Asianet Suvarna News Asianet Suvarna News

ಮಾಯಾ ರಣತಂತ್ರ: ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುವ ಹಿಂದಿದೆಯಾ 'PM ಕನಸು'?

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಮಾಯಾವತಿ| ನಿರ್ಧಾರದ ಬೆನ್ನಲ್ಲೇ ಮಾಡಿದ ಟ್ವೀಟ್ ನಿಂದ ನಿಡಿದ್ದಾರೆ ಮತ್ತೊಂದು ಸೂಚನೆ| ಸ್ಪರ್ಧೆಯಿಂದ ಹಿಂದೆ ಸರಿದ ಮಾಯಾ ಹೆಣೆಯುತ್ತಿದ್ದಾರಾ ರಣತಂತ್ರ?

Don t Lose Heart Mayawati Won t Contest But Hints She Can Still Be PM
Author
Bangalore, First Published Mar 21, 2019, 1:24 PM IST

ಲಕ್ನೋ[ಮಾ.21]: ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ತಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದಾರೆ. ಮೈತ್ರಿಯ ಗೆಲುವಿಗಗಿ ತಾನು ಹೀಗೆ ಮಾಡುತ್ತಿದ್ದೇನೆ. ತನ್ನ ಗೆಲುವಿಗಿಂತ ಮೈತ್ರಿಯ ಯಶಸ್ಸೇ ಮುಖ್ಯ ಎಂಬ ಸ್ಪಷ್ಟನೆಯನ್ನೂ ನೀಡಿದ್ದರು.

ಸುದ್ದಿಗೋಷ್ಟಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದ ಮಾಯಾವತಿ ತಾನು ಯಾವಾಗ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದು. ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಉತ್ತಮವಾಗಿದೆ. ಹೀಗಾಗಿ ತಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ ಮುಂದೆ ಅಗತ್ಯ ಬಿದ್ದರೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಬಲ್ಲೆ ಎಂದಿದ್ದರು. ಆದರೆ ಈ ಘೋಷಣೆ ಮಾಡಿದ ಕೆಲವೇ ಗಂಟೆಗಳ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಮಾಯಾ 'PM ಪ್ಲಾನ್'? ಕುರಿತಾಗಿ ಉಲ್ಲೇಖಿಸಿದ್ದಾರೆ.

ಹೌದು '1995ರಲ್ಲಿ ನಾನು ಉತ್ತರ ಪ್ರದೇಶದ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜದ್ಯ ಯಾವೊಂದು ಸದನದ ಸದಸ್ಯೆಯಾಗಿರಲಿಲ್ಲ. ಅದೇ ರೀತಿ ಕೇಂದ್ರದ ಪ್ರಧಾನಿ/ಸಚಿವರು 6 ತಿಂಗಳೊಳಗೆ ಲೋಕಸಭೆ/ರಾಜ್ಯಸಭೆಯ ಸದಸ್ಯರಾಗಬೇಕು. ಹೀಗಾಗಿ ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ನಿರ್ಧಾರದಿಂದ ಜನರು ನಿರಾಸೆ ವ್ಯಕ್ತಪಡಿಸುವುದು ಬೇಡ' ಎಂದಿದ್ದಾರೆ.

ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ BSP ನಾಯಕಿ ಮಾಯಾ!

ಮಾಯಾವತಿಯ ಈ ಟ್ವೀಟ್ ಬಳಿಕ ರಾಜಕೀಯ ವಲಯದಲ್ಲಿ ಅವರು ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರಾ? ಇದೇ ಕಾರಣದಿಂದ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರಾ? ಎಂಬ ಅನುಮಾನಗಳು ವ್ಯಕ್ತವಾಗಲಾರಂಭಿಸಿವೆ.
 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

Follow Us:
Download App:
  • android
  • ios