Asianet Suvarna News Asianet Suvarna News

‘ಅನರ್ಹ ಶಾಸಕರು ಮಾಡಿದ ಕಾರ್ಯ ಇಡೀ ನಾಡನ್ನ ಕಾಪಾಡುವಂತದು’

ಅನರ್ಹ ಶಾಸಕರಿಗೆ ನಾವು ಎಷ್ಟು ಗೌರವ ಕೊಟ್ಟರು ಸಾಲದು| ಮಾಜಿ ಸಿಎಂ ಸಿದ್ದರಾಮಯ್ಯಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇಲ್ಲ| ಅವರಿಂದ ನಾವು ಹೇಳಿಸಿಕೊಳ್ಳಯವ ಅವಶ್ಯಕತೆ ಇಲ್ಲ| ವಿರೋಧ ‌ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು‌ ಈ ರೀತಿ ಆರೋಪ ಮಾಡಿತ್ತಿದ್ದಾರೆ|

Disqualified MLA's Saved our State: DCM Ashwath Narayan
Author
Bengaluru, First Published Nov 2, 2019, 2:52 PM IST

ಹುಬ್ಬಳ್ಳಿ[ನ.2]: ಇಂದು ನಗರದಲ್ಲಿ ನಡೆದ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಅನರ್ಹ ಶಾಸಕರ‌ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದು ಅವರದೇ ಧ್ವನಿ ಎನ್ನುವದು ಗೊತ್ತಿಲ್ಲ. ಯಾರೂ ರೆಕಾರ್ಡ್ ಮಾಡುವದು ತಪ್ಪು. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡಬಾರದು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು ‌ ಅದಕ್ಕೆ ‌ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಮಾಡಿದ ಕಾರ್ಯ ಇಡೀ ನಾಡನ್ನ ಕಾಪಾಡುವಂತದು. ಅವರಿಗೆ ನಾವು ಎಷ್ಟೇ ಮಾನ್ಯತೆ ಹಾಗೂ ಗೌರವ ಕೊಟ್ಟರು ಸಾಲದು. ಈಗ ಪ್ರಕರಣ ನ್ಯಾಯಾಲಯದಲ್ಲಿದೆ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ಅವರಿಂದ ನಾವು ಹೇಳಿಸಿಕೊಳ್ಳಯವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ತಮ್ಮ ಬೆನ್ನು ನೋಡಿಕೊಳ್ಳಲಿ. ಅವರ ಕಾಲದಲ್ಲಿ ಬರಗಾಲವಿತ್ತು. ಅವರು ಬರಗಾಲದ ಅಂಕಿ ಅಂಶ ಮೊದಲು ಕೊಡಲಿ, ಬರಗಾಲದ ಸಂದರ್ಭದಲ್ಲಿ ಅವರು ಪ್ರವಾಸವನ್ನೇ ಮಾಡಲಿಲ್ಲ. ವಿರೋಧ ‌ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು‌ ಈ ರೀತಿ ಆರೋಪ ಮಾಡಿತ್ತಿದ್ದಾರೆ ಎಂದು ಹೇಳಿದ್ದಾರೆ . 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಪಠ್ಯ ಪುಸ್ತಕದಿಂದ  ಟಿಪ್ಪುವನ್ನು ತಗೆದು ಹಾಕುವ ವಿಚಾರಕ್ಕೆ ಸಂಬಂಧ ಮಾತನಾಡಿದ ಅವರು,  ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ತಗೆಯುವ ಬದಲು ಅವರ ಮತಾಂಧತೆ, ಕ್ರೌರ್ಯ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು.  ಅದನ್ನು ಮಕ್ಕಳು ಓದಬೇಕು ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios