Asianet Suvarna News Asianet Suvarna News

ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಒಲಿದ 3 ರಾಜ್ಯಗಳು ಲೋಕಸಭೆಯಲ್ಲಿ ಬಿಜೆಪಿಗೆ!

ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಒಲಿದ 3 ರಾಜ್ಯಗಳು ಲೋಕಸಭೆಯಲ್ಲಿ ಬಿಜೆಪಿಗೆ!| ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಬಿಜೆಪಿ ಮೇಲುಗೈ| ವಿಧಾನಸಭೆಯಲ್ಲಿ ಸಾಧಿಸಿದ ಮುನ್ನಡೆ ಉಳಿಸಿಕೊಳ್ಳಲು ಕೈ ವಿಫಲ

Congress may fail to capitalise on gains in MP Rajasthan and Chhattisgarh predict exit polls
Author
Bangalore, First Published May 20, 2019, 8:01 AM IST

ನವದೆಹಲಿ[ಮೇ.20]: ಉತ್ತರಪ್ರದೇಶದಷ್ಟೇ ಈ ಬಾರಿ ಕುತೂಹಲ ಕೆರಳಿಸಿದ್ದ 3 ರಾಜ್ಯಗಳೆಂದರೆ ರಾಜಸ್ಥಾನ, ಛತ್ತೀಸಗಢ ಮತ್ತು ಮಧ್ಯಪ್ರದೇಶ. ಈ ಹಿಂದೆ ಈ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಜೊತೆಗೆ ಲೋಕಸಭೆಯಲ್ಲೂ ಪಕ್ಷ ಮುಂಚೂಣಿಯಲ್ಲಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿತ್ತು.

ಛತ್ತೀಸ್‌ಗಢದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದ್ದರೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಹುಮತದ ತೀರಾ ಸನಿಹಕ್ಕೆ ಬಂದು, ಇತರೆ ಸಣ್ಣಪಕ್ಷಗಳ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಇದೇ ಸಾಧನೆ ಮುಂದುವರೆಸಲಿದೆ ಎಂದೇ ಹೇಳಲಾಗಿತ್ತು. ಇದು ಬಿಜೆಪಿಗೆ ಭಾರೀ ಹೊಡೆತ ನೀಡಲಿದೆ ಎಂದೇ ಹೇಳಲಾಗಿತ್ತು. ಆದರೆ ಭಾನುವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳು, ಅಚ್ಚರಿ ಎಂಬಂತೆ ಬಿಜೆಪಿಗೆ ಮುನ್ನಡೆ ನೀಡಿವೆ.

ಛತ್ತೀಸ್‌ಗಢದ 10 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 4ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದು 10 ಸಮೀಕ್ಷೆಗಳು ಹೇಳಿವೆ. ಹೀಗಾಗಿ ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಬಿಜೆಪಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇಲ್ಲ.

ಇನ್ನು ಮಧ್ಯಪ್ರದೇಶದಲ್ಲಿ 29ರ ಪೈಕಿ 23 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ, ರಾಜಸ್ಥಾನದ 25ರ ಪೈಕಿ 22 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿವೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಹೆಚ್ಚೆಂದರೆ 13 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಅಂದರೆ 3 ರಾಜ್ಯಗಳ 65 ಸ್ಥಾನಗಳ ಪೈಕಿ ಕಳೆದ ಬಾರಿ ಬಿಜೆಪಿ 62 ಗೆದ್ದಿದ್ದರೆ, ಈ ಬಾರಿ ಅದು ಅಂದಾಜು 51 ಸ್ಥಾನ ಗೆಲ್ಲಲಿದೆ. ಅಂದರೆ ಕಳೆದ ಬಾರಿಗಿಂತ ಕೇವಲ 11 ಸ್ಥಾನ ಮಾತ್ರ ಕಳೆದುಕೊಳ್ಳಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios