Asianet Suvarna News Asianet Suvarna News

ತಮಿಳುನಾಡಲ್ಲಿ ಮತ ಹಾಕಿದ 156 ಮಾನಸಿಕ ರೋಗಿಗಳು: ಇದೇ ಫಸ್ಟ್!

ದೇಶದಲ್ಲಿ ಇದೇ ಮೊದಲ ಬಾರಿ ಮಾನಸಿಕ ಅರೋಗ್ಯ ಕೇಂದ್ರದ 156 ರೋಗಿಗಳು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.

in a first over 156 patients of mental health centre cast votes
Author
Bangalore, First Published Apr 20, 2019, 9:44 AM IST

ಚೆನ್ನೈ[ಏ.20]: ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ನಡೆದ ಮತ ಹಕ್ಕು ಚಲಾವಣೆಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವ 156 ಜನರೂ ಮತ ಚಲಾವಣೆ ಮಾಡಿದ್ದಾರೆ. ಇಲ್ಲಿನ ಚಿಲ್ಪಾಕ್‌ನಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಮೆಂಟಲ್‌ ಹಾಸ್ಪಿಟಲ್‌ (ಐಎಂಎಚ್‌) ಆವರಣದಲ್ಲೇ ಸ್ಥಾಪಿಸಲಾಗಿದ್ದ ವಿಶೇಷ ಮತಗಟ್ಟೆಗೆ ಸರದಿಯಲ್ಲಿ ಬಂದ ರೋಗಿಗಳು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ.

ಬೆಂಗಳೂರಿನ ನಿಮ್ಹಾನ್ಸ್‌ ಸೇರಿದಂತೆ ಇತರೆ ಹಲವೆಡೆ ಇಂಥ ಆಸ್ಪತ್ರೆಗಳು ಇವೆಯಾದರೂ, ಅಲ್ಲಿ ಮಾನಸಿಕ ತೊಂದರೆಯಿಂದ ಬಳಲುತ್ತಿರುವವರಿಗೆ ಮತದಾರರ ಕಾರ್ಡ್‌ ನೀಡಲಾಗಿದ್ದರೂ, ಬಹುಷಃ ಮತದಾನಕ್ಕೆ ಅವಕಾಶ ಕಲ್ಪಿಸಿದ ಮೊದಲ ಪ್ರಕರಣ ಇದೆಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಹೀಗೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಿಶೇಷ ಮತಗಟ್ಟೆಸ್ಥಾಪಿಸಿದ ಪ್ರಕರಣವೂ ಇದೇ ಮೊದಲು ಎನ್ನಲಾಗಿದೆ.

ಈ ಪ್ರದೇಶವು ಚೆನ್ನೈ ಕೇಂದ್ರ ಲೋಕಸಭಾ ವ್ಯಾಪ್ತಿಗೆ ಬರಲಿದ್ದು, ಈ ಕ್ಷೇತ್ರದಲ್ಲಿ ಡಿಎಂಕೆ ಮುಖಂಡ ದಯಾನಿಧಿ ಮಾರನ್‌, ಎಐಎಡಿಎಂಕೆ-ಬಿಜೆಪಿ-ಪಿಎಂಕೆ ಮೈತ್ರಿ ಅಭ್ಯರ್ಥಿ ಸ್ಯಾಮ್‌ ಪಾಲ್‌ ಹಾಗೂ ನಟ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀದಿ ಮಯ್ಯಂ ಪಕ್ಷದಿಂದ ಕಮೀಲಾ ನಾಸಿರ್‌ ಸ್ಪರ್ಧೆಯೊಡ್ಡಿದ್ದಾರೆ.

Follow Us:
Download App:
  • android
  • ios