Asianet Suvarna News Asianet Suvarna News

ಈ ಇಬ್ಬರು ಮಹಿಳೆಯರಿಂದ ಮತ್ತೆ ಪ್ರಧಾನಿಯಾಗ್ತಾರೆ ಮೋದಿ: ವೈರಲ್ ಆಯ್ತು ಟ್ವೀಟ್

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತೆ| ಇಬ್ಬರು ಮಹಿಳೆಯರೇ ಮೋದಿ ಪ್ರಧಾನಿಯಾಗಲು ಕಾರಣರಾಗ್ತಾರೆ| ವೈರಲ್ ಆಯ್ತು ಟ್ವೀಟ್

bollywood actor Kamaal Rashid Khan controversial statement on mayawati and mamata banerjee
Author
banga, First Published Apr 4, 2019, 4:33 PM IST

ನವದೆಹಲಿ[ಏ.04]: ಲೋಕಸಭಾ ಚುನಾವಣೆ 2019ಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಮುಂದಿನ ಸರ್ಕಾರ ರೂಪಿಸುವಲ್ಲಿ ಯಾರು ಮಹತ್ವದ ಪತ್ರ ನಿಭಾಯಿಸುತ್ತಾರೆ ಎಂಬ ವಿಚಾರವಾಗಿ ಎಲ್ಲರೂ ತಮ್ಮ  ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ ಹಾಗೂ ನಿರ್ಮಾಪಕ ಕಮಲ್ ರಶೀದ್ ಖಾನ್ ಕೂಡಾ ತಮ್ಮ ವಿಶ್ಲೇಷಣೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಶಾಲಿಯಾಗುತ್ತದೆ ಎಂದಿರುವ ಕಮಲ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿಯೇ ಇದಕ್ಕೆ ಕಾರಣಕರ್ತರಾಗಿರುತ್ತಾರೆ ಎಂದಿದ್ದಾರೆ. ಅತಿ ಹೆಚ್ಚು ಸ್ಥಾನ ಗಳಿಸಿ ಪ್ರಧಾನಿಯಾಗಬೇಕೆಂಬ ಕನಸು ಹೊತ್ತಿರುವ ಮಮತಾ ಬ್ಯಾನರ್ಜಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. BSP ನಾಯಕಿ ಮಾಯಾವತಿ ಕೂಡಾ ತಾನೇ ಪ್ರಧಾನಿಯಾಗಬೇಕೆಂಬ ಆಸೆಯಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಬಿಜೆಪಿ ಈ ಇಬ್ಬರು ಮಹಿಳೆಯರಿಂದ ಅತಿ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಯಾಕೆಂದರೆ ಇವರಿಬ್ಬರೂ ಮೋದಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಕಮಲ್ ಖಾನ್ ಈ ಹಿಂದೆಯೂ ಮಾಯಾವತಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡುತ್ತಾ ತಮ್ಮ ಸ್ವಾರ್ಥಕ್ಕಾಗಿ ಮಾಯಾವತಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಲ್ಲ ಎಂದು ಆರೋಪಿಸಿದ್ದರು. ಪ್ರಧಾನಿ ಮೋದಿ ವಿರುದ್ಧವಾಗಿಯೂ ಹಲವಾರು ಬಾರಿ ಟ್ವೀಟ್ ಮಾಡಿದ್ದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios