ್ಗೆ ಯಾರು ಮಾತಾಡಬಾರದು ಎಂದು ಕ್ಯಾತೆ ತೆಗೆದ ಕೆಲ ಜೆಡಿಎಸ್ ಕಾರಯಕರ್ತರು, ಯಶ್ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಯಶ್ 'ಮನೆ' ತಂಟೆಗೆ ಹೋದ ನಿಖಿಲ್‌ ಕುಮಾರಸ್ವಾಮಿಗೆ ಮಂಗಳಾರತಿ..!

ಜೆಡಿಎಸ್ ಕಾರ್ಯಕರ್ತರು ಕ್ಯಾತೆ ತೆಗೆಯುತ್ತಿದ್ದಂತೆ ಸುಮಲತಾ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗಿದ್ದು, ಬಳಿಕ  ಎರಡು ಗುಂಪುಗಳ ನಡುವೆ ಗಲಾಟೆ ಮತ್ತು ಮಾತಿನ ಚಕಮುಕಿ ನಡೆದಿದೆ.

ಮಧ್ಯೆ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನ ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪೋಲಿಸರ ಮದ್ಯಸ್ಥಿಕೆಯ ವಹಿಸಿ ಗಲಾಟೆ ಬಿಡಿಸಿದ ನಂತರವು ಮತ್ತೆ ಎರಡು ಗುಂಪುಗಳು ಪರವಿರೋಧಗಳ ಜೈ ಘೋಷ ಕೂಗಿಕೊಂಡರು

ಒಟ್ಟಿನಲ್ಲಿ ಮತದಾನ ದಿನ ಹತ್ತಿರವಾಗುತ್ತಿದ್ದಂತೆಯೇ  ಮಂಡ್ಯ ಕಣ ದಿನದಿಂದ ದಿನಕ್ಕೆ ರಣಾಂಗಣವಾಗುತ್ತಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

ಫೋಟೋ: ಸಾಂದರ್ಭಿಕ ಚಿತ್ರ

Follow Us:
Download App:
  • android
  • ios