Asianet Suvarna News Asianet Suvarna News

ದಾವಣಗೆರೆ : 10 ವರ್ಷಗಳ ಬಳಿಕ ಸುರಿದ ಭಾರೀ ಮಳೆಗೆ ಹಲವು ಪ್ರದೇಶ ಜಲಾವೃತ

10 ವರ್ಷಗಳ ಬಳಿಕ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಇದರಿಂದ ಇಲ್ಲಿನ ಜನರಲ್ಲಿ ತೀವ್ರ ಆತಂಕ ಎದುರಾಗಿದೆ.

Heavy Rain Lashes in Davanagere Many Places Submerged
Author
Bengaluru, First Published Oct 11, 2019, 10:27 AM IST

ದಾವಣಗೆರೆ [ಅ.11]: ದಾವಣಗೆರೆ ಜಿಲ್ಲೆಯಲ್ಲಿ‌ ಗುರುವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ‌ಯು ಹಲವೆಡೆ ಅನಾಹುತ ಸೃಷ್ಟಿಸಿದೆ.

ದಾವಣಗೆರೆ ತಾಲ್ಲೂಕಿನ‌ ಹೆಬ್ಬಾಳು ಅಣಜಿ‌ ಮಾಯಕೊಂಡ ಸುತ್ತಮುತ್ತ ಕಳೆದ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. 

ಮೆಕ್ಕೆಜೋಳ , ಹತ್ತಿ ಸೇರಿದಂತೆ ಇತರ ಬೆಳೆಗಳಿರುವ ಹೊಲಗಳಿಗೆ‌ ನೀರು ನುಗ್ಗಿ ಜಲಾವೃತವಾಗಿವೆ. ಜಿಲ್ಲೆಯ ಹೆಬ್ಬಾಳು ಗ್ರಾಮದಲ್ಲಿ ಸುರಿದ ಮಳೆಗೆ ಶ್ರೀ ರುದ್ರೇಶ್ವರ ಪ್ರೌಢಶಾಲೆ ಆವರಣ ಸಂಪೂರ್ಣ ನೀರಿನಿಂದ ಮುಳುಗಿದೆ.   

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಮಾರು 10 ವರ್ಷಗಳ ನಂತರ ಇಲ್ಲಿ ಸುರಿದ ಭಾರಿ ಮಳೆಗೆ ಹೆಬ್ಬಾಳ ಗ್ರಾಮಸ್ಥರಲ್ಲಿ ಬೆಳೆ ಹಾನಿ ಭೀತಿ ಎದುರಾಗಿದೆ. ಇನ್ನು ಮಲೇಬೆನ್ನೂರು ಗ್ರಾಮದ ಬಳಿ  ಮನೆಯ ಗೋಡೆ ಕುಸಿದು ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಸರಿದ ಭಾರೀ ಮಳೆ ಪ್ರವಾಹವನ್ನು ಉಂಟು ಮಾಡಿದ್ದು, ಹಲವು ಸಾವು ನೋವುಗಳಿಗೆ ಕಾರಣವಾಗಿದ್ದು, ಸಾವಿರಾರು ಎಕರೆ  ಬೆಳೆ ಹಾನಿ ಉಂಟಾಗಿತ್ತು.

Follow Us:
Download App:
  • android
  • ios