Asianet Suvarna News Asianet Suvarna News

ಅಮಿತ್ ಶಾ ಕೊಡಲ್ಲ ಅಂದ್ರೂ ಮೀನಾಕ್ಷಿ ಲೇಖಿಗೆ ಟಿಕೆಟ್ ಸಿಕ್ಕಿದ್ದು ಹೇಗೆ?

ನವದೆಹಲಿಯಿಂದ ಬಿಜೆಪಿ ಅಭ್ಯರ್ಥಿ ಮೀನಾಕ್ಷಿ ಲೇಖಿ ಸ್ಪರ್ಧೆ |  ಅಮಿತ್ ಶಾ ಟಿಕಿಟ್ ಕೊಡಲು ನಿರಾಕರಿಸಿದರೂ ಮೀನಾಕ್ಷಿ ಲೇಖಿಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಏನಿದು ಕಥೆ? ಇಲ್ಲಿದೆ ಓದಿ.

How Meenakshi Lekhi gets ticket in Loksabha Elections 2019?
Author
Bengaluru, First Published Apr 30, 2019, 1:33 PM IST

ನವದೆಹಲಿ ಕ್ಷೇತ್ರದಿಂದ 5 ವರ್ಷ ಸಂಸದೆ ಆಗಿದ್ದ ಮೀನಾಕ್ಷಿ ಲೇಖಿಗೆ ಬಿಜೆಪಿ ಟಿಕೆಟ್‌ ಕೊಡೋದಿಲ್ಲ ಎಂದು ಅಮಿತ್‌ ಶಾ ಹೇಳಿಯೇ ಬಿಟ್ಟಿದ್ದರು.

ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗ್ತಾರಾ ಶೋಭಾ ಕರಂದ್ಲಾಜೆ?

ಅದಕ್ಕಾಗಿಯೇ ಗೌತಮ್‌ ಗಂಭೀರ್‌ ಕೂಡ ಬಂದಿದ್ದರು. ಆದರೆ ರಾಹುಲ್ ಗಾಂಧಿ ನೀಡಿದ ‘ಸುಪ್ರೀಂಕೋರ್ಟ್‌ ಹೇಳುತ್ತಿದೆ ಚೌಕಿದಾರ್‌ ಚೋರ್‌ ಹೈ’ ಎಂಬ ಹೇಳಿಕೆ ಲೇಖಿಗೆ ಜೀವದಾನ ನೀಡಿದೆ.

ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

ಈ ವಿವಾದದಲ್ಲಿ ರಾಹುಲ್ ವಿರುದ್ಧ ಲೇಖಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಕ್ಷಮೆ ಕೇಳಿದ್ದನ್ನೇ ಬಂಡವಾಳ ಮಾಡಿಕೊಂಡ ಲೇಖಿ, ಜೇಟ್ಲಿ ಅವರಿಂದ ಮೋದಿಗೆ ಡೈರೆಕ್ಟ್ ಲಿಂಕ್‌ ಹಚ್ಚಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಮೀನಾಕ್ಷಿ ಲೇಖಿ ಕಣಕ್ಕಿಳಿದಿದ್ದಾರೆ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್   ಕ್ಲಿಕ್ ಮಾಡಿ 

Follow Us:
Download App:
  • android
  • ios