Asianet Suvarna News Asianet Suvarna News

2020-201ನೇ ಸಾಲಿನ ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಯಾವ-ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ನಡೆಯಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.

Karnataka 2nd PUC Board Exam Time Table 2020 released
Author
Bengaluru, First Published Nov 4, 2019, 5:47 PM IST

ಬೆಂಗಳೂರು, [ನ.04]:  2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫೈನಲ್ ವೇಳಾಪಟ್ಟಿ (Time Table)ಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಇಂದು [ಸೋಮವಾರ] ಕರ್ನಾಟಕ  ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. 

ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಹೀಗಿತ್ತು 

2020, ಮಾರ್ಚ್ 4ರಿಂದ ಮಾ, 23ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಗಳ ನಡುವೆ 3 ಭಾನುವಾರದ ರಜೆಗಳನ್ನು ಹೊರತುಪಡಿಸಿ ಬೇರಾವುದೇ ಸಾರ್ವತ್ರಿಕ ರಜೆಗಳು ಇಲ್ಲ.  

ಈ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಿರಂತರವಾಗಿ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು  ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

ಮೋದಿ ಮನೆ ಸ್ಥಳಾಂತರ ಗುಮಾನಿ, ಯಾದಗಿರಿ ಶಾಸಕ ಅಂದ್ರು ರಾಜೀನಾಮೆ ಕೊಡ್ತಿನಿ: ಇಂದಿನ ಟಾಪ್ 10 ಸುದ್ದಿ!

ಕಳೆದ ತಿಂಗಳು ಅಂದ್ರೆ ಅಕ್ಟೋಬರ್ 1ರಂದು ದ್ವಿತೀಯ ಪಿಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಬಗ್ಗೆ ಏನಾದರೂ ಆಪಕ್ಷೇಪಗಳು ಇದ್ದಲ್ಲಿ ತಿಳಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು. 

ಅಂತಿಮ ವೇಳಾಪಟ್ಟಿ ಇಂತಿದೆ
* ಮಾರ್ಚ್ 4- ಇತಿಹಾಸ, ಬೇಸಿಕ್ ಮ್ಯಾಥ್ಸ್, ಭೌತಶಾಸ್ತ್ರ.
* ಮಾರ್ಚ್ 5- ತೆಲಗು, ತಮಿಳು, ಮರಾಠಿ, ಮಲಯಾಳಂ, ಅರೇಬಿಕ್, ಫ್ರೆಂಚ್.
* ಮಾರ್ಚ್ 6- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
* ಮಾರ್ಚ್ 7- ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ
* ಮಾರ್ಚ್ 8- ರಜೆ (ಭಾನುವಾರ)
* ಮಾರ್ಚ್ 9- ಎನ್​ಎಸ್​ಕ್ಯೂಎಫ್-ಐಟಿ, ರಿಟೇಲ್, ಅಟೋಮೊಬೈಲ್, ಹೆಲ್ತ್​ಕೇರ್, ಬ್ಯೂಟಿ ಆಂಡ್ ವೆಲ್​ನೆಸ್
* ಮಾರ್ಚ್10- ಉರ್ದ
* ಮಾರ್ಚ್ 11- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
* ಮಾರ್ಚ್ 12 - ಭೂಗೋಳಶಾಸ್ತ್ರ
* ಮಾರ್ಚ್ 13 - ಶಿಕ್ಷಣ (Education)
* ಮಾರ್ಚ್ 14 - ಮನಶಾಸ್ತ್ರ, ಎಲೆಕ್ಟ್ರಆನಿಕ್ಸ್, ಕಂಪ್ಯೂಟರ್ ಸೈನ್ಸ್
* ಮಾರ್ಚ್ 15 - ರಜೆ (ಭಾನುವಾರ)
* ಮಾರ್ಚ್ 16- ಲಾಜಿಕ್, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
* ಮಾರ್ಚ್ 17- ಅರ್ಥಶಾಸ್ತ್ರ, ಜೀವಶಾಸ್ತ್ರ
* ಮಾರ್ಚ್ 18- ಹಿಂದಿ
* ಮಾರ್ಚ್ 19- ಕನ್ನಡ
* ಮಾರ್ಚ್ 20- ಸಂಸ್ಕೃತ
* ಮಾರ್ಚ್.21- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
* ಮಾರ್ಚ್ 22 ರಜೆ-ಭಾನುವಾರ
* ಮಾರ್ಚ್.23-ಆಂಗ್ಲಭಾಷೆ [English)

Follow Us:
Download App:
  • android
  • ios