Asianet Suvarna News Asianet Suvarna News

'ಸಮೀಕ್ಷೆ ಸರಿಯಿಲ್ಲ, ಮತದಾರರು ಭಯಬಿದ್ದು ಸುಳ್ಳು ಹೇಳಿದ್ದಾರೆ'

ಸಮೀಕ್ಷೆ ಸರಿಯಿಲ್ಲ, ಮತದಾರರು ಭಯಬಿದ್ದು ಸುಳ್ಳು ಹೇಳಿದ್ದಾರೆ| ಆಸ್ಟ್ರೇಲಿಯಾದಲ್ಲಿ ತಲೆ ಕೆಳಗಾಗಿದ್ದ 56 ಸಮೀಕ್ಷೆಗಳು| ಸರಿಯಾದ ಫಲಿತಾಂಶಕ್ಕಾಗಿ  ಮೇ 23ರವರೆಗೂ ಕಾಯಬೇಕು| ಕಾಂಗ್ರೆಸ್ ಹಿತರಿಯ ನಾಯಕನ ಟ್ವೀಟ್ ವೈರಲ್

Exit Polls Are All Wrong Says Shashi Tharoor Cites Australia Surprise
Author
Bangalore, First Published May 20, 2019, 1:23 PM IST

ನವದೆಹಲಿ[ಮೇ.20]: ದೇಶದಾದ್ಯಂತ ಮೇ 19ರ ಭಾನುವಾರ ಅಂತಿಮ ಹಂತದ ಚುನಾವಣೆ ನಡೆದಿದ್ದು, ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗೊಂಡಿವೆ. ಎಲ್ಲಾ ಸಮೀಕ್ಷೆಗಳಲ್ಲೂ NDA ಮೇಲುಗೈ ಸಾಧಿಸಿದೆ. ಆದರೆ ಪ್ರತಿಪಕ್ಷ ನಾಯಕರು ಮಾತ್ರ ಈ ವರದಿಗಳನ್ನು ತಳ್ಳಿ ಹಾಕಿವೆ. ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಚುನಾವಣೋತ್ತರ ಸಮೀಕ್ಷೆ ಸರಿ ಇಲ್ಲ ಎಂದಿದ್ದು, ಸರಿಯಾದ ಫಲಿತಾಂಶಕ್ಕಾಗಿ ಮೇ 23ರವೆರೆಗೂ ಕಾಯುವುದಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ತಲೆ ಕೆಳಗಾಗಿದ್ದ 56 ಸಮೀಕ್ಷೆಗಳು

ಈ ಕುರಿತಾಗಿ ಟ್ವೀಟ್ ಮಾಡಿರುವ ಕೈ ಮುಖಂಡ ಶಶಿ ತರೂರ್ 'ಎಲ್ಲಾ ಸಮೀಕ್ಷೆಗಳು ಸುಳ್ಳು ಎ.ದು ನಂಬಿದ್ದೇನೆ. ಆಸ್ಟ್ರೇಲಿಯಾದಲ್ಲಿ ಕಳೆದ ವಾರಾಂತ್ಯದಲ್ಲಿ ವಾರಾಂತ್ಯಾದಲ್ಲಿ ನಡೆದ 56 ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಿವೆ. ಭಾರತದಲ್ಲಿ ಅನೇಕ ಮಂದಿ ಮತದಾರರು ಸರ್ಕಾರದ ಭಯದಿಂದ ಸರಿಯಾದ ಫಲಿತಾಂಶ ನೀಡುವುದಿಲ್ಲ. ಸರಿಯಾದ ಫಲಿತಾಂಶಕ್ಕಾಗಿ  ಮೇ 23ರವರೆಗೂ ಕಾಯಬೇಕು' ಎಂದಿದ್ದಾರೆ.

ತರೂರ್ ಹೊರತುಪಡಿಸಿ ಅನೇಕ ಪ್ರತಿಪಕ್ಷಗಳ ನಾಯಕರು ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿವಿ ಸ್ವಿಚ್ ಆಫ್ ಮಾಡುವ ಸಮಯ ಬಂದಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮತ್ತೊಂದೆಡೆ, ಜನರ ನಾಡಿಮಿಡಿತ ಅರಿಯುವಲ್ಲಿ ಚುನಾವಣೋತ್ತರ ಸಮೀಕ್ಷೆಗಳು ವಿಫಲವಾಗಿವೆ. ಬಿಜೆಪಿಯೇತರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಚಂದ್ರಬಾಬು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios