Asianet Suvarna News Asianet Suvarna News

ಸಿದ್ದುಗೆ ಸಂವಿಧಾನವೇ ಗೊತ್ತಿಲ್ಲ, ಹೆಗಡೆ ಒಂದು ಸಾಲನ್ನೂ ಓದಿಲ್ಲ: ಬಿಜೆಪಿ ಅಭ್ಯರ್ಥಿ

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಮಾಜಿ ಸ್ನೇಹಿತ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

chamarajanagar bjp candidate v srinivas prasad slams siddaramaiah
Author
Bengaluru, First Published Apr 15, 2019, 5:45 PM IST

ಚಾಮರಾಜನಗರ [ ಏ. 15]  ಬಿಜೆಪಿಯವರು ಸಂವಿಧಾನ ಬದಲಾಯಿಸಿ ಬಿಡುತ್ತಾರೆ ಎಂದು ಆರೋಪ ಮಾಡುವ ಸಿದ್ದರಾಮಯ್ಯ ಅವರಿಗೆ ತಾವೊಬ್ಬ ವಕೀಲರಾಗಿದ್ದು ಸಂವಿಧಾನದ ಅರಿವು ಇಲ್ಲ ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

ಯಾವ ಪಕ್ಷ ಅಧಿಕಾರಕ್ಕೆ ಬಂದ್ರೂ ಬಲಿಷ್ಠವಾಗಿರುವ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಮುಟ್ಟಲು ಸ್ವತಃ ಸಂಸತ್ತಿಗೂ ಅಧಿಕಾರ ಇಲ್ಲ.  ಅದೇನು ಪಠ್ಯ ಪುಸ್ತಕವಲ್ಲ ಸಂವಿಧಾನವನ್ನು ತಿದ್ದುಪಡಿ ಮಾಡಬಹುದೇ ಹೊರತು ಬದಲಾವಣೆ ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ರಾಜಕೀಯ ದುರುದ್ದೇಶದಿಂದ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

‘ಡಿಕೆಶಿ-ಎಂ.ಬಿ. ಪಾಟೀಲ್ ಬೀದಿ ಕುಡುಕರು'

chamarajanagar bjp candidate v srinivas prasad slams siddaramaiah

ಭಾರತದ ಸಂವಿಧಾನ ಶ್ರೇಷ್ಠ ಗ್ರಂಥ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ. ಅನಂತಕುಮಾರ್ ಹೆಗಡೆ ಕ್ಷಮೆ ಕೇಳಿದ್ದಾರೆ. ಪಾಪ ಆತ ಸಂವಿಧಾನದ ಒಂದು ಸಾಲನ್ನೂ ಓದಿಲ್ಲ, ಉದ್ವೇಗದಿಂದ ಮಾತನಾಡಿದ್ದಾರೆ ಎಂದರು.

ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಅಪ್ಪ ಮಕ್ಕಳ ಪಕ್ಷ ಎಂದಿದ್ದರು. ದೇವೇಗೌಡರಿಗೆ ಅರಳೋ ಮರುಳೋ ಗೊತ್ತಿಲ್ಲ. ಸಿದ್ದರಾಮಯ್ಯನಿಗೆ ಅಸೂಯೆ ಜಾಸ್ತಿ ಎಂದಿದ್ದರು. ಈಗ  ದೋಸ್ತಿ ಪ್ರಚಾರ  ನಗೆಪಾಟಲಿಗೀಡಾಗಿದೆ. ದೋಸ್ತಿ ವರ್ಸಸ್ ಬಿಜೆಪಿ ಆಗಬೇಕಿತ್ತು ಆದರೆ  ದೋಸ್ತಿ ವರ್ಸ್ ದೋಸ್ತಿ ಕುಸ್ತಿ ಪ್ರಾರಂಭವಾಗಿದೆ.  ಮಂಡ್ಯ, ತುಮಕೂರು ಹಾಸನದಲ್ಲಿ ಏನು ನಡೆಯುತ್ತಿದೆ? ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

 

 

Follow Us:
Download App:
  • android
  • ios